Madrasa: ಭಾರತ, ಪಾಕ್, ಬಾಂಗ್ಲಾದೇಶದಲ್ಲಿ ಮದರಸಾ ಬೇಡ; ಏಕರೂಪ ನಾಗರಿಕ ಸಂಹಿತೆ ಬೇಕು: ಬಾಂಗ್ಲಾ ಲೇಖಕಿ ತಸ್ಲಿಮಾ ನಸ್ರಿನ್!

Madrasa: ದೇಶದಲ್ಲಿ ಮದರಸಾ (Madrasa)ಗಳನ್ನು ನಿಷೇಧ ಮಾಡಬೇಕು ಎನ್ನುವ ಆಗ್ರಹ ಹೆಚ್ಚಾಗಿದೆ. ಕೆಲವರು ದೇಶದಲ್ಲಿ ಎಲ್ಲರಿಗೂ ಏಕರೂಪದ ಶಿಕ್ಷಣ ಸಿಗಬೇಕು ಹಾಗೂ ಮದರಸಾ ನಿಷೇಧವಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಮದರಸಾಗಳ ನಿಷೇಧಕ್ಕೆ ಒತ್ತಾಯಿಸಿದ್ದು, ಜಾತ್ಯತೀತ ಶಾಲೆಗಳನ್ನು ಪ್ರಾರಂಭಿಸಬೇಕು ಎಂದಿದ್ದಾರೆ. ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಭಾರತವು ಸೇರಿದಂತೆ ಎಲ್ಲ ಭಾಗಗಳಲ್ಲೂ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಬೇಕೆಂದು ಕರೆ ನೀಡಿದ್ದು, ಮಹಿಳೆಯರನ್ನು ತಾರತಮ್ಯದಿಂದ ರಕ್ಷಿಸಲು ಇದು ಅಗತ್ಯವಿದೆ ಎಂದು ವಾದಿಸಿದ್ದಾರೆ.

"ಏಕರೂಪ ನಾಗರಿಕ ಸಂಹಿತೆ ಅತ್ಯಗತ್ಯವಾಗಿದೆ. ಯಾವುದೇ ನಾಗರಿಕ ಸಮಾಜಕ್ಕೆ ಇದು ಮೊದಲ ಹೆಜ್ಜೆ" ಎಂದು ಕೋಲ್ಕತ್ತಾದಲ್ಲಿ ನಡೆದ ಪತ್ರಕರ್ತರೊಂದಿಗೆ ಸಂವಾದದಲ್ಲಿ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಅವರು ಹೇಳಿದ್ದಾರೆ. ಬಂಗಾಳಿ ಬರಹಗಾರ್ತಿ ಆಗಿರುವ ತಸ್ಲಿಮಾ ಅವರು ಕಳೆದ 40 ವರ್ಷಗಳಿಂದ ಯುಸಿಸಿಗಾಗಿ ಹೋರಾಡುತ್ತಿರುವುದಾಗಿ ಹೇಳಿದ್ದಾರೆ.

Madrasa

ಮಹಿಳೆಯರು ಧಾರ್ಮಿಕ ಕಾನೂನುಗಳ ವ್ಯಾಪ್ತಿಯಲ್ಲಿ ಇದ್ದರೆ, ಅವರಿಗೆ ತಾರತಮ್ಯ ಮತ್ತು ಕಿರುಕುಳ ಎದುರಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಎಲ್ಲ ನಾಗರಿಕರಿಗೂ ಒಂದೇ ರೀತಿಯ ನಾಗರಿಕ ಕಾನೂನು (ಏಕರೂಪ ನಾಗರಿಕ ಸಂಹಿತೆ) ಜಾರಿ ಆಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿತ್ತಾದರೂ, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ದೇಶದಾದ್ಯಂತ ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಹಾಗೂ ವಿರೋಧದ ಕಾರಣಕ್ಕೆ ಈ ಮಸೂದೆಗಳನ್ನು ಕೇಂದ್ರ ಸರ್ಕಾರ ಮಂಡಿಸಲಿಲ್ಲ.

ಇದೀಗ ಈ ವಿಚಾರ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಅವರು, ಧಾರ್ಮಿಕ ಕಾನೂನುಗಳಿಂದಾಗಿ ಮಹಿಳೆಯರು ಬಳಲುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಹಿಂಸಿಸಲಾಗುತ್ತಿದೆ. ಯೂನಸ್ ಆಳ್ವಿಕೆಯ ಅವಧಿಯಲ್ಲಿ ಹಿಂದೂಗಳಿಗೆ ಇನ್ನಷ್ಟು ಹಿಂಸೆ ನೀಡಲಾಗುತ್ತಿತ್ತು. ಅನೇಕ ಮದರಸಾಗಳು ಮತ್ತು ಮಸೀದಿಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷವನ್ನು ಕಲಿಸಲಾಗುತ್ತಿದೆ. ಈಗ ನಮ್ಮಲ್ಲಿ ವಿರೋಧ ಪಕ್ಷವಾಗಿ ಜಮಾತೆ-ಇ-ಇಸ್ಲಾಮಿ ಇದೆ. ಇದು ಮಹಿಳಾ ಸಮಾನತೆಗೆ ವಿರುದ್ಧವಾಗಿದೆ ಮತ್ತು ಅವರು ಶರಿಯಾ ಆಡಳಿತವನ್ನು ಬಯಸುತ್ತಿದೆ ಎಂದಿದ್ದಾರೆ.

ಮುಂದುವರಿದು ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದಲ್ಲಿ ಯುಸಿಸಿಯನ್ನು ಜಾರಿಗೆ ತರುವ ಯೋಜನೆಯನ್ನು ಘೋಷಿಸಿದ್ದು ಮತ್ತು ಯುಸಿಸಿ ಕರಡು ಮಸೂದೆಯ ನಿಬಂಧನೆಗಳನ್ನು ಪರಿಶೀಲಿಸಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿರುವ ಸಮಯದಲ್ಲಿಯೇ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್ ಅವರು ಈ ಹೇಳಿಕೆ ಕೊಟ್ಟಿದ್ದಾರೆ.

ಎಡರಂಗ (Left Front)ಸರ್ಕಾರದ ಅವಧಿಯಲ್ಲಿ ಅವರ ಬರಹಗಳಿಂದ ಅಸಮಾಧಾನಗೊಂಡ ಗುಂಪೊಂದರ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ತಸ್ಲಿಮಾ ನಸ್ರಿನ್ ಅವರು ನಗರವನ್ನು ತೊರೆಯಬೇಕಾಯಿತು. ಸುಮಾರು 19 ವರ್ಷಗಳ ನಂತರ ನಸ್ರೀನ್ ಜುಲೈ 31 ರಂದು ಕೋಲ್ಕತ್ತಾಗೆ ಬಂದಿದ್ದಾರೆ. ಇದಕ್ಕೂ ಮೊದಲು, ಅವರನ್ನು 1994 ರಲ್ಲಿ ಬಾಂಗ್ಲಾದೇಶದಿಂದ ಗಡಿಪಾರು ಮಾಡಲಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಈ ಮೂಲಕ ಅವರು ಪಶ್ಚಿಮ ಬಂಗಾಳದ ಕೊಲ್ಕತ್ತಾಗೆ ಹಿಂದಿರುಗುವುದಕ್ಕೆ ಸಾಧ್ಯವಾಯಿತು. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿರುವ ಅವರು ವಿವಿಧ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ರಾಜ್ಯದ ವಿವಿಧ ಸರ್ಕಾರಗಳ ಬಗ್ಗೆ ಅವರ ಅಭಿಪ್ರಾಯ ಕೇಳಿದಾಗ, ತಸ್ಲಿಮಾ ನಸ್ರಿನ್ ಅವರು, ಒಂದು ಸರ್ಕಾರ ನನ್ನನ್ನು ಬಲವಂತವಾಗಿ ಹೊರಹಾಕಿತು, ಇನ್ನೊಂದು ಸರ್ಕಾರ ನನ್ನನ್ನು ಹಿಂತಿರುಗಲು ಬಿಡಲಿಲ್ಲ ಮತ್ತು ಈಗ ಇರುವ ಸರ್ಕಾರ ನನಗೆ ಹಿಂತಿರುಗಲು ಸಹಾಯ ಮಾಡಿದೆ" ಎಂದಿದ್ದಾರೆ.

Madrasa: ಧಾರ್ಮಿಕ ಆಧಾರಿತ ಶಾಲೆಗಳ ವಿರುದ್ಧ ವಿರೋಧ

ಇನ್ನು ಧಾರ್ಮಿಕ ಆಧಾರಿತ ಶಾಲೆಗಳ ವಿರುದ್ಧ ತಸ್ಲಿಮಾ ನಸ್ರಿನ್ ಅವರು ಆಕ್ರೋಶ ವ್ಯಕ್ತವಾಗಿದೆ. ನಸ್ರೀನ್ ಸಹ ಮದರಸಾಗಳ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಧಾರ್ಮಿಕ ಶಾಲೆಗಳು ಜಿಹಾದಿಗಳು ಸೃಷ್ಟಿಯಾಗುವುದಕ್ಕೆ ಅಥವಾ ಜಿಹಾದಿಗಳಾಗಿ ಬದಲಾಗುವುದಕ್ಕೆ ಕಾರಣವಾಗುತ್ತಿವೆ. ನನ್ನ ಅಭಿಪ್ರಾಯದಲ್ಲಿ, ಮದರಸಾಗಳು ಅಸ್ತಿತ್ವದಲ್ಲಿರಬಾರದು.

ಎಲ್ಲಾ ಸಂದರ್ಭಗಳಲ್ಲಿ ಅಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ, ಮದರಸಾಗಳಲ್ಲಿ ಜಿಹಾದಿಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಕಂಡು ಬರುತ್ತಿವೆ ಎಂದಿದ್ದಾರೆ. ಮದರಸಾಗಳಿಂದ ಹೊರಬಂದ ನಂತರ ಯಾರೂ ಏನನ್ನೂ ಮಾಡುವುದಿಲ್ಲ. ಅವರು ಭಿಕ್ಷೆ ಬೇಡುತ್ತಾರೆ, ಬೇರೆಯವರ ಸಹಾಯದಿಂದ ಬದುಕುತ್ತಾರೆ. ಹೀಗಾಗಿ, ಜಾತ್ಯತೀತ ಶಾಲೆಗಳು ಬೇಕಾಗಿವೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+