ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ 2024: ಡೈಲಿಹಂಟ್‌ನಲ್ಲಿ ತ್ವರಿತ, ಟ್ರೆಂಡ್‌ ಅಪ್‌ಡೇಟ್‌ಗಳು

ಜಾರ್ಖಂಡ್‌ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಮತ ಎಣಿಕ ನವೆಂಬರ್ 23ರಂದು ನಡೆಯಲಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಜಾರ್ಖಂಡ್‌ನ 81 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ನವೆಂಬರ್ 13 ಮತ್ತು 20ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು.

Maharashtra Jharkhand Polls 2024 Dailyhunt Brings Lightning Fast Updates Trends And Insights

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ

ಮಹಾರಾಷ್ಟ್ರದ 288 ಸೀಟುಗಳಿಗೆ ಒಟ್ಟು 4,136 ಅಭ್ಯರ್ಥಿಗಳಿದ್ದಾರೆ. 2019ರ ಚುನಾವಣೆಗೆ ಹೋಲಿಕೆ ಮಾಡಿದರೆ ಶೇ 27.7ರಷ್ಟು ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಕಳೆದ ಚುನಾವಣೆಯಲ್ಲಿ 3,239 ಅಭ್ಯರ್ಥಿಗಳಿದ್ದರು.

2019ರಲ್ಲಿ ಕಾಂಗ್ರೆಸ್-ಎನ್‌ಸಿಪಿ, ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡಿದ್ದವು. ಆದರೆ 2024ರ ಚುನಾವಣಾ ಚಿತ್ರಣ ಸಂಪೂರ್ಣ ಬದಲಾಗಿದೆ. ಎರಡು ವರ್ಷಗಳಲ್ಲಿ ಎರಡು ಪಕ್ಷಗಳ ಬಂಡಾಯ ಇದಕ್ಕೆ ಕಾರಣವಾಗಿದೆ.

ಕಣದಲ್ಲಿರುವ ಪ್ರಮುಖ ಪಕ್ಷಗಳು

* ಬಿಜೆಪಿ
* ಕಾಂಗ್ರೆಸ್
* ಶಿವಸೇನೆ (ಏಕನಾಥ್ ಶಿಂಧೆ ಬಣ)
* ಶಿವಸೇನೆ (ಉದ್ಧವ್ ಠಾಕ್ರೆ ಬಣ)
* ಎನ್‌ಸಿಪಿ (ಅಜಿತ್ ಪವಾರ್ ಬಣ)
* ಎನ್‌ಸಿಪಿ (ಶರದ್ ಪವಾರ್ ಬಣ)

ಅಭ್ಯರ್ಥಿಗಳಲ್ಲಿ 2086 ಪಕ್ಷೇತರರು ಕಣದಲ್ಲಿದ್ದು, ಚುನಾವಣಾ ಚಿತ್ರಣದ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕೀಯದ ಮೇಲೆಯೂ ಪ್ರಭಾವ ಬೀರುವ ಲೆಕ್ಕಾಚಾರವಿದೆ.

ಜಾರ್ಖಂಡ್ ವಿಧಾನಸಭೆ ಚುನಾವಣೆ

ಜಾರ್ಖಂಡ್‌ನ 81 ಕ್ಷೇತ್ರಗಳ ಮತದಾನವನ್ನು ಎರಡು ಭಾಗವಾಗಿ ಮಾಡಲಾಗಿತ್ತು. ಮೊದಲ ಹಂತದಲ್ಲಿ 43 ಕ್ಷೇತ್ರದಲ್ಲಿ ಮತದಾನ ನವೆಂಬರ್ 13ರಂದು ನಡೆದಿದ್ದು, 73 ಮಹಿಳೆಯರು, ಒಬ್ಬರು ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ 683 ಅಭ್ಯರ್ಥಿಗಳು ಕಣದಲ್ಲಿದ್ದರು.

ಎರಡನೇ ಹಂತದಲ್ಲಿ ನವೆಂಬರ್ 20ರಂದು 38 ಕ್ಷೇತ್ರಗಳಿಗೆ ಮತದಾನ ನಡೆಯಿತು. 528 ಅಭ್ಯರ್ಥಿಗಳಿದ್ದರು. ಒಟ್ಟಾರೆ ಎರಡೂ ಹಂತಗಳು ಸೇರಿ 1,211 ಅಭ್ಯರ್ಥಿಗಳು ಕಣದಲ್ಲಿದ್ದರು.

ಡೈಲಿ ಹಂಟ್‌ನಲ್ಲಿ ಚುನಾವಣಾ ಸಮಗ್ರ ಫಲಿತಾಂಶ

* ವಿವರವಾದ ಪಕ್ಷ ಮತ್ತು ಅಭ್ಯರ್ಥಿಗಳ ಮಾಹಿತಿ: ಸಮಗ್ರ ಪರಿಚಯ, ಪಟ್ಟಿ
* ರಿಯಲ್ ಟೈಂ ಅಪ್‌ಡೇಟ್: ಚುನಾವಣೆಯ ತತ್‌ಕ್ಷಣದ ಮಾಹಿತಿ, ಹಂಚಿಕೊಳ್ಳುವ ಕಾರ್ಡ್‌ಗಳು
* ಪಕ್ಷಾತೀತವಾದ ವಿಶ್ಲೇಷಣೆ: ಪಕ್ಷಗಳ ತಂತ್ರ, ಮತದಾರರ ಟ್ರೆಂಡ್
* ಮಲ್ಟಿ ಮೀಡಿಯಾ ಅನುಭವ: ಲೈವ್ ವಿಡಿಯೋಗಳು, ವೈರಲ್ ಮೀಮ್ಸ್, ಕ್ವಿಜ್‌ ಮತ್ತು ಚುನಾವಣಾ ಸುದ್ದಿಗಳು

ಡೈಲಿ ಹಂಟ್‌ ಇವುಗಳನ್ನು ಕೊಡಲಿದೆ

* ಲೈವ್ ಫಲಿತಾಂಶ: ಸುಲಭವಾಗಿ ಓದುವಂತೆ ತತ್‌ಕ್ಷಣದ ಅಪ್‌ಡೇಟ್‌ಗಳು
* ಟ್ರೆಂಡ್ ವಿಶ್ಲೇಷಣೆ: ಕಳೆದ ಚುನಾವಣೆ ಫಲಿತಾಂಶ ಸೀಟು ಬದಲಾವಣೆ ಕುರಿತು ವಿವರವಾದ ಮಾಹಿತಿ ರಾಜ್ಯ ಮತ್ತು ಕ್ಷೇತ್ರವಾರು ಮಾಹಿತಿ.
* ಸಾಮಾಜಿಕ ಜಾಲತಾಣ ಪ್ರತಿಕ್ರಿಯೆ: ಟ್ವೀಟ್‌ನಲ್ಲಿ ನಡೆಯುವ ಟ್ರೆಂಡಿಂಗ್ ಚರ್ಚೆಗಳು

ಫಲಿತಾಂಶ ಘೋಷಣೆಯಾದ ತಕ್ಷಣ ಡೈಲಿಹಂಟ್ ಆಳವಾದ ವಿಶ್ಲೇಷಣೆ ಮಾಡಲಿದೆ. ಸುಲಭವಾದ ಚಿತ್ರಣವನ್ನು ಕಟ್ಟಿಕೊಡಲಿದೆ. ರಾಜಕೀಯ ತಜ್ಞರಿಂದ ಹಿಡಿದು ಸಾಮಾನ್ಯ ಜನರೂ ಸಹ ವಿವರ ನೀಡಲಿದ್ದಾರೆ. ಜಾರ್ಖಂಡ್ ಮತ್ತು ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗೆ ಡೈಲಿಹಂಟ್‌ ಫಾಲೋ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+