ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ, 11 ಮಂದಿ ಸಾವು
ನಾಗ್ಪುರ್, ಡಿಸೆಂಬರ್ 09: ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ
ಕೊರ್ಪಾನಾ-ವಾನಿ ರಸ್ತೆಯಲ್ಲಿ ಶನಿವಾರದಂದು ಸಂಭವಿಸಿದ ಈ ದುರ್ಘಟನೆಯಲ್ಲಿ ಮೃತರಾದವರ ಪೈಕಿ 7 ಮಂದಿ ಮಹಿಳೆಯರು ಇಬ್ಬರು ಅಪ್ರಾಪ್ತರಿದ್ದಾರೆ. ಟ್ರಕ್ ಹಾಗೂ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿದ್ದು, ವಾಹನಗಳು ನಜ್ಜುಗುಜ್ಜಾಗಿವೆ.

ವ್ಯಾನಿನಲ್ಲಿದ್ದ 14 ಮಂದಿ ಪ್ರಯಾಣಿಕರ ಪೈಕಿ ಚಾಲಕ, 3 ವರ್ಷದ ಮಗು, 7 ಮಂದಿ ಮಹಿಳೆಯರು ಸೇರಿದಂತೆ 10 ಮಂದಿ ಘಟನಾ ಸ್ಥಳದಲ್ಲೇ ಮೃತರಾಗಿದ್ದಾರೆ.
Chandrapur: 11 people dead, 4 critically injured, in a collision between two vehicles in Korpana area. #Maharashtra pic.twitter.com/RxAwBZSo86
— ANI (@ANI) December 8, 2018
ಈ ಅಪಘಾತದಲ್ಲಿ ಅದೃಷ್ಟವಶಾತ್ ಒಂದು ವರ್ಷದ ಮಗುವೊಂದು ಬದುಕುಳಿದಿದೆ. ಗಾಯಗೊಂಡ ಇತರೆ ಮೂವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಚಂದ್ರಾಪುರದ ಎಸ್ಪಿ ಹೇಳಿದ್ದಾರೆ.












Click it and Unblock the Notifications