ನಾಲ್ವರು ಕಾಮಪಿಪಾಸುಗಳಿಂದ ಬಾಲಕಿ ಮೇಲೆ ನಾಲ್ಕು ದಿನ ಅತ್ಯಾಚಾರ

ಭೋಪಾಲ, ಜುಲೈ 23: ಅಪ್ರಾಪ್ತ ವಯಸ್ಕಳ ಮೇಲೆ ಮೂರು ಪ್ರತ್ಯೇಕ ಸಂದರ್ಭಗಳಲ್ಲಿ ನಾಲ್ವರು ಕಾಮುಕರು ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಮಧ್ಯಪ್ರದೇಶದ ದೆವಾಸ್ ನಗರದಲ್ಲಿ ನಡೆದಿದೆ.

ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿ ನಾಲ್ಕು ದಿನಗಳಲ್ಲಿ ಮೂರು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಜುಲೈ 16ರಂದು ಶಾಲೆ ಬಿಟ್ಟು ಓಡಿ ಬಂದಿದ್ದ ಬಾಲಕಿ ಮನೆಗೆ ಮರಳಲು ಬಸ್‌ ಒಂದನ್ನು ಹತ್ತಿದ್ದಳು. ಆದರೆ, ಬಸ್‌ನ ಕಂಡಕ್ಟರ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.

madhya pradesh minor rape 4 days in 4 separate occasions

ಬಾಲಕಿಯನ್ನು ಆಕೆಯ ಮನೆಯ ಸಮೀಪ ಬಸ್‌ನಿಂದ ಇಳಿಸಿದ ಬಳಿಕ ಬೈಕ್‌ನಲ್ಲಿ ಬಂದ ಬಾಲಕರು ಆಕೆಯನ್ನು ತಮ್ಮ ಗ್ರಾಮಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದರು.

ಆ ಗ್ರಾಮದಿಂದ ಮನೆಗೆ ಮರಳುತ್ತಿದ್ದ ಆಕೆಯನ್ನು ಮನೆಗೆ ಡ್ರಾಪ್ ನೀಡುವುದಾಗಿ ನಂಬಿಸಿದ ಬೈಕ್‌ ಸವಾರನೊಬ್ಬ ಆಕೆಯ ಮೇಲೆ ಪುನಃ ಅತ್ಯಾಚಾರ ಎಸಗಿದ್ದ.

ಬಾಲಕಿ ಕಣ್ಮರೆಯಾದ ಮರುದಿನ ಜುಲೈ 17ರಂದು ಆಕೆಯ ಕುಟುಂಬದವರು ನೇಮಾವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಆಕೆಯ ಪತ್ತೆಗೆ ಹುಡುಕಾಟ ನಡೆಸಲಾಗಿತ್ತು.

ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ಮೂಕ ಬಾಲಕಿ ಮೇಲೆ ಅತ್ಯಾಚಾರ

ಮೂಕ ಹಾಗೂ ಕಿವಿ ಕೇಳದ ಬಾಲಕಿ ಮೇಲೆ ಮಧ್ಯಪ್ರದೇಶದ ಬುಧ್ನಿ ತಾಲ್ಲೂಕಿನಲ್ಲಿ ಅತ್ಯಾಚಾರ ಎಸಗಲಾಗಿದೆ.

ಮಚ್ವಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೆಲವೇ ಗಂಟೆಗಳಲ್ಲಿ ಆರೋಪಿ ಶಲೈಂದ್ರ ಚೌಹಾಣ್‌ನನ್ನು (26) ಬಂಧಿಸಲಾಗಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರತಿನಿಧಿಸುವ ಬುಧ್ನಿ ವಿಧಾನಸಭೆ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.

ಬಾಲಕಿಗೆ ಆಮಿಷವೊಡ್ಡಿ ಕರೆದುಕೊಂಡು ಹೋದ ಯುವಕ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.

ಮನೆಗೆ ಮರಳಿದ ಬಾಲಕಿ ಸಂಜ್ಞಾ ಭಾಷೆಯ ಮೂಲಕ ನಡೆದ ಘಟನೆಯನ್ನು ಪೋಷಕರಿಗೆ ವಿವರಿಸಿದ್ದಾಳೆ. ಬಳಿಕ ಪೊಲೀಸರು ಶಹಗಂಜ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಮಧ್ಯಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನವರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಸಾಗರ ಎಂಬಲ್ಲಿ ಬಾಲಕಿ ಮೇಲೆ ಕಳೆದ ಶುಕ್ರವಾರ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಇದರಿಂದ ನೊಂದಿದ್ದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+