Mahindra: ಒಂದೇ ಗಂಟೆಯಲ್ಲಿ 50,000 ಕಾರುಗಳು ಬುಕ್ಕಿಂಗ್: ಕಾರಿನ ವಿಶೇಷತೆ, ಬೆಲೆ ತಿಳಿಯಿರಿ
ನವದೆಹಲಿ, ಮೇ 15: ಆಟೋಮೊಬೈಲ್ ಹಾಗೂ SUV ಕಾರು ಉತ್ಪಾದನೆಯಲ್ಲಿ ಪ್ರಸಿದ್ಧಿ ಪಡೆದಿರುವ ಮತ್ತು ಈ ಕ್ಷೇತ್ರದಲ್ಲಿ ತನ್ನದೇ ಆದ ಇತಿಹಾಸ ಹೊಂದಿರುವ 'ಮಹೀಂದ್ರಾ ಕಂಪನಿ'ಯು (Mahindra Car) ನೂತನ ಕಾರು ಬುಕ್ಕಿಂಗ್ ನಲ್ಲಿ ದಾಖಲೆ ಬರೆದಿದೆ.
ಹೌದು, ಮಹೀಂದ್ರಾ ಕಂಪನಿಯು ಇತ್ತೀಚೆಗೆ ಲಾಂಚ್ ಮಾಡಿರುವ XUV 3XO ಎಸ್‌ಯುವಿ ಕಾರಿನ ಬುಕ್ಕಿಂಗ್ ಅನ್ನು ಇಂದು ಮೇ 15ರ ಬುಧವಾರ ಬೆಳಗ್ಗೆ 10 ಗಂಟೆಗೆ ಆರಂಭಿಸಿದೆ. ಈ ಹೊಸ ವಿಶಿಷ್ಟ ಕಾರಿನ ಬುಕ್ಕಿಂಗ್ ಆರಂಭವಾದ 60 ನಿಮಿಷಗಳಲ್ಲಿ ಬರೋಬ್ಬರಿ 50000 ಬುಕ್ಕಿಂಗ್ ಆಗುವ ಮೂಲಕ ದಾಖಲೆ ಬರೆದಿದೆ.

ಈ ಕುರಿತು ಮಹೀಂದ್ರಾ ಕಂಪನಿಯೇ ಅಧಿಕೃತ ಮಾಹಿತಿ ನೀಡಿದ್ದು, ತಮ್ಮ ವಿನೂತನ XUV 3XO ಕಾರಿನ ಬುಕ್ಕಿಂಗ್/ರಿಜಿಸ್ಟ್ರೇಷನ್ ಆರಂಭಿಸುತ್ತಿದ್ದಂತೆ ನಾವು ಒಂದು ಗಂಟೆಯಲ್ಲೇ 50000 ಬುಕ್ಕಿಂಗ್‌ಗಳನ್ನು ಸ್ವೀಕರಿಸಿದ್ದೇವೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದೆ.
10 ನಿಮಿಷದಲ್ಲಿ 27000 ಬುಕ್ಕಿಂಗ್
ಬುಧವಾರ ಬೆಳಗ್ಗೆ ನೂತನ ಎಸ್‌ಯುವಿ XUV 3XO ಗಾಗಿ ಬುಕ್ಕಿಂಗ್ ಆರಂಭಿಸಿದ ಮಹೀಂದ್ರಾ ಕಂಪನಿಯು ಮೊದಲ ಹತ್ತು ನಿಮಿಷದಲ್ಲಿ ಬರೋಬ್ಬರಿ 27000 ಗ್ರಾಹಕರಿಂದ ಬುಕ್ಕಿಂಗ್ ಆರ್ಡರ್ ಅನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಆಟೋಮೊಬೈಲ್ ವಲಯದಲ್ಲಿ ಮಹೀಂದ್ರಾ ವಿನೂತನ ಕಾರು ಭಾರೀ ಸಂಚಲನವನ್ನೇ ಹುಟ್ಟು ಹಾಕಿದೆ.
ಈ ವಲಯದಲ್ಲಿ ಕೆಲವೇ ನಿಮಿಷಗಳಲ್ಲಿ ಅತ್ಯಧಿಕ ಬುಕ್ಕಿಂಗ್ ಪಡೆಯುವ ಮೂಲಕ ಮೈಲಿಗಲ್ಲು ಸಾಧಿಲಾಗಿದೆ ಎಂದು ಕಂಪನಿಯು ಹೇಳಿಕೊಂಡಿದೆ.
The Power of an Hour…#XUV3XO pic.twitter.com/E2mYZUmaA5
— anand mahindra (@anandmahindra) May 15, 2024
ಮೇ 26ರಿಂದ ಕಾರು ಮಾರಾಟ ಶುರು
ಮಹೀಂದ್ರಾ ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಎಸ್‌ಯುವಿ XUV 3XO ಕಾರಿನ ವಿತರಣೆಯನ್ನು ಇದೇ ತಿಂಗಳ ಮೇ 26ರಿಂದ ಆರಂಭಿಸಲಿದೆ. ಸದ್ಯ ಪ್ರಿ ಬುಕ್ಕಿಂಗ್ ಆರಂಭಿಸಿದೆ. ಮೂರು ರೀತಿಯ ಇಂಜಿನ್ ಆಕ್ಷನ್ ಹೊಂದಿರುವ ಈ ಕಾರು, ಡಿಸ್ಕ್ ಬ್ರೇಕ್, ಆಕರ್ಷಕ ಹೊರ ಮತ್ತು ಒಳವಿನ್ಯಾಸ ಹೊಂದಿದೆ. ಒಳಬದಿ ವಿಶಾಲವಾಗಿದ್ದು, ನೋಡಲು ಆಕರ್ಷಕವಾಗಿದೆ.
ಕಾರು ಎಲೆಕ್ಟ್ರಾನಿಕ್ ಸುಸ್ಥರತೆ ಹಾಗೂ ಅಗತ್ಯ ಸುರಕ್ಷತೆ ಗುಣಮಟ್ಟ ಕಾಯ್ದುಕೊಂಡಿದೆ ಎಂದು ಕಂಪನಿ ತಿಳಿಸಿದೆ. ಸೀಟ್ ಬೆಲ್ಟ್‌ಗೆ ಮೂರು ಪಾಯಿಂಟ್ ಹೊಂದಿದೆ. ಇದರಲ್ಲೂ ಸಹ ಸೂಚನಾ ವಿಶೇಷತೆಗಳು ಇವೆ. ಗ್ರಾಹಕರಿಗೆ ಕೈಗೆಟುವ ಬೆಲ್ಲೆಯಲ್ಲಿ ಗುಣಮಟ್ಟದ ಹಾಗೂ ಸುಂದರ ಕಾರು ನೀಡುವ ಉದ್ದೇಶದಿಂದ ಮಹೀಂದ್ರಾ ಈ ಕಾರನ್ನು ತಯಾರಿಸಿದೆ ಎಂದು ಈ ವಲಯದಲ್ಲಿ ಮಾತುಗಳು ಕೇಳಿ ಬಂದಿವೆ. ಸದ್ಯ ಬುಕ್ಕಿಂಗ್ ನಲ್ಲಿ ರೆಕಾರ್ಡ್ ಮಾಡಿರುವ ಮಹೀಂದ್ರಾ ಅವರ ಈ ನೂತನ ಕಾರು ಏರಲು ಭಾರತೀಯ ಉತ್ಸುಕರಾಗಿದ್ದಾರೆ.
ಕಾರು ಉತ್ಪಾದನೆಯಲ್ಲಿ ಭಾರತ ದೈತ್ಯ ಕಂಪನಿಯಾಗಿ ಈ ಮಹೀಂದ್ರಾ ಗುರುತಿಸಿಕೊಂಡಿದೆ. ಹೀಗಾಗಿಯೇ ಕಂಪನಿ ತಯಾರಿಸುವ ಕಾರಿನ ಮೇಲೆ ಹೆಚ್ಚು ನಿರೀಕ್ಷೆಗಳು ಇವೆ. ಅದರಲ್ಲೂ ಇಂದಿನ ಕಾಲದಲ್ಲಿ ಕಡಿಮೆ ಬೆಲೆಗೆ ಉತ್ಕೃಷ್ಟ ಗುಣಮಟ್ಟದ ಕಾರು ಸಿಗುತ್ತದೆ ಎಂದರೆ ಅದರ ಮೇಲಿನ ಆಸಕ್ತಿ ಇನ್ನೂ ಹೆಚ್ಚಿರುತ್ತದೆ. ಇಂಥದ್ಧೊಂದು ಕಾಯುವಿಕೆಗೆ ಇದೇ ತಿಂಗಳಲ್ಲಿ ಮಹೀಂದ್ರಾ ತನ್ನ XUV 3XO ಕಾರನ್ನು ವಿತರಣೆ ಮಾಡುವ ಮೂಲಕ ತೆರೆ ಎಳೆಯಲಿದೆ.
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ











Click it and Unblock the Notifications