ಇದೆಂಥ ಆಸ್ಪತ್ರೆ ನೋಡಿ, ರೋಗಿಯನ್ನು ಬೆಡ್ ಶೀಟ್ ನಲ್ಲೇ ಎಳೆದೊಯ್ದರು!

Recommended Video

      ಇದೆಂಥ ಆಸ್ಪತ್ರೆ ನೋಡಿ, ರೋಗಿಯನ್ನು ಬೆಡ್ ಶೀಟ್ ನಲ್ಲೇ ಎಳೆದೊಯ್ದರು!

      ನಾಂದೇಡ್, ಜೂನ್ 30: ಸ್ಟ್ರೆಚರ್ ಗಳಿಲ್ಲವೆಂದು ಆಸ್ಪತ್ರೆಯೊಂದರಲ್ಲಿ ರೋಗಿಯನ್ನು ಬೆಡ್ ಶೀಟ್ ನಲ್ಲಿ ಕೂರಿಸಿ ಎಳೆದುಕೊಂಡ ಹೋದ ಹೀನಾಯ ಘಟನೆ ಮಹಾರಷ್ಟ್ರದ ನಾಂದೇಡ್ ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

      ರೋಗಿಯನ್ನು ಆಕೆಯ ಸಂಬಂಧಿಗಳು ಬೆಡ್ ಶೀಟೊಂದರಲ್ಲಿ ಕೂರಿಸಿಕೊಂಡು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

      ಸರ್ಕಾರಿ ಆಸ್ಪತ್ರೆಗಳಲ್ಲಿ ಸಪುಲಭ್ಯವಿರುವುದಿಲ್ಲ, ನಿರ್ವಹಣೆ ಸರಿಯಾಗಿರುವುದಿಲ್ಲ, ವೈದ್ಯರ ಕೊರತೆ ಇತ್ಯಾದಿ ದೂರುಗಳು ಹೊಸತಲ್ಲ. ದಿನೇ ದಿನೇ ಗುಣಮಟ್ಟದಲ್ಲಿ ಸುಧಾರಣೆ ಕಂಡುಕೊಳ್ಳಬೇಕಾದ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂಥ ಘಟನೆಗಳು ನಡೆಯುತ್ತಿರುವು ಜನಸಾಮಾನ್ಯರಲ್ಲಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಬೇಸರ ಮೂಡಲು ಕಾರಣವಾಗಿದೆ.

      Maharashtra: Unavailability of stretchers, Relatives drag patient from bedsheet

      ದುಬಾರಿ ದುಡ್ಡು ಕೊಟ್ಟು ಖಾಸಗಿ ಆಸ್ಪತ್ರೆಗೆ ಹೋಗುವುದಕ್ಕೂ ಆಗದೆ, ಸೌಲಭ್ಯರಹಿತ ಸರ್ಕಾರಿ ಆಸ್ಪತ್ರೆಗೂ ಕಾಲಿಡುವ ಧೈರ್ಯವಿಲ್ಲದೆ ಜನಸಾಮಾನ್ಯ ಪರಿತಪಿಸುವಂತಾಗಿದೆ.

      ಮೆಗ್ಗಾನ್ ಆಸ್ಪತ್ರೆಯ ಘಟನೆ: ಇಬ್ಬರು ನರ್ಸ್ ಸೇರಿ ಮೂವರ ಅಮಾನತು

      ಸರಿಯಾಗಿ ಒಂದು ವರ್ಷದ ಹಿಂದೆ ಶಿವಮೊಗ್ಗದ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಸ್ಟ್ರೆಚ್ಚರ್ ನೀಡದ ಕಾರಣ ಮಹಿಳೆಯೊಬ್ಬರು ತನ್ನ ಅನಾರೋಗ್ಯ ಪೀಡಿತ ಪತಿಯ ಕಾಲು ಹಿಡಿದುಕೊಂಡು ನೆಲದ ಮೇಲೇ ಎಳೆದುಕೊಂಡು ಹೋದ ಘಟನೆ ನಡೆದಿತ್ತು. ಇದು ಸರ್ಕಾರಿ ಆಸ್ಪತ್ರೆಗಳ ದುರವಸ್ಥೆಗೆ ಕನ್ನಡಿ ಹಿಡಿದಿತ್ತು. ಇದೀಗ ಮತ್ತೆ ಇಂಥದೇ ಘಟನೆ ನಡೆದಿದ್ದು, ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಸುಧಾರಣೆಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವನ್ನು ಕೂಗಿ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+