ಮಗುವಿನ ಮೇಲೆ ಕಾರು ಹರಿಸಿದ ವ್ಯಕ್ತಿಯನ್ನು ಹೊಡೆದು ಕೊಂದ ಜನರು!
ಲುಧಿಯಾನಾ, ನವೆಂಬರ್ 24: ಪುಟ್ಟ ಮಗುವಿನ ಮೇಲೆ ಕಾರು ಹರಿಸಿದ ಎಂದು ವ್ಯಕ್ತಿಯೊಬ್ಬರನ್ನು ಸಾರ್ವಜನಿಕರು ಥಳಿಸಿ ಕೊಂದಹಾಕಿದ ಭೀಕರ ಘಟನೆ ಪಂಜಾಬಿನ ಲುಧಿಯಾನದಲ್ಲಿ ನಡೆದಿದೆ.
ಸಂಜಿತ್ ಎಂಬ 45 ವರ್ಷದ ವ್ಯಕ್ತಿ ತಮ್ಮ ಮಗಳ ಮದುವೆಯ ಆಮಂತ್ರಣವನ್ನು ಸಂಬಂಧಿಕರಿಗೆ ನೀಡಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಇವರ ಕಾರಿಗೆ ಅಡ್ಡ ಬಂದು ಮಗುವೊಂದು ಅಸುನೀಗಿತ್ತು.

ಅದನ್ನು ನೋಡಿದ ಸಾರ್ವಜನಿಕರು ಆತನನ್ನು ಚೆನ್ನಾಗಿ ಥಳಿಸಿ, ಆತ ಪ್ರಜ್ಞಾಹೀನನಾದಾಗ ಆತನನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ವೈದ್ಯರು, ಆತ ಈಗಾಗಲೇ ಮೃತಪಟ್ಟಿದ್ದಾನೆಂದು ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications