LPG: ಗ್ಯಾಸ್ ಸಬ್ಸಿಡಿ ಪರಿಶೀಲಿಸಲು ಹೋದ ಬಡ ಮಹಿಳೆ ಅಕೌಂಟ್‌ಗೆ ಬರೋಬ್ಬರಿ 99 ಕೋಟಿ ಜಮಾ

LPG Subsidy: ದೇಶದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್ ಪಡೆದ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಇದೀಗ ಮಹಿಳೆಯೊಬ್ಬರು ಸಬ್ಸಿಡಿ ಹಣವನ್ನು ಚೆಕ್ ಮಾಡಿಸಲು ಬ್ಯಾಂಕ್‌ಗೆ ತೆರಳಿದ್ದು, ಈ ವೇಳೆ ಅವರ ಖಾತೆಗೆ ಬರೋಬ್ಬರಿ 99,99,99,997 ರೂಪಾಯಿ ಜಮೆ ಆಗಿತ್ತು. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಎಲ್‌ಪಿಜಿ ಸಬ್ಸಿಡಿ ಎಂದರೆ ಅಡುಗೆ ಅನಿಲ ಗ್ಯಾಸ್ ಸಿಲಿಂಡರ್ ಖರೀದಿಸುವ ಅರ್ಹ ಕುಟುಂಬಗಳಿಗೆ ಕೇಂದ್ರ ಸರ್ಕಾರ ನೀಡುವ ಆರ್ಥಿಕ ನೆರವಾಗಿದೆ. ದೇಶದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳು ಮೊದಲು ಸಿಲಿಂಡರ್‌ನ ಸಂಪೂರ್ಣ ಬೆಲೆಯನ್ನು ಪಾವತಿ ಮಾಡುತ್ತಾರೆ. ಬಳಿಕ ಸರ್ಕಾರ ನಿಗದಿಪಡಿಸಿದ ಸಬ್ಸಿಡಿ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಇದೀಗ ಮಹಿಳೆಯೊಬ್ಬರ ಬ್ಯಾಂಕ್‌ ಖಾತೆಗೆ 100 ಕೋಟಿಗೆ 3 ರೂಪಾಯಿ ಕಡಿಮೆ ಲೆಕ್ಕದಲ್ಲಿ ಹಣ ಜಮೆಯಾದ ಆಶ್ಚರ್ಯಕರ ಘಟನೆಯೊಂದು ಬೆಳಕಿಗೆ ಬಂದಿದೆ.

LPG Woman Finds Rs 99 99 99 997 in Bank Account While Checking Subsidy Bank Freezes Account

99,99,99,997 ರೂಪಾಯಿ ಜಮಾ

ಮಹಿಳೆಯೊಬ್ಬರು ತಮ್ಮ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ಹಣ ಖಾತೆಗೆ ಜಮೆಯಾಗಿದೆಯೇ ಎಂದು ಪರಿಶೀಲಿಸಲು ಬ್ಯಾಂಕ್‌ಗೆ ತೆರಳಿದ್ದರು. ಈ ವೇಳೆ ಅವರ ಬ್ಯಾಂಕ್ ಖಾತೆಯಲ್ಲಿ ಬರೊಬ್ಬರಿ ₹99,99,99,997 (100 ಕೋಟಿಗೆ ಕೇವಲ 3 ರೂಪಾಯಿ ಕಡಿಮೆ) ಜಮೆಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಇದನ್ನು ಕಂಡ ಆ ಮಹಿಳೆ ಆಶ್ಚರ್ಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ಕಾಶ್ಮೀರಾ ಅವರ ಹಿನ್ನೆಲೆ ಏನು?

ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ ಕುಲ್ತಲಿ ತಾಲೂಕಿನ ಕೀರ್ತನ್‌ಖೋಲಾ ಗ್ರಾಮದ ನಿವಾಸಿ 36 ವರ್ಷದ ಕಾಶ್ಮೀರಾ ಶೇಖ್ ಎಂಬ ಮಹಿಳೆಯ ಖಾತೆಗೆ ಇಷ್ಟೊಂದು ಹಣ ಜಮೆಯಾಗಿದ್ದು. ಇನ್ನು ಇವರು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು, ಪತಿ ಬ್ಯಾಗ್ ಹೊಲೆಯುವ ಕೆಲಸ ಮಾಡುತ್ತಾರೆ. ಕುಟುಂಬದ ಜವಾಬ್ದಾರಿ ಹೊತ್ತಿರುವ ಕಾಶ್ಮೀರಾ ಅವರು ಮನೆಯಲ್ಲೇ ಕಸೂತಿ ಕೆಲಸ ಮಾಡಿ ಸಣ್ಣ ಆದಾಯವನ್ನು ಗಳಿಸುತ್ತಿದ್ದರು.

ಇದೀಗ ಅವರು ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ಹಣ ಖಾತೆಗೆ ಬಂದಿದೆಯೇ ಎಂದು ತಿಳಿಯಲು ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಕುಲ್ತಲಿ ಜಾಮ್‌ತಲಾ ಶಾಖೆಗೆ ತೆರಳಿದ್ದರು. ಬ್ಯಾಂಕ್ ಸಿಬ್ಬಂದಿ ಖಾತೆಯ ವಿವರ ಪರಿಶೀಲನೆ ಮಾಡಿದಾಗ ಅವರ ಖಾತೆಗೆ ಅಂದಾಜು 100 ಕೋಟಿ ರೂಪಾಯಿ ಕ್ರೆಡಿಟ್ ಆಗಿರುವುದು ಬೆಳಕಿಗೆ ಬಂದಿದೆ.

ಮಹಿಳೆಯ ಬ್ಯಾಂಕ್ ಖಾತೆ ಫ್ರೀಜ್

ಈ ಬೃಹತ್ ಮೊತ್ತದ ವರ್ಗಾವಣೆ ಕಂಡು ಶಾಕ್ ಆದ ಬ್ಯಾಂಕ್ ಅಧಿಕಾರಿಗಳು, ತನಿಖೆ ಮುಗಿಯುವವರೆಗೆ ಕಾಶ್ಮೀರಾ ಅವರ ಏಕೈಕ ಬ್ಯಾಂಕ್ ಖಾತೆಯನ್ನು ತಕ್ಷಣವೇ 'ಫ್ರೀಜ್' (ತಡೆಹಿಡಿಯುವುದು) ಮಾಡಿದ್ದಾರೆ. ಇದರಿಂದಾಗಿ ಅವರ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಳಲು ತೋಡಿಕೊಂಡ ಮಹಿಳೆ

ಈ ಬಗ್ಗೆ ಆತಂಕ ವ್ಯಕ್ಯಪಡಿಸಿರುವ ಕಾಶ್ಮೀರಾ ದಂಪತಿ, 'ನಮಗೆ ಈ ಹಣ ಯಾರಿಂದ ಬಂತು ಎಂದು ಗೊತ್ತಿಲ್ಲ. ಈಗ ಖಾತೆ ಫ್ರೀಜ್ ಆಗಿರುವುದರಿಂದ ದಿನನಿತ್ಯದ ಸಣ್ಣಪುಟ್ಟ ಮನೆ ಖರ್ಚಿಗೂ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ,' ಎಂದು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಅವರು ಕುಲ್ತಲಿ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಬ್ಯಾಂಕ್ ಅಧಿಕಾರಿಗಳು ಹೇಳುವುದೇನು?

ಬ್ಯಾಂಕ್‌ನಿಂದ ಇಷ್ಟೊಂದು ದೊಡ್ಡ ಮೊತ್ತ ಹೇಗೆ ಜಮೆಯಾಯಿತು ಎಂಬುದಕ್ಕೆ ಬ್ಯಾಂಕ್ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೂ ಇದು ಬ್ಯಾಂಕಿಂಗ್ ವ್ಯವಸ್ಥೆಯ ಸರ್ವರ್ ದೋಷ ಅಥವಾ ತಾಂತ್ರಿಕ ಎಡವಟ್ಟಿನಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಇಂತಹ ಘಟನೆ ನಡೆದಿದ್ದು ಇದೇ ಮೊದಲ ಬಾರಿಯಲ್ಲ. ಕೊಲ್ಕತ್ತಾದ ಬೆಲೆಘಾಟಾದಲ್ಲಿ ಕ್ಲೌಡ್ ಕಿಚನ್ ನಡೆಸುತ್ತಿರುವ ನೂಪುರ್ ಗುಪ್ತಾ ಎಂಬ ಮಹಿಳೆಯ ಖಾತೆಗೂ ಇತ್ತೀಚೆಗೆ ಅನಿರೀಕ್ಷಿತವಾಗಿ 47 ಕೋಟಿ ರೂಪಾಯಿ ಜಮೆಯಾಗಿತ್ತು.

ಈ ಕುರಿತು ಇದೀಗ ಪೊಲೀಸ್, ಬ್ಯಾಂಕ್ ಮತ್ತು ಆದಾಯ ತೆರಿಗೆ ಇಲಾಖೆ ಜಂಟಿ ತನಿಖೆ ನಡೆಸುತ್ತಿವೆ. ಬ್ಯಾಂಕ್ ವ್ಯವಸ್ಥೆಯ ತಾಂತ್ರಿಕ ದೋಷಗಳಿಂದಾಗಿ ಹೀಗೆ ಸಾರ್ವಜನಿಕರ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ಪ್ರತ್ಯಕ್ಷ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಈ ಮಹಿಳೆ ಖಾತೆಗೆ ಜಮೆ ಆಗಿದ್ದು ಹೇಗೆ ಎನ್ನುವ ಮಾಹಿತಿ ಹೊರಬೀಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+