LPG: ಎಲ್‌ಪಿಜಿ ಗ್ರಾಹಕರೇ ಗಮನಿಸಿ: ಇ-ಕೆವೈಸಿ ಪೂರ್ಣಗೊಳಿಸಲು ಇಂದೇ ಕೊನೆಯ ದಿನ, ಬೇಕಾಗುವ ದಾಖಲೆಗಳು, ಪ್ರಕ್ರಿಯೆ ವಿವರ

LPG e-KYC: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗ್ರಾಹಕರು ಸಬ್ಸಿಡಿ ಪಡೆಯುವುದನ್ನು ಮುಂದುವರೆಸಲು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 7ರಂದು ಅಂತಿಮ ದಿನವಾಗಿದೆ. ಸರ್ಕಾರ ಹಾಗೂ ಗ್ಯಾಸ್ ಸಂಸ್ಥೆಗಳು ನೀಡಿದ್ದ ವಿಸ್ತೃತ ಗಡುವು ಇಂದು ಅಂತ್ಯಗೊಳ್ಳುತ್ತಿದ್ದು, ಈ ಪ್ರಕ್ರಿಯೆ ಮಾಡಿಸದಿದ್ದರೆ ಸಬ್ಸಿಡಿ ಹಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹಾಗಾದ್ರೆ ಇದಕ್ಕೆ ಯಾವೆಲ್ಲಾ ದಾಖಲೆಗಳು ಬೇಕು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಆನ್‌ಲೈನ್‌ನಲ್ಲಿ ಮೊಬೈಲ್ ಆ್ಯಪ್‌ಗಳ ಮೂಲಕ ಅಥವಾ ಆಫ್‌ಲೈನ್‌ನಲ್ಲಿ ಹತ್ತಿರದ ಗ್ಯಾಸ್ ಏಜೆನ್ಸಿ ಹಾಗೂ ಡೆಲಿವರಿ ಸಿಬ್ಬಂದಿ ನೆರವಿನಿಂದ ಆಧಾರ್ ಮತ್ತು ಬಯೋಮೆಟ್ರಿಕ್/ಫೇಸ್ ಸ್ಕ್ಯಾನ್ ಬಳಸಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಈ ಪ್ರಕ್ರಿಯೆಗೆ ಸೆಪ್ಟೆಂಬರ್ 7 ಅಂದರೆ ಇಂದು ಅಂತಿಮ ದಿನವಾಗಿದೆ. ಗ್ಯಾಸ್ ಸಬ್ಸಿಡಿ ಸೌಲಭ್ಯವನ್ನು ನಿರಂತರವಾಗಿ ಪಡೆಯಲು ಬಯಸುವ ಗ್ರಾಹಕರು ತಕ್ಷಣವೇ ಇದನ್ನು ಮುಗಿಸುವಂತೆ ಸೂಚಿಸಿವೆ.

LPG Gas e-KYC September 7 2026 Deadline Documents and How to Complete Know Complete details

ಗಡುವು ವಿಸ್ತರಣೆ ಮತ್ತು ಹಿನ್ನೆಲೆ

ಆರಂಭದಲ್ಲಿ ಇ-ಕೆವೈಸಿ ಪೂರ್ಣಗೊಳಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿತ್ತು. ಆದರೆ ಸಾಫ್ಟ್‌ವೇರ್ ಅಪ್‌ಡೇಟ್ ಸೇರಿದಂತೆ ವಿವಿಧ ಸಮಸ್ಯೆಗಳ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಗಡುವನ್ನು ಸೆಪ್ಟೆಂಬರ್ 7ರವರೆಗೆ ವಿಸ್ತರಿಸಲಾಗಿತ್ತು. ಈಗಾಗಲೇ ಹಲವು ಬಾರಿ ಸಮಯ ನೀಡಲಾಗಿದ್ದು, ಮತ್ತೊಮ್ಮೆ ದಿನಾಂಕ ವಿಸ್ತರಿಸುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ಇ-ಕೆವೈಸಿ ಮಾಡಿಸದಿದ್ದರೆ ಏನಾಗಲಿದೆ?

ನಿಗದಿತ ಸಮಯದೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಗ್ರಾಹಕರಿಗೆ ಸಿಗುವ ಗ್ಯಾಸ್ ಸಬ್ಸಿಡಿ ಹಂತ-ಹಂತವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಹೀಗೆ ಆದ್ರೆ ಸಿಲಿಂಡರ್ ಖರೀದಿಸುವಾಗ ಪೂರ್ಣ ಚಿಲ್ಲರೆ ಮಾರುಕಟ್ಟೆ ದರವನ್ನು ಪಾವತಿಸಬೇಕಾಗಬಹುದು.

ಇ-ಕೆವೈಸಿಗೆ ಪ್ರಕ್ರಿಯೆಗೆ ಬೇಕಾಗುವ ದಾಖಲೆಗಳು: ಇ-ಕೆವೈಸಿ ಪೂರ್ಣಗೊಳಿಸಲು ಗ್ರಾಹಕರ ವೈಯಕ್ತಿಕ ವಿವರಗಳು, ಗ್ಯಾಸ್ ಸಂಪರ್ಕದ ಮಾಹಿತಿ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ.

ಆನ್‌ಲೈನ್‌ನಲ್ಲಿ ಇ-ಕೆವೈಸಿ ಮಾಡುವ ವಿಧಾನ

* ಇಂಡೇನ್ ಗ್ರಾಹಕರು IndianOil ONE ಆ್ಯಪ್‌ ಬಳಸಬಹುದು.

* ಭಾರತ್ ಗ್ಯಾಸ್ ಗ್ರಾಹಕರು Hello BPCL ಆ್ಯಪ್‌ ಬಳಸಬಹುದು.

* ಹೆಚ್‌ಪಿ ಗ್ಯಾಸ್ ಗ್ರಾಹಕರು HP Pay ಆ್ಯಪ್‌ ಬಳಸಬಹುದು.

* ಆ್ಯಪ್‌ ತೆರೆಯಿರಿ ಮತ್ತು e-KYC ಆಯ್ಕೆ ಮಾಡಿ.

* ಆಧಾರ್ ಸಂಖ್ಯೆ ಹಾಗೂ ಗ್ಯಾಸ್ ಸಂಪರ್ಕದ ವಿವರಗಳನ್ನು ನಮೂದಿಸಿ.

* ಅಗತ್ಯವಿದ್ದರೆ Aadhaar Face RD ಆ್ಯಪ್‌ ಡೌನ್‌ಲೋಡ್ ಮಾಡಿ.

* ನಂತರ ಮುಖದ ಸ್ಕ್ಯಾನ್ ಪೂರ್ಣಗೊಳಿಸಿದ ಬಳಿಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಆಫ್‌ಲೈನ್‌ನಲ್ಲಿ ಇ-ಕೆವೈಸಿ ಮಾಡುವ ವಿಧಾನ

* ಆನ್‌ಲೈನ್‌ನಲ್ಲಿ ಇ-ಕೆವೈಸಿ ಮಾಡಲು ಸಾಧ್ಯವಾಗದವರು ತಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ತೆರಳಿ ಆಧಾರ್ ಹಾಗೂ ಗ್ಯಾಸ್ ಪಾಸ್‌ಬುಕ್ ನೀಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನೀಡಿದ ಬಳಿಕ ಅಗತ್ಯವಿರುವ ಬಯೋಮೆಟ್ರಿಕ್ ಅಥವಾ ಮುಖದ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಬಹುದು.

* ಗ್ಯಾಸ್ ಸಿಲಿಂಡರ್ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿಯ ಬಳಿ ಇರುವ ಬಯೋಮೆಟ್ರಿಕ್ ಯಂತ್ರದ ಮೂಲಕವೂ ಇ-ಕೆವೈಸಿ ಪೂರ್ಣಗೊಳಿಸುವ ಅವಕಾಶವಿದೆ.

ಆದ್ದರಿಂದ ಸಬ್ಸಿಡಿ ಸೇರಿದಂತೆ ಗ್ಯಾಸ್ ಸೇವೆಗಳಲ್ಲಿ ಯಾವುದೇ ತೊಂದರೆ ಎದುರಾಗದಂತೆ, ಇನ್ನೂ ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರು ಇಂದೇ ಪ್ರಕ್ರಿಯೆ ಮುಗಿಸಿಕೊಳ್ಳುವುದು ಉತ್ತಮ. ಯಾಕಂದ್ರೆ ಗಡುವು ವಿಸ್ತರಣೆ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+