ಶಾಕಿಂಗ್ ನ್ಯೂಸ್: LPG ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ
ನವದೆಹಲಿ, ಫೆಬ್ರವರಿ.14: ಭಾರತದಲ್ಲಿ ಇಂಧನ ಬೆಲೆ ಏರಿಕೆಯ ಜೊತೆಗೆ ಎಲ್ ಪಿಜಿ(ದ್ರವೀಕೃತ ಪೆಟ್ರೋಲಿಯಂ ಅನಿಲ) ಸಿಲಿಂಡರ್ ದರದಲ್ಲಿ 50 ರೂಪಾಯಿ ಏರಿಕೆಯಾಗಿದೆ. ಸೋಮವಾರದಿಂದಲೇ ಪರಿಷ್ಕೃತ ದರವು ಜಾರಿಗೆ ಬರಲಿದೆ. ನವದೆಹಲಿಯಲ್ಲಿ ಪ್ರಸ್ತುತ 14.2 ಕೆಜಿ ಸಿಲಿಂಡರ್ ಬೆಲೆ 769 ರೂಪಾಯಿ ಆಗಿದೆ.
ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್ ಇಂಡೇನ್ ಬ್ರಾಂಡ್ ಅಡಿಯಲ್ಲಿ ಎಲ್ಪಿಜಿ ಸಿಲಿಂಡರ್ ಗಳನ್ನು ಪೂರೈಸುತ್ತದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ತಿಂಗಳ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ಪ್ರತಿ ತಿಂಗಳ ಮೊದಲ ದಿನದಂದು ಬದಲಾವಣೆಗಳನ್ನು ಮಾಡಲಾಗುತ್ತದೆ. ದೇಶದ ವಿವಿಧ ಕಡೆಗಳಲ್ಲಿ ಸ್ಥಳೀಯ ತೆರಿಗೆಯಿಂದಾಗಿ ಅಡುಗೆ ಅನಿಲ ದರಗಳು ಬದಲಾಗುತ್ತಾ ಹೋಗುತ್ತವೆ.
ತೈಲ ಬೆಲೆ ಹೆಚ್ಚಳ ವಿರುದ್ಧ ಮಹಾರಾಷ್ಟ್ರದಲ್ಲಿ ಶಿವಸೇನೆ ಪ್ರತಿಭಟನೆ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ನಾಲ್ಕನೇ ದಿನಕ್ಕೆ ಎಲ್ ಪಿಸಿ ಸಿಲಿಂಡರ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಫೆಬ್ರವರಿ.04ರಂದು ದೇಶದ ಮಹಾನಗರಗಳಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಹೆಚ್ಚಿಸಲಾಗಿತ್ತು. ದೆಹಲಿಯಲ್ಲಿ 14.2 ಕೆಜಿ ತೂಕದ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ 719 ರೂಪಾಯಿ ಆಗಿತ್ತು.

ವಾಣಿಜ್ಯ ಉಪಯೋಗಕ್ಕಾಗಿ ಬಳಸುವ 19 ಕೆಜಿ ತೂಕದ ಸಿಲಿಂಡರ್ ಬೆಲೆಯನ್ನೂ ಸಹ ಏರಿಕೆ ಮಾಡಲಾಗಿದೆ. ಒಂದು ವಾಣಿಜ್ಯ ಉಪಯೋಗಿ ಸಿಲಿಂಡರ್ ಬೆಲೆಗೆ 184 ರೂ. ಹೆಚ್ಚಿಸಲಾಗಿದ್ದು, 1349 ರೂಪಾಯಿಯಿಂದ 1533 ರೂಪಾಯಿಗೆ ಏರಿಕೆಯಾಗಿತ್ತು.
ದೇಶದ ಪ್ರಮುಖ ನಗರಗಳಲ್ಲಿ ಸಿಲಿಂಡರ್ ದರ: (ಫೆಬ್ರವರಿ.14ರಂದು)
ಭಾರತದಾದ್ಯಂತ ಸಿಲಿಂಡರ್ ಬೆಲೆ ಏರಿಕೆಗೂ ಮೊದಲು ದೇಶದ ಪ್ರಮುಖ ನಗರಗಳಲ್ಲಿ ಅಡುಗೆ ಅನಿಲದ ಪರಿಷ್ಕೃತ ದರ ಎಷ್ಟಿದೆ ಎನ್ನುವುದರ ಪಟ್ಟಿ ಇಲ್ಲಿದೆ.
- ನವದೆಹಲಿ: 719 ರೂ
- ಮುಂಬೈ: 719 ರೂ
- ಲಕ್ನೋ: 757 ರೂ
- ನೋಯ್ಡಾ: 717 ರೂ
- ಚೆನ್ನೈ: 735 ರೂ
- ಕೋಲ್ಕತಾ: 745.50
- ಬೆಂಗಳೂರು: 722 ರೂ
- ಚಂಡೀಗಢ್ : 728.50 ರೂ
- ಹೈದರಾಬಾದ್: 771.50
- ಗುರ್ಗಾಂವ್: 728 ರೂ
- ಜೈಪುರ್: 723 ರೂ
ಪಾಟ್ನಾ: 792.50 ರೂ












Click it and Unblock the Notifications