ಮೊದಲ ಮದ್ವೆ ಬಗ್ಗೆ ಸುಳ್ಳು ಹೇಳಿದ್ರೆ ಪತಿಗೆ ಆಪತ್ತು
ನವದೆಹಲಿ, ಅ.20: ಮೊದಲ ಮದುವೆ ಬಗ್ಗೆ ಸತ್ಯ ಮುಚ್ಚಿಟ್ಟು ಎರಡನೇ ಬಾರಿಗೆ ಮದುವೆಯಾದರೆ ಅದು ಕಾನೂನು ಪ್ರಕಾರ ಅನ್ಯಾಯ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನ ಪ್ರಕಾರ ಎರಡನೇ ಪತ್ನಿ ಜೀವನಾಂಶ ಪಡೆಯಲು ಕೂಡಾ ಅರ್ಹರಾಗಿದ್ದು, "legally wedded wife" ಎಂದು ಹಿಂದೂ ಮದುವೆ ಹಕ್ಕು ಪ್ರಕಾರ ಪರಿಗಣಿಸಲಾಗುತ್ತದೆ ಎಂದಿದೆ.
ನ್ಯಾ ರಂಜನಾ ಪ್ರಕಾಶ್ ದೇಸಾಯಿ, ಎಕೆ ಶಿಕ್ರಿ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ಈ ಮುಂಚೆ ಎರಡನೇ ಪತ್ನಿ ಜೀವನಾಂಶ ಪಡೆಯಲು ಅರ್ಹರಲ್ಲ ಎನ್ನಲಾಗಿತ್ತು. ಆದರೆ, ಎರಡನೇ ಪತ್ನಿಗೆ ಸುಳ್ಳು ಹೇಳಿ ಸತ್ಯ ತಿಳಿದಂತೆ ಆಕೆಗೆ ಮೋಸ ಮಾಡಿದ್ದರೆ ಆಗ ಆಕೆ ಜೀವನಾಂಶ ಕೋರಬಹುದಾಗಿದೆ.

ಸಿಆರ್ ಪಿಸಿ ಸೆಕ್ಷನ್ 125 ಪ್ರಕಾರ ಜೀವನ ಸಾಗಿಸಲು ಆ ಮಹಿಳೆಗೆ ಪತಿ ಸಹಾಯಕನಾಗಿ ನಿಲ್ಲಲೇಬೇಕಾಗುತ್ತದೆ ಅಧವ್ ಹಾಗೂ ಸವಿತಾಬೇನ್ ಪ್ರಕರಣದ ತೀರ್ಪು ಎಲ್ಲಾ ಪ್ರಕರಣಗಳಿಗೂ ಆಧಾರವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. ಎರಡನೇ ಮದುವೆಯಾಗುವ ಮಹಿಳೆಗೆ ತನ್ನ ಪತಿ ಈ ಮೊದಲೇ ಮದುವೆಯಾಗಿದ್ದರ ಬಗ್ಗೆ ಅರಿವಿದ್ದರೆ ಮೇಲ್ಕಂಡ ಆದೇಶ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.












Click it and Unblock the Notifications