Lok Sabha Elections Phase 3: ಮೂರನೇ ಹಂತದಲ್ಲಿ ಯಾವ್ಯಾವ ರಾಜ್ಯಗಳಲ್ಲಿ ಮತದಾನ? ಸಂಪೂರ್ಣ ಪಟ್ಟಿ
ನವದೆಹಲಿ, ಮೇ. 06 : 2024 ರ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಮೂರನೇ ಹಂತದ ಚುನಾವಣೆಗೆ ದೇಶವೇ ಸಿದ್ಧವಾಗುತ್ತಿದೆ. 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ (93) ತೊಂಬತ್ತಮೂರು ಲೋಕಸಭಾ ಸ್ಥಾನಗಳಿಗೆ ಮೇ 7 ರಂದು ಮತದಾನ ನಡೆಯಲಿದೆ.
ಮೂರನೇ ಹಂತದಲ್ಲಿ, ಗುಜರಾತ್‌ನ ಎಲ್ಲಾ 26 ಸ್ಥಾನಗಳು, ಗೋವಾದ 2 ಕ್ಷೇತ್ರಗಳು, ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯುನ 2 ಸ್ಥಾನಗಳು, ಅಸ್ಸಾಂನ 4 ಕ್ಷೇತ್ರಗಳು, ಪಶ್ಚಿಮ ಬಂಗಾಳದ 4, ಬಿಹಾರದ 5, ಛತ್ತೀಸ್‌ಗಢದ 7, ಮಧ್ಯಪ್ರದೇಶದ 9, ಉತ್ತರ ಪ್ರದೇಶದ 10, ಮಹಾರಾಷ್ಟ್ರದ 11 ಮತ್ತು ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಶಿವರಾಜ್ ಸಿಂಗ್ ಚೌಹಾಣ್, ಎನ್‌ಸಿಪಿಯ ಶರದ್ಚಂದ್ರ ಪವಾರ್ ನಾಯಕಿ ಸುಪ್ರಿಯಾ ಸುಳೆ, ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಮತ್ತು ಸಮಾಜವಾದಿ ಪಕ್ಷದ ನಾಯಕ ಡಿಂಪಲ್ ಯಾದವ್, ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವಾರು ಪ್ರಮುಖ ನಾಯಕರು 3ನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಲೋಕಸಭೆ ಚುನಾವಣೆ 3 ನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳ ಪಟ್ಟಿ
ಕರ್ನಾಟಕ: ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ
ಗುಜರಾತ್: ಕಚ್ಛ್, ಬನಸ್ಕಾಂತ, ಪಟಾನ್, ಮಹೇಶನ, ಸಬರ್ಕಾಂತ, ಗಾಂಧಿನಗರ, ಅಹಮದಾಬಾದ್ ಪೂರ್ವ, ಅಹಮದಾಬಾದ್ ಪಶ್ಚಿಮ, ಸುರೇಂದ್ರನಗರ, ರಾಜ್‌ಕೋಟ್, ಪೋರಬಂದರ್, ಜಾಮ್‌ನಗರ, ಜುನಾಗಢ, ಅಮ್ರೇಲಿ, ಭಾವನಗರ, ಆನಂದ್, ಖೇಡಾ, ಪಂಚಮಹಲ್, ದಾಹೋದ್, ವಡೋದರ, ಛೋಟಾ ಉದಯಪುರ, ಭರೂಚ್, ಭರೂಚ್, , ಸೂರತ್, ನವಸಾರಿ, ವಲ್ಸಾದ್

ಮಧ್ಯಪ್ರದೇಶ: ಭಿಂಡ್, ಭೋಪಾಲ್, ಗುಣಾ, ಗ್ವಾಲಿಯರ್, ಮೊರೆನಾ, ರಾಜ್‌ಗಢ್, ಸಾಗರ್, ವಿದಿಶಾ, ಬೇತುಲ್
ಅಸ್ಸಾಂ: ಧುಬ್ರಿ, ಕೊಕ್ರಜಾರ್, ಬರ್ಪೇಟಾ, ಗೌಹಾಟಿ
ಛತ್ತೀಸ್‌ಗಢ: ಸರ್ಗುಜಾ, ರಾಯ್‌ಗಢ, ಜಾಂಜ್‌ಗೀರ್-ಚಂಪಾ, ಕೊರ್ಬಾ, ಬಿಲಾಸ್‌ಪುರ್, ದುರ್ಗ್, ರಾಯ್‌ಪುರ
ಉತ್ತರ ಪ್ರದೇಶ: ಸಂಭಾಲ್, ಹತ್ರಾಸ್, ಆಗ್ರಾ, ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನ್‌ಪುರಿ, ಇಟಾಹ್, ಬುಡೌನ್, ಅಯೋನ್ಲಾ, ಬರೇಲಿ
ಮಹಾರಾಷ್ಟ್ರ: ಬಾರಾಮತಿ, ರಾಯಗಡ, ಉಸ್ಮಾನಾಬಾದ್, ಲಾತೂರ್ (SC), ಸೋಲಾಪುರ್ (SC), ಮಾಧಾ, ಸಾಂಗ್ಲಿ, ಸತಾರಾ, ರತ್ನಗಿರಿ-ಸಿಂಧುದುರ್ಗ, ಕೊಲ್ಲಾಪುರ, ಹತ್ಕನಂಗ್ಲೆ
ಪಶ್ಚಿಮ ಬಂಗಾಳ: ಮಲ್ದಹಾ ಉತ್ತರ, ಮಲ್ದಹಾ ದಕ್ಷಿಣ, ಜಂಗಿಪುರ, ಮುರ್ಷಿದಾಬಾದ್
ಬಿಹಾರ: ಝಂಜರ್ಪುರ್, ಸುಪೌಲ್, ಅರಾರಿಯಾ, ಮಾಧೆಪುರ, ಖಗಾರಿಯಾ
ಗೋವಾ: ಉತ್ತರ ಗೋವಾ, ದಕ್ಷಿಣ ಗೋವಾ
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು
2024ರ ಲೋಕಸಭೆ ಚುನಾವಣೆಯನ್ನು ಏಳು ಹಂತಗಳಲ್ಲಿ ನಡೆಸಲಾಗುತ್ತಿದ್ದು ಮೊದಲ ಹಂತದ ಮತದಾನ ಏಪ್ರಿಲ್ 19 ರಂದು, ಎರಡನೇ ಹಂತದ ಮತದಾನ ಏಪ್ರಿಲ್ 26 ರಂದು ನಡೆಯಿತು. ಮೂರನೇ ಹಂತದ ಮತದಾನ ಮೇ 7 ರಂದು (ಮಂಗಳವಾರ) ನಡೆಯಲಿದ್ದು ಎಲ್ಲಾ ಏಳು ಹಂತಗಳ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ.












Click it and Unblock the Notifications