Get Updates
Get notified of breaking news, exclusive insights, and must-see stories!

Maha shivratri 2023: ಬ್ಯಾಂಕ್‌ಗಳು ಮುಚ್ಚಿರುವ ಭಾರತದ ನಗರಗಳ ಪಟ್ಟಿ, ಇಲ್ಲಿದೆ ವಿವರ ಗಮನಿಸಿ

ಮಹಾಶಿವರಾತ್ರಿಯ ಪ್ರಯುಕ್ತ ಕೆಲವೊಂದು ದೇಶದ ಕೆಲವೊಂದು ನಗರಗಳಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ. ಬ್ಯಾಂಕ್‌ಗಳು ಮುಚ್ಚಲಾಗಿರುವ ರಾಜ್ಯಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ನವದೆಹಲಿ, ಫೆಬ್ರವರಿ, 18: ಬ್ಯಾಂಕ್ ರಜಾದಿನಗಳು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತವೆ. ಬ್ಯಾಂಕುಗಳು ಸಾಮಾನ್ಯವಾಗಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಪ್ರತಿ ಭಾನುವಾರದಂದು ಮುಚ್ಚಿರುತ್ತವೆ. ಹೆಚ್ಚುವರಿಯಾಗಿ ಹಬ್ಬ ಅಥವಾ ಇತರ ಯಾವುದೇ ಸಂದರ್ಭದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ. ಹಾಗೆಯೇ ಮಹಾಶಿವರಾತ್ರಿಯ ಪ್ರಯುಕ್ತ ಕೆಲವೊಂದು ರಾಜ್ಯಗಳಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ. ಬ್ಯಾಂಕ್‌ಗಳು ಮುಚ್ಚಲಾಗಿರುವ ರಾಜ್ಯಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ದೇಶಾದ್ಯಂತ ಮಹಾಶಿವರಾತ್ರಿ ಸಂಭ್ರಮ

ಮಹಾಶಿವರಾತ್ರಿಯು ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದ್ದು, ಶನಿವಾರ (ಫೆಬ್ರವರಿ 18) ದೇಶಾದ್ಯಾಂತ ಈ ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಗುತ್ತದೆ. ಆದ್ದರಿಂದ, ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಈ ದಿನಾಂಕದಂದು ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ. ಹಾಗಾದರೆ ಬ್ಯಾಂಕ್‌ಗಳು ಯಾವ ರಾಜ್ಯಗಳಲ್ಲಿ ಮುಚ್ಚಿವೆ ಹಾಗೂ ಯಾವ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬ್ಯಾಂಕ್‌ ಮುಚ್ಚಿರುವ ನಗರಗಳ ಪಟ್ಟಿ

ಗ್ರಾಹಕರು ಯಾವುದೇ ಬ್ಯಾಂಕಿಂಗ್-ಸಂಬಂಧಿತ ಕಾರ್ಯಗಳನ್ನು ಹೊಂದಿದ್ದರೆ ನಿಮ್ಮ ನಗರದಲ್ಲಿ ಬ್ಯಾಂಕುಗಳು ತೆರೆದಿರುತ್ತವೆ. ಅಥವಾ ಮುಚ್ಚಲ್ಪಡುತ್ತವೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ದೇಶದ ಪ್ರತಿಯೊಂದು ರಾಜ್ಯದಲ್ಲೂ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಹಾಗೆಯೇ ಉತ್ತರಾಖಂಡ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ, ಬಿಹಾರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

Maha shivratri 2023: List of Indian cities where banks will remain closed today

ಈ ಹಿನ್ನೆಲೆಯಲ್ಲಿ ಲಕ್ನೋ, ರಾಂಚಿ, ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಭೋಪಾಲ್, ಭುವನೇಶ್ವರ್, ಡೆಹ್ರಾಡೂನ್, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ಕಾನ್ಪುರ, ಕೊಚ್ಚಿ, ನಾಗ್ಪುರ, ರಾಯ್‌ಪುರ, ಶಿಮ್ಲಾ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿನ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಬ್ಯಾಂಕ್‌ಗಳು ಕಾರ್ಯನಿರ್ವಹಿಸುವ ನಗರಗಳ ಪಟ್ಟಿ

ಮತ್ತೊಂದೆಡೆ, ದೆಹಲಿ, ಗೋವಾ, ಬಿಹಾರ, ತ್ರಿಪುರ, ಮಿಜೋರಾಂ, ಚಂಡೀಗಢ, ತಮಿಳುನಾಡು, ಸಿಕ್ಕಿಂ, ಅಸ್ಸಾಂ, ಮಣಿಪುರ, ರಾಜಸ್ಥಾನ, ಬಂಗಾಳ ಮತ್ತು ಮೇಘಾಲಯ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯಾಚರಣೆಗಳು ಎಂದಿನಂತೆ ಮುಂದುವರಿಯಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

Maha shivratri 2023: List of Indian cities where banks will remain closed today

ಬ್ಯಾಂಕ್‌ ರಜೆ ದಿನಗಳ ಪಟ್ಟಿ ಇಲ್ಲಿದೆ

ಫೆಬ್ರವರಿ 2023 ರ ಬ್ಯಾಂಕ್ ರಜಾದಿನಗಳು ಈ ಕೆಳಗಿನಂತಿವೆ:

1. ಫೆಬ್ರವರಿ 19, 2023 - ಭಾನುವಾರದ ರಜೆ

2. ಫೆಬ್ರವರಿ 20, 2023 - ರಾಜ್ಯ ಸಂಸ್ಥಾಪನಾ ದಿನದಂದು ಮಿಜೋರಾಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

3. ಫೆಬ್ರವರಿ 21, 2023 - ಸಿಕ್ಕಿಂನಲ್ಲಿ ಲೋಸರ್ ದಿನದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

4. ಫೆಬ್ರವರಿ 25, 2023 - ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳಿಗೆ ರಜೆ

5. ಫೆಬ್ರವರಿ 26, 2023 - ಬ್ಯಾಂಕ್‌ಗಳಿಗೆ ಭಾನುವಾರದ ರಜೆ

ಬ್ಯಾಂಕ್ ರಜಾ ದಿನಗಳಲ್ಲಿಯೂ ಸಹ ಗ್ರಾಹಕರು ನೆಟ್ ಬ್ಯಾಂಕಿಂಗ್, ಎಟಿಎಂ ಮತ್ತು ಇತರ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ. ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣವನ್ನು ವರ್ಗಾಯಿಸಲು UPI ಅನ್ನು ಬಳಸಬಹುದು. ಮತ್ತು ವಹಿವಾಟು ನಡೆಸಲು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಸಹ ಬಳಸಬಹುದಾಗಿದೆ. ಈ ಪರ್ಯಾಯಗಳನ್ನು ಬಳಸುವ ಮೂಲಕ ಗ್ರಾಹಕರು ಬ್ಯಾಂಕ್‌ಗಳು ಮುಚ್ಚಿರುವ ದಿನಗಳಲ್ಲಿಯೂ ತಮ್ಮ ಹಣಕಾಸು ನಿರ್ವಹಣೆಯನ್ನು ಮುಂದುವರಿಸಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+