ರುಚಿಕರ ಆಹಾರ ನೀಡದಿದ್ದಕ್ಕಾಗಿ ತಾಯಿಯನ್ನು ಕೊಂದ ಮಗ!
ಥಾಣೆ ನವೆಂಬರ್ 28: ರುಚಿಕರ ಆಹಾರ ಮಾಡಿ ಬಡಿಸಿಲ್ಲ ಎಂದು ಆರೋಪಿಸಿ ಮಗನೊಬ್ಬ ತಾಯಿಯನ್ನು ಕೊಂದ ವಿಕೃತ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಮಗ ತನಗೆ ರುಚಿಕರವಾದ ಆಹಾರವನ್ನು ನೀಡದಿದ್ದಕ್ಕಾಗಿ 55 ವರ್ಷದ ತಾಯಿಯೊಂದಿಗೆ ಜಗಳವಾಡಿದ್ದಾನೆ ಬಳಿಕ ಆಕೆಯನ್ನು ಕೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮುರ್ಬಾದ್ ತಾಲೂಕಿನ ವೇಲು ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ ಎಂದು ಥಾಣೆ ಗ್ರಾಮಾಂತರ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿ ತಿಳಿಸಿದ್ದಾರೆ. ಮನೆಯ ವಿಚಾರವಾಗಿ ಮಹಿಳೆ ಮತ್ತು ಆಕೆಯ ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಭಾನುವಾರ ವ್ಯಕ್ತಿ ತನ್ನ ತಾಯಿಯೊಂದಿಗೆ ಮತ್ತೆ ಜಗಳವಾಡಿದನು. ಅವಳು ರುಚಿಕರವಾದ ಆಹಾರವನ್ನು ಬೇಯಿಸಿ ಬಡಿಸಲಿಲ್ಲ ಎಂದು ದೂರಿ ಮತ್ತೆ ಜಗಳವಾಡಿದ್ದಾನೆ. ಕೋಪದ ಭರದಲ್ಲಿ ಆ ವ್ಯಕ್ತಿ ತನ್ನ ತಾಯಿಯ ಕುತ್ತಿಗೆಯ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ, ನಂತರ ಅವಳು ಕುಸಿದು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಕಪಕ್ಕದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯ ನಂತರ ಆರೋಪಿ ನಿದ್ರಾ ಮಾತ್ರೆಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದ್ದರು ಎನ್ನಲಾಗಿದೆ. ಆರೋಪಿಯನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದು, ಇನ್ನೂ ಬಂಧಿಸಲಾಗಿಲ್ಲ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications