LS Election 2024 LIVE: 4ನೇ ಹಂತದ ಮತದಾನ ಮುಕ್ತಾಯ
ಬೆಂಗಳೂರು, ಮೇ 13: ಲೋಕಸಭೆ ಚುನಾವಣೆ 2024 ರ ಹಂತ 4 ರಲ್ಲಿ 96 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯವಾಗಿದೆ. ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ (UT) ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಆಂಧ್ರ ಪ್ರದೇಶದ 25, ಬಿಹಾರ 5, ಜಮ್ಮು ಮತ್ತು ಕಾಶ್ಮೀರ 1, ಜಾರ್ಖಂಡ್ 4, ಮಧ್ಯ ಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಮತ್ತು ಪಶ್ಚಿಮ ಬಂಗಾಳದ 8 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಿತು.

4ನೇ ಹಂತದ ವಿಶೇಷ ಎಂದರೆ ಆಂಧ್ರ ಪ್ರದೇಶದಲ್ಲಿ 25 ಲೋಕಸಭಾ ಕ್ಷೇತ್ರ ಮತ್ತು 175 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟಿಗೆ ಮತದಾನ. ಇಂದು ಆಂಧ್ರ ಪ್ರದೇಶ ಹೈ ವೋಲ್ಟೇಜ್ ಮತದಾನಕ್ಕೆ ಸಾಕ್ಷಿಯಾಗುತ್ತಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಎನ್‌ಡಿಎ ಮೈತ್ರಿಕೂಟ, ಕಾಂಗ್ರೆಸ್‌ನಿಂದ ಪೈಪೋಟಿ ಎದುರಿಸುತ್ತಿದ್ದಾರೆ.
ಮತದಾನದ ದಿನ ಸುದ್ದಿ, ಚಿತ್ರ, ವಿಡಿಯೋ, ಮತದಾನ ಪ್ರಮಾಣ, ನಾಯಕರ ಹೇಳಿಕೆಗಳು ಮುಂತಾದ ಮಾಹಿತಿಗಳು ಈ ಪುಟದಲ್ಲಿ ಲಭ್ಯವಿದೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಲೋಕಸಭೆ ಚುನಾವಣೆ ಮತದಾನ ನಡೆಯುತ್ತಿದ್ದು, ಮೇ 13ರಂದು 4ನೇ ಹಂತದ ಮತದಾನವಿದೆ.
ಮತದಾನ ಮುಕ್ತಾಯ
ಸಂಜೆ 5 ಗಂಟೆಯವರೆಗೆ 62.31% ಮತದಾನ
3 ಗಂಟೆಯವರೆಗೆ 52.60% ಮತದಾನ

FOR CHANGE pic.twitter.com/udjmibVTV7
— YS Sharmila (@realyssharmila) May 13, 2024





















Click it and Unblock the Notifications