Maharashtra: ಟ್ರಕ್ ಹರಿದು 50 ಕುರಿಗಳು ಸ್ಥಳದಲ್ಲೇ ಸಾವು!
ಮಹಾರಾಷ್ಟ್ರ,ಜುಲೈ 12: ಮಹಾರಾಷ್ಟ್ರದ ಭಂಡಾರಾ-ನಾಗ್ಪುರ ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ವೇಗವಾಗಿ ಬಂದ ಟ್ರಕ್ ಹರಿದ ಪರಿಣಾಮ 50 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗ್ಪುರ ಜಿಲ್ಲೆಯ ಮೌಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಪೊಲೀಸರ ಪ್ರಕಾರ ಗುಜರಾತ್‌ನ ಕಚ್‌ನ ನಿವಾಸಿ ಗೋವಾ ರಬ್ಬಾನಿ (53) ಎಂಬುವವರು ಮುಂಜಾನೆ 3.15 ರ ಸುಮಾರಿಗೆ ಚಾಪೆಗಡಿ ಕುಹಿ ಪ್ರದೇಶದ ಕಡೆಗೆ ಕುರಿ ಹಿಂಡನ್ನು ತೆಗೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಕುರಿಗಳ ಮೇಲೆ ಹರಿದಿದೆ.

ಈ ದುರ್ಘಟನೆಯಲ್ಲಿ 50 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಕುರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅಪಘಾತ ಸಂಭವಿಸಿದ ಕೂಡಲೇ ಟ್ರಕ್ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ ಎಂದು ಕುರಿಗಳ ಮಾಲೀಕ ಹೇಳಿದ್ದಾರೆ. ಇನ್ನೂ ಈ ಅಪಘಾತದಿಂದಾಗಿ ಕುರುಬರಿಗೆ 5 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಕುರಿತು ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications