BREAKING: ಕರ್ನಾಟಕದ 3 ಕ್ಷೇತ್ರಗಳು ಸೇರಿ ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಸಾಧ್ಯತೆ
Assembly Election 2024: ಈಗಾಗಲೇ ಜಮ್ಮು-ಕಾಶ್ಮೀರಾ ಹಾಗೂ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಫಲಿತಾಂಶ ಕೂಡ ಹೊರಬಿದ್ದಿದೆ. ಇದೀಗ ಇಂದು (ಅಕ್ಟೋಬರ್ 15) ಮಧ್ಯಾಹ್ನ ಕರ್ನಾಟಕದ ಮೂರು ಕ್ಷೇತ್ರಗಳು ಸೇರಿದಂತೆ ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಚುನಾವಣೆ ದಿನಾಂಕ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ. ಹಾಗಾದರೆ ಎಷ್ಟು ಗಂಟೆಗೆ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚುನಾವಣಾ ಆಯೋಗವು ಇಂದು (ಅಕ್ಟೋಬರ್ 15) ಮಧ್ಯಾಹ್ನ 3:30ಕ್ಕೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು, ಈ ವೇಳೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಲ್ಲದೆ, ಜೊತೆಗೆ ಇದೇ ವೇಳೆ ಕರ್ನಾಟಕದ ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೂ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯೂ ಇದೆ. ಈ ಪ್ರಕಟಣೆಯು ನಾಮಪತ್ರ ಸಲ್ಲಿಕೆ, ಮತದಾನದ ದಿನಗಳು ಮತ್ತು ಫಲಿತಾಂಶಗಳ ಘೋಷಣೆ ಸೇರಿದಂತೆ ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳ ದಿನಾಂಕಗಳನ್ನು ವಿವರಿಸುವ ಸಾಧ್ಯತೆಯಿದೆ.
ಜಾರ್ಖಂಡ್ ಹಾಗೂ ಹರಿಯಾಣದಲ್ಲಿ ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತು. ಇನ್ನು ಇಂದು ದಿನಾಂಕ ಘೋಷಣೆಯಾಗು ಸಾಧ್ಯತೆಯಿದ್ದು, ಇದೀಗ ಎಲ್ಲರ ಕಣ್ಣು ಚುನಾವಣಾ ಆಯೋಗದ ಮೇಲಿದೆ.
ಈಗಾಗಲೇ ಜಮ್ಮು ಮತ್ತು ಕಾಶ್ಮಿರ ವಿಧಾನಸಭೆ ಚುನಾವಣೆಯ ಮೂರು ಹಂತಗಳಲ್ಲಿ ಮತದಾನವಾಗಿತ್ತು. ಮೊದಲ ಹಂತದಲ್ಲಿ ಶೇಕಡ 61.38ರಷ್ಟು, ಎರಡನೇ ಹಂತದಲ್ಲಿ 57.31 ರಷ್ಟು ಮತದಾನ ಆಗಿತ್ತು. ಅಕ್ಟೋಬರ್ 1ರಂದು ನಡೆದ ಮೂರನೇ ಹಂತದಲ್ಲಿ 69.69 ರಷ್ಟು ಮತದಾನವಾಗಿದೆ. ಸೆಪ್ಟೆಂಬರ್ 15, 18 ಹಾಗೂ ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು.
ಇನ್ನು ಅಕ್ಟೋಬರ್ 8ರಂದು ಮತ ಎಣಿಕೆ ಮುಕ್ತಾಯವಾಗಿದ್ದು, ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟಕ್ಕೆ 48 ಸೀಟ್‌ಗಳು ಸಿಕ್ಕಿದ್ದು, ಬಿಜೆಪಿಗೆ 29 ಸೀಟ್ ಗಳಿಸಿದೆ ಎಂದ ತಿಳಿದುಬಂದಿತ್ತು. ಹಾಗೆಯೇ ಅಂದೇ ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದೆ.












Click it and Unblock the Notifications