LPG Price: ದೀಪಾವಳಿಗೂ ಮುನ್ನವೇ ಗೃಹಬಳಕೆ ಎಲ್‌ಪಿಜಿ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ
LPG Price: ದಿನಬಳಕೆ ವಸ್ತುಗಳ ಬಳಕೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲಿದೆ. ಈ ನಡುವೆಯೇ ಎಲ್‌ಪಿಜಿ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯೊಂದು ಕಾದಿದೆ. ಅದೇನು ಎನ್ನುವ ಪ್ರಶ್ನೆ ಬಹುತೇಕ ಮಂದಿ ತಲೆಯಲ್ಲಿ ಕಾಡುತ್ತಿರುತ್ತದೆ. ಹಾಗಾದ್ರೆ ಅದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಎಲ್‌ಪಿಜಿ ಗ್ರಾಹಕರಿಗೆ ಭರ್ಜರಿ ಗುಡ್‌ನ್ಯೂಸ್‌ವೊಂದು ಇದೆ. ಪ್ರತಿ ತಿಂಗಳು ಇಂಧನ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡುತ್ತವೆ. ಇನ್ನೂ ಈ ಬಾರಿ ಸಂದರೆ ಅಕ್ಟೋಬರ್ 1ರಂದು ದರ ಪರಿಷ್ಕರಣೆ ವೇಳೆ ದರ ಏರಿಕೆ ಮಾಡಲಾಗಿದೆ. ಮತ್ತೊಂದೆಡೆ, ಈ ನಡುವೆಯೂ ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು, ಇದಕ್ಕೂ ಮುಂಚೆ ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಭರ್ಜರಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ.

ದೀಪಾವಳಿ ಹಬ್ಬಕ್ಕೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಇದಕ್ಕೂ ಮುನ್ನ ಗೃಹಬಳಕೆಯ ಸಿಲಿಂಡರ್ ದರ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿವೆ. ಇದಕ್ಕೆ ಕಾರಣವೂ ಇದೆ. ವಾಷಿಂಗ್ಟನ್‌ನ ವ್ಯಾಪಾರವು ಅಡುಗೆ ಅನಿಲ ಸರಬರಾಜಿನ ಮೇಲೆ ಪರಿಣಾಮ ಬೀರುವ ಹಿನ್ನೆಲೆ ಭಾರತವು ಯುಎಸ್‌ನಿಂದ ಎಲ್‌ಪಿಜಿಯ ದೀರ್ಘಾವಧಿಯ ಪೂರೈಕೆಯನ್ನು ಬಯಸುತ್ತಿದೆ.
ಮೂಲಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ತೈಲ ಕಂಪನಿಗಳು ಕೆಲವೇ ದಿನಗಳಲ್ಲಿ ಯುಎಸ್‌ನಿಂದ ಮೂರು ದೊಡ್ಡ ಎಲ್‌ಪಿಜಿ ವಾಹಕಗಳನ್ನು ಖರೀದಿ ಮಾಡಲು ಯೋಜನೆಯಲ್ಲಿ ಇದೆ. ಈ ಮೂರು ಕಂಪನಿಗಳು 331 ಮಿಲಿಯನ್‌ಗಿಂತಲೂ ಹೆಚ್ಚು ದೇಶೀಯ ಗ್ರಾಹಕರಿಗೆ ಎಲ್‌ಪಿಜಿ ಪೂರೈಸುವ ಜವಾಬ್ದಾರಿಯನ್ನು ಹೊಂದಿವೆ.
ಅದರಲ್ಲಿ ಶೇಕಡ 60ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತದೆ. ಭಾರತವು ಈಗಾಗಲೇ ಸೌದಿ ಅರೇಬಿಯಾದಂತಹ ದೇಶಗಳೊಂದಿಗೆ ದೀರ್ಘಾವಧಿಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಆದರೂ ಅಮೆರಿಕವು ಎಲ್‌ಪಿಜಿಗಾಗಿ ಇದೇ ರೀತಿಯ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವುದು ಇದೇ ಮೊದಲು. ಈ ಯೋಜನೆಯು ಅಮೆರಿಕ ಸುಂಕವನ್ನು ಕಡಿತಗೊಳಿಸುವಂತೆ ಮನವೊಲಿಸಲು ಸಹಾಯ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿ ಸರ್ಕಾರ ಇದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಜಂಟಿಯಾಗಿ ಈ ಟೆಂಡರ್ ನೀಡಿವೆ. ಕಂಪನಿಗಳು ಇದಕ್ಕೆ ಪ್ರತಿಕ್ರಿಯಿಸಲಿಲ್ಲ. ತೈಲ ಸಚಿವಾಲಯವೂ ಪ್ರತಿಕ್ರಿಯಿಸಲಿಲ್ಲ. ಇನ್ನು ಅಮೆರಿಕ-ಚೀನಾ ವ್ಯಾಪಾರ ವಿವಾದ ಹಿನ್ನೆಲೆ ಇದರ ಅವಕಾಶಗಳನ್ನು ಭಾರತ ಬಳಕೆ ಮಾಡಿಕೊಳ್ಳುತ್ತಿದೆ.
ಎರಡೂ ದೇಶಗಳ ನಡುವಿನ ಹೆಚ್ಚುತ್ತಿರುವ ಸುಂಕದಿಂದ ಪರಿಣಾಮ ಬೀರುವ ಸರಕುಗಳಲ್ಲಿ ಎಲ್‌ಪಿಜಿ ಸಹ ಸೇರಿದೆ. ಮಧ್ಯ ಪ್ರಾಚ್ಯದಿಂದ ಎಲ್‌ಪಿಜಿ ಖರೀದಿಸುವ ಮೂಲಕ ಚೀನಾ ತನ್ನ ಯುಎಸ್ ಶೇಲ್ ಆಮದನ್ನು ಕಡಿಮೆ ಮಾಡಲು ನೋಡುತ್ತಿದೆ. ಸೌದಿ ಅರೇಬಿಯಾದಂತಹ ಮಧ್ಯಪ್ರಾಚ್ಯ ಉತ್ಪಾದಕರು ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಎಲ್‌ಪಿಜಿ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಅಮೆರಿಕದಿಂದ ಎಲ್‌ಪಿಜಿ ಆಮದು ಹೆಚ್ಚಿಸುವ ಮೂಲಕ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಭಾರತ ಹೊಸ ಮಾರ್ಗಗಳನ್ನು ಕಂಡುಕೊಂಡಿದೆ.
ಇದು ಭಾರತದಲ್ಲಿ ಎಲ್‌ಪಿಜಿ ಬೆಲೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಕಾಯುತ್ತಿದ್ದಾರೆ. ತುಂಬಾ ಪೂರೈಕೆ ಇರುವುದರಿಂದ ಬೆಲೆಗಳು ಸ್ಥಿರ ಆಗಿರುತ್ತವೆ. ಯುಎಸ್‌ನಿಂದ ಎಲ್‌ಪಿಜಿ ದೀರ್ಘಾವಧಿಯ ಪೂರೈಕೆ ಇದ್ದರೆ, ಆಮದುಗಳು ಅಧಿಕ ಮತ್ತು ನಿರಂತರ ಆಗಿರುತ್ತವೆ. ಇದು ದೇಶೀಯ ಗ್ರಾಹಕರಿಗೆ ಬೆಲೆಗಳನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ.
ಮತ್ತೊಂದೆಡೆ ಈ ಸ್ಪರ್ಧೆಯು ಬೆಲೆ ಇಳಿಕೆಗೆ ಕಾರಣ ಆಗಬಹುದು. ಮಧ್ಯಪ್ರಾಚ್ಯ ಮತ್ತು ಯುಎಸ್‌ನಂತಹ ಪೂರೈಕೆದಾರರ ನಡುವೆ ಸ್ಪರ್ಧೆ ಹೆಚ್ಚಾದಂತೆ ಎಲ್‌ಪಿಜಿ ಮಾರಾಟಗಾರರು ಬೆಲೆಗಳನ್ನು ಕಡಿಮೆ ಮಾಡಬಹುದು. ದೀರ್ಘಾವಧಿಯ ಯುಎಸ್ ಎಲ್‌ಪಿಜಿ ಒಪ್ಪಂದವು ಭಾರತದಲ್ಲಿ ಎಲ್‌ಪಿಜಿ ಬೆಲೆಗಳು ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ದೀಪಾವಳಿ ವೇಳೆಗೆ ಗೃಹಬಳಕೆ ಎಲ್‌ಪಿಜಿ ದರ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications