ಮೋದಿ ಕ್ಯಾಬಿನೆಟ್‌ ಮಿನಿಸ್ಟರ್ಸ್‌ಗೆ ಸೋಲಿನ ಆಘಾತ, ಯಾರಿಗೆಲ್ಲಾ ಸೋಲು ಇಲ್ಲಿದೆ ಡಿಟೇಲ್ಸ್‌

ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಆಡಳಿತಾರೂಢ ಬಿಜೆಪಿ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡರೂ ಸಹ ತಾನು ಅಂದುಕೊಂಡಷ್ಟು ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ಎನ್‌ಡಿಎ ಮೈತ್ರಿ ಕೂಟ ಮ್ಯಾಜಿಕ್‌ ನಂಬರ್ ಪಾರು ಮಾಡಿದರೂ, INDIA ಮೈತ್ರಿ ಕೂಟ ಸಹ ಇದರ ಸನೀಹಕ್ಕೆ ಬಂದು ನಿಂತಿದೆ.

ಇನ್ನು ಪ್ರತಿ ಸಲದಂತೆ ಈ ಬಾರಿಯೂ ಅಚ್ಚರಿಯ ಫಲಿತಾಂಶಗಳು ಹೊರ ಬಿದ್ದಿವೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆಲವು ಸಚಿವರುಗಳು ಕ್ಷೇತ್ರದ ಜನರ ಮನಸ್ಸು ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಹಾಗಿದ್ರೆ ಯಾರೆಲ್ಲಾ ಸಚಿವರು ಸೋತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Lok Sabha Election 2024 Big Set Back For Modi Government As Cabinet Ministers Loses Election

ಬಿರೇಂದ್ರ ಸಿಂಗ್ ಅವರು ಉತ್ತರ ಪ್ರದೇಶದ ಚಂದೌಲಿ ಲೋಕಸಭಾ ಕ್ಷೇತ್ರದಲ್ಲಿ ಡಾ. ಮಹೇಂದ್ರ ನಾಥ್ ಅವರನ್ನು 21565 ಮತಗಳಿಂದ ಸೋಲಿಸಿದರು. ಡಾ.ಮಹೇಂದ್ರನಾಥ್ 452911 ಮತಗಳನ್ನು ಪಡೆದರೆ, ಬೀರೇಂದ್ರ ಸಿಂಗ್ 474476 ಮತಗಳನ್ನು ಪಡೆದಿದ್ದಾರೆ.

ಮೋದಿ ಕ್ಯಾಬಿನೆಟ್‌ ಸಚಿವರಿಗೆ ನಿರಾಸೆ

2019ರಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿ ಸಂಸದೆಯಾಗಿದ್ದ ಸ್ಮೃತಿ ಇರಾನಿ ಕೇಂದ್ರ ಸಚಿವರೂ ಆಗಿದ್ದರೂ 2024ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದಾರೆ. ಸ್ಮೃತಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ 167196 ಮತಗಳಿಂದ ಸೋಲಿಸಿದ್ದಾರೆ. ಕಿಶೋರಿ ಲಾಲ್ ಶೇಕಡಾ 54.99 ಮತಗಳನ್ನು ಪಡೆಯುವ ಮೂಲಕ 539228 ಮತಗಳನ್ನು ಪಡೆದರೆ, ಸ್ಮೃತಿ ಇರಾನಿ ಕೇವಲ 372032 ಮತಗಳನ್ನು ಗಳಿಸಲು ಅಷ್ಟೇ ಸಾಧ್ಯವಾಯಿತು.

ಬಿಜೆಪಿ ನಾಯಕ ಅರ್ಜುನ್ ಮುಂಡಾ ಕೂಡ ಜಾರ್ಖಂಡ್‌ನ ಕುಂತಿ ಲೋಕಸಭಾ ಕ್ಷೇತ್ರದಿಂದ ಸೋಲನ್ನು ಎದುರಿಸಬೇಕಾಯಿತು. ಅವರನ್ನು ಕಾಂಗ್ರೆಸ್‌ನ ಕಾಳಿ ಚರಣ್ ಮುಂಡಾ 149675 ಮತಗಳಿಂದ ಸೋಲಿಸಿದರು.

ಕೇಂದ್ರ ಸಚಿವ ರಾಜ್ ಕುಮಾರ್ ಸಿಂಗ್ ಅವರನ್ನು ಬಿಹಾರದ ಅರಾಹ್ ಲೋಕಸಭಾ ಕ್ಷೇತ್ರದಲ್ಲಿ ಕಮ್ಯುನಿಸ್ಟ್ ಪಕ್ಷದ ಸುದಾಮ ಪ್ರಸಾದ್ ಅವರು ಸೋಲಿಸಿದ್ದಾರೆ. ರಾಜ್ ಕುಮಾರ್ ಸಿಂಗ್ ಅವರು 457663 ಮತಗಳನ್ನು ಹಾಗೂ ಸುದಾಮ ಪ್ರಸಾದ್ ಅವರು 517195 ಮತಗಳನ್ನು ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+