LPG Gas Cylinder: ಕಡಿಮೆ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ಪಡೆಯುವವರು ಗಮನಿಸಬೇಕಾದ ಅಂಶಗಳು
LPG Gas Cylinder: ದಿನನಿತ್ಯದ ವಸ್ತುಗಳ ದರ ಗಗನಮುಖಿಯಾಗುತ್ತಲಿವೆ. ಜೊತೆಗೆ ಎಲ್‌ಪಿಜಿ ಸಿಲಿಂಡರ್ ದರವೂ ಹೆಚ್ಚಾಗಿದ್ದು, ಇದರಿಂದ ಜನಸಾಮಾನ್ಯರು ಹೈರಾಣಾಗಿದ್ದು, ತಮಗೆ ಗೊತ್ತಿಲ್ಲದೆ ಸಬ್ಸಿಡಿ ಇಲ್ಲದ ಕಡಿಮೆ ಬೆಲೆ ಸಿಲಿಂಡರ್ ಗಳ ಕಡೆ ಮುಖ ಮಾಡುತ್ತಿದ್ದಾರೆ. ಮೋಸ ಆಗುತ್ತದೆ ಎಂದು ತಿಳಿಯದೇ ಅಂತಹ ಎಲ್‌ಪಿಜಿ ಸಿಲಿಂಡರ್‌ಗಳನ್ನು ಕೊಳ್ಳುತ್ತಿದ್ದಾರೆ. ಹಾಗಾದರೆ ಹೇಗೆ ಮೋಸ ಆಗುತ್ತದೆ ಎಂದು ತಿಳಿಯಿರಿ.
ಸಾಮಾನ್ಯವಾಗಿ ಗ್ರಾಹಕರು ಸಿಲಿಂಡರ್ ಕಡಿಮೆ ಬೆಲೆಗೆ ಸಿಗುವುವುದಾದರೆ ಉತ್ತಮ ಎಂದು ಭಾವಿಸುತ್ತಾರೆ. ಇನ್ನು ಕೆಲವು ರಾಜ್ಯ ಸರ್ಕಾರಗಳು ಸಬ್ಸಿಡಿ ಮೂಲಕ 500 ರೂಪಾಯಿಗೆ ಸಿಲಿಂಡರ್ ನೀಡುತ್ತಿವೆ. ಆದರೆ ಸಬ್ಸಿಡಿ ಇಲ್ಲದೆ 499 ರೂಪಾಯಿಗೆ ಕೆಲವರು ಸಿಲಿಂಡರ್ ಪಡೆಯುತ್ತಿದ್ದಾರೆ.

ಎಲ್‌ಪಿಜಿ ಸಿಲಿಂಡರ್ ದರ ತುಂಬಾ ದಿನಗಳಿಂದಲೂ ಸ್ಥಿರವಾಗಿರುವುದನ್ನು ಗಮನಿಸಿರಬಹುದು. ಬಹುತೇಕ ನಗರಗಳಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ ದರ 850 ರೂಪಾಯಿ ಇದೆ. ಕೆಲವು ರಾಜ್ಯಗಳಲ್ಲಿ ಸರ್ಕಾರಗಳು ಇದಕ್ಕೆ ಸಬ್ಸಿಡಿ ನೀಡಿ 500 ರೂಪಾಯಿಗೆ ಸಿಲಿಂಡರ್ ನೀಡುತ್ತಿವೆ. ಆದರೆ, ವರ್ಷಕ್ಕೆ 3 ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದ ಎಪಿ ಸರ್ಕಾರ ಇದುವರೆಗೂ ಒಂದನ್ನೂ ನೀಡಿಲ್ಲ ಎನ್ನುವ ಆರೋಪವಿದೆ.
850 ರೂಪಾಯಿ ಕೊಟ್ಟು ರೀ ಫಿಲ್ಲಿಂಗ್ ಸಿಲಿಂಡರ್ ಪಡೆಯುವುದು ಕೂಡ ಕೆಲವರಿಗೆ ತುಂಬಾ ಕಷ್ಟ ಆಗುತ್ತಿದ್ದು, ಕಡಿಮೆ ಬೆಲೆಗೆ ಸಿಲಿಂಡರ್ ಸಿಕ್ಕರೆ ಉತ್ತಮ ಎಂದು ಭಾವಿಸುತ್ತಾರೆ. ಇದೀಗ ಅಂತಹವರಿಗಾಗಿಯೇ ಕೆಲವು ಕಳ್ಳ ಗ್ಯಾಂಗ್‌ಗಳು ಕೆಲಸ ಮಾಡುತ್ತಿದ್ದು, ಸಬ್ಸಿಡಿ ಇಲ್ಲದೆ, 499 ರೂಪಾಯಿಗೆ ಸಿಲಿಂಡರ್ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಯಾರಿಗೂ ತಿಳಿಯದಂತೆ ಗುಟ್ಟಾಗಿ 499 ರೂಪಾಯಿಗೆ ಸಿಲಿಂಡ್ ಕೊಡುವ ಗುಂಪುಗಳು ಹುಟ್ಟಿಕೊಂಡಿವೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಗ್ರಾಹಕರು ಬೆಲೆ ಕಡಿಮೆ ಆಗಿರಬಹುದು ಎಂದು ಅವುಗಳನ್ನು ಖರೀದಿಸುತ್ತಿದ್ದಾರೆ. ಆದರೆ ಕಡಿಮೆ ಬೆಲೆಗೆ ನೀಡುವ ಸಿಲಿಂಡರ್‌ನಲ್ಲಿ ಗ್ಯಾಸ್ ತೆಗೆದುಹಾಕುತ್ತಿದ್ದಾರೆ. 10 ಕೆಜಿ ಅಥವಾ ಅದಕ್ಕಿಂತ ಕಡಿಮೆ ಗ್ಯಾಸ್ ತುಂಬಿಸಿ 499ರೂಪಾಯಿಗೆ ನೀಡುತ್ತಿದ್ದಾರೆ. ಈ ಮೂಲಕ ಸುಮಾರು 4 ಕೆಜಿಗಿಂತ ಹೆಚ್ಚು ಗ್ಯಾಸ್ ತೆಗೆಯುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಇನ್ನು ಗ್ರಾಹಕರು ಸಿಲಿಂಡರ್‌ಗಳ ತೂಕ ಹಾಕುವುದಿಲ್ಲ. ಸಿಲಿಂಡರ್ ತೂಕವನ್ನು ಪರೀಕ್ಷಿಸಲೂ ಈ ಗ್ಯಾಂಗ್‌ಗಳು ಬಿಡುವುದಿಲ್ಲವಂತೆ. ಈ ಬಗ್ಗೆ ಪ್ರಶ್ನೆ ಮಾಡಿದರೆ, ಗ್ಯಾಸ್ ಕಂಪನಿಗಳೊಂದಿಗೆ ವಿಶೇಷ ಒಪ್ಪಂದ ಮಾಡಿಕೊಂಡು ಕಡಿಮೆ ಬೆಲೆಯಲ್ಲಿ ನಿಮಗೆ ಸಿಲಿಂಡರ್ ನೀಡುತ್ತಿದ್ದೇವೆ ಎಂದು ಪುಂಗುತ್ತಿದ್ದಾರಂತೆ. ಜನರು ಇದನ್ನೇ ನಿಜವೆಂದು ನಂಬಿ ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಖರೀದಿ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಖಾಸಗಿ ವ್ಯಕ್ತಿಗಳು ಅಥವಾ ಅಂಗಡಿಗಳಿಂದ 499 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಪಡೆಯುತ್ತಿದ್ದರೆ, ನೀವು ಮೋಸ ಹೋಗುವುದು ಗ್ಯಾರಂಟಿ. 350 ರೂಪಾಯಿ ಕಡಿಮೆಯಾಗುತ್ತದೆ ಎಂದು ಗ್ಯಾಸ್ ಪಡೆಯುತ್ತಿರುವವರು ಗಮನಿಸಬೇಕಾದ ಪ್ರಮಖ ಮಾಹಿತಿ ಇದು. ಇಂತಹ ವಂಚನೆಗಳಿಂದ ಜನರನ್ನು ರಕ್ಷಿಸುವ ಸಲುವಾಗಿ ಗ್ಯಾಸ್ ಏಜೆನ್ಸಿಗಳು ಕಾಂಪೋಸಿಟ್ ಗ್ಯಾಸ್ ಸಿಲಿಂಡರ್‌ಗಳನ್ನು ತಂದಿವೆ. ಇವು 5 ಕೆಜಿ ಸಿಲಿಂಡರ್‌ಗಳಾಗಿವೆ. ಇವುಗಳ ಬೆಲೆ 350 ರೂಪಾಯಿವರೆಗೆ ಇರುತ್ತದೆ. ಈ ಸಿಲಿಂಡರ್‌ನಲ್ಲಿ ಸ್ಟೌವ್ ಅನ್ನು ಹೊಂದಿಸಬಹುದು. 14 ಕೆಜಿ ಸಿಲಿಂಡರ್ ಖರೀದಿಸಲು ಸಾಧ್ಯ ಆಗದವರು ಈ ಸಣ್ಣ ಸಿಲಿಂಡರ್‌ಗಳನ್ನು ಮರು ತುಂಬಿಸಬಹುದಾಗಿದೆ.












Click it and Unblock the Notifications