Lok Sabha Election Survey: ದೇಶದಲ್ಲಿ ಮತ್ತೆ ಮೋದಿ ಅಲೆ, I.N.D.I.A. ಭಾರೀ ಆಘಾತ: ಸರ್ವೆ ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ, ಮಾರ್ಚ್‌ 15: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಯನ್ನ ಕೇಸರಿ ಪಡೆ ನಡೆಸಿದೆ. ಈಗಾಗಲೇ ಗೆಲ್ಲುವ ಕುದುರೆಯ ಹುಡುಕಾಟವನ್ನ ನಡೆಸುತ್ತಿರುವ ಕಮಲ ಕಲಿಗಳು ಅಳೆದು ತೂಗಿ ಎರಡು ಪಟ್ಟಿಯನ್ನ ಬಿಡುಗಡೆಗೊಳಿಸಿದ್ದು, ನ್ಯೂಸ್ 18 ಇದೀಗ ಲೋಕಸಭಾ ಚುನಾವಣೆ ಕುರಿತಂತೆ ಮತ್ತೊಂದು ಮೆಗಾ ಸರ್ವೆ ನಡೆಸಿದೆ.

ಹೌದು, ಲೋಕಸಭಾ ಚುನಾವಣಾ ರಾಜಕೀಯ ಪಕ್ಷಗಳ ತಯಾರಿ ಒಂದು ಕಡೆಯಾದ್ರೆ, ಇತ್ತ ಸಮೀಕ್ಷೆಗಳು ನಡೆಯುತ್ತಿದ್ದು, ನ್ಯೂಸ್ 18 ಇದೀಗ ಲೋಕಸಭಾ ಚುನಾವಣೆ ಸಮೀಕ್ಷೆ ಫಲಿತಾಂಶ ಪ್ರಕಟಿಸಿದೆ. ದೇಶದಲ್ಲಿ ಈ ಬಾರಿ 400 ಸ್ಥಾನಗಳನ್ನು ಗೆಲ್ಲುವ ಕನಸು ಕಾಣುತ್ತಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗಿದ್ದು, ಚುನಾವಣೆಗೆ ಎನ್‌ಡಿಎ ವಿರುದ್ಧ ಮೈತ್ರಿಯಾಗಿರುವ I.N.D.I.A. ನಾಯಕರಿಗೆ ಈ ಸಮೀಕ್ಷೆ ಬಿಗ್ ಶಾಕ್ ನೀಡಿದೆ. ಹಾಗಾದರೆ ಮೆಗಾ ಸರ್ವೆ ಫಲಿತಾಂಶ ಏನಾಗಿದೆ? ಈ ಬಾರಿ ಮೋದಿ ಹ್ಯಾಟ್ರಿಕ್ ಬಾರಿಸ್ತಾರಾ? ಇಂಡಿಯಾ ನಾಯಕರಿಗೆ ಭಾರೀ ಆಘಾತ ಕಾದಿದ್ಯಾ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Lok Sabha Elections 2024 News18 Mega Opinion Poll BJP-led NDA Set to Go 400 in Lok Sabha

ಈ ಬಾರಿ ಬಿಜೆಪಿಗೆ 411 ಸ್ಥಾನಗಳು!

ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದಾರೆ. ಮತ್ತೊಮ್ಮೆ ಗೆದ್ದು, ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನರೇಂದ್ರ ಮೋದಿ ಸಂಕಲ್ಪವಾಗಿತ್ತು. ಹಲವು ಸಮೀಕ್ಷೆಗಳು ಎನ್‌ಡಿಎ ಪರವಾಗಿದ್ದು, ನ್ಯೂಸ್ 18 ನಡೆಸಿದ ಮೆಗಾ ಸರ್ವೆಯಲ್ಲಿ ಎನ್‌ಡಿಎ ಮತ್ತೊಮ್ಮೆ ಬಹುಮತ ಪಡೆದು, ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

543 ಸದಸ್ಯ ಬಲ ಹೊಂದಿರುವ ಲೋಕಸಭೆಯಲ್ಲಿ ಎನ್‌ಡಿಎ 411 ಸ್ಥಾನಗಳನ್ನು ಗೆಲ್ಲಲಿದ್ದು, ಬಿಜೆಪಿ ಏಕಾಂಗಿಯಾಗಿ ದಾಖಲೆಯ 350 ಸ್ಥಾನಗಳನ್ನು ಗಳಿಸಲಿದೆ ಎಂದು ನ್ಯೂಸ್‌ 18 ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಜನತಾ ದಳ (ಯುನೈಟೆಡ್) ಮತ್ತು ತೆಲುಗು ದೇಶಂ ಪಕ್ಷ ಸೇರಿದಂತೆ ಉಳಿದ ಎನ್‌ಡಿಎ ಘಟಕಗಳು 61 ಸ್ಥಾನಗಳನ್ನು ಗೆಲ್ಲಲಿವೆ. ಎನ್‌ಡಿಎ ಈ ಬಾರಿ ಬರೋಬ್ಬರಿ 411 ಸ್ಥಾನಗಳನ್ನು ಪಡೆಯಲಿದೆ ಅಂತ ಸರ್ವೆ ಹೇಳುತ್ತಿದೆ.

ಇನ್ನೂ ಎನ್‌ಡಿಎ ಉತ್ತರ ಪ್ರದೇಶದಲ್ಲಿ 77, ಮಧ್ಯಪ್ರದೇಶದಲ್ಲಿ 28, ಛತ್ತೀಸ್‌ಗಢದಲ್ಲಿ 10, ಬಿಹಾರದಲ್ಲಿ 38 ಮತ್ತು ಜಾರ್ಖಂಡ್‌ನಲ್ಲಿ 12 ಮತ್ತು ಕರ್ನಾಟಕದಲ್ಲಿ 25 ಕ್ಷೇತ್ರಗಳನ್ನ ಗೆಲ್ಲಲಿದೆ ಎಂದು ಸಮೀಕ್ಷೆ ಸೂಚಿಸುತ್ತದೆ.
ಇತ್ತ ಎನ್‌ಡಿಎ ವಿರುದ್ಧ ತೊಡೆ ತಟ್ಟಿದ್ದ I.N.D.I.A. ನಾಯಕರಿಗೆ ಈ ಬಾರಿಯೂ ನ್ಯೂಸ್‌ 18 ಸಮೀಕ್ಷೆಯಿಂದ ಶಾಕ್‌ ನೀಡಿದೆ. ಎನ್‌ಡಿಎ ಅರ್ಧದಷ್ಟು ಸ್ಥಾನಗಳನ್ನು ಪಡೆಯಲೂ ಕೂಡ I.N.D.I.A. ನಾಯಕರಿಗೆ ಅಸಾಧ್ಯ ಅಂತ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

I.N.D.I.A. ಗೆ 105 ಸ್ಥಾನಗಳು!

ಇತ್ತ ಮೋದಿ ಮಣಿಸಲು ಹುಟ್ಟಿಕೊಂಡಿದ್ದ I.N.D.I.A. ನಾಯಕರಿಗೆ ನ್ಯೂಸ್‌ 18 ಸರ್ವೆಯಿಂ ಆಘಾತ ಎದುರಾಗಿದೆ. ಕಾಂಗ್ರೆಸ್ ನೇತೃತ್ವದ I.N.D.I.A. ಈ ಬಾರಿ 105 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಂಗ್ರೆಸ್ ಸೇರಿದಂತೆ ಪ್ರಮುಖ ಬಿಜೆಪಿಯೇತರ ಪಕ್ಷಗಳನ್ನು ಒಳಗೊಂಡಿರುವ ಇಂಡಿಯಾ ಒಕ್ಕೂಟ ಒಟ್ಟು 105 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಭಿಪ್ರಾಯ ಸಂಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+