ಚುನಾವಣೆ ವೇಳಾಪಟ್ಟಿ ಸಿದ್ಧ: ವಿವರ ತಿಳಿದುಕೊಳ್ಳಿ

ನವದೆಹಲಿ, ಫೆ.19- ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಮುಂದಿನ ಒಂದೆರಡು ತಿಂಗಳಲ್ಲಿ ಬಹುದೊಡ್ಡ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಲೋಕಸಭಾ ಚುನಾವಣೆಗಾಗಿ ಚುನಾವಣಾ ಆಯೋಗವು ವೇಳಾಪಟ್ಟಿಯೊಂದಿಗೆ ಸಿದ್ಧವಾಗಿದೆ. ವೇಳಾಪಟ್ಟಿಯ ವಿವರವೂ ಬಹಿರಂಗವಾಗಿದೆ. ಇದೇ ಅಂತಿಮ ಅಂತೇನೂ. ಆದರೆ ಅಗತ್ಯಬಿದ್ದರೆ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಬಹುತೇಕ ಇದೇ ಆಖೈರಾಗುವ ಸಾಧ್ಯತೆಯಿದೆ.

ಇದು ಚುನಾವಣೆ ದೃಷ್ಟಿಯಿಂದಷ್ಟೇ ಮಹತ್ವದ್ದಲ್ಲ. ಜನಸಾಮಾನ್ಯರ ದೈನಂದಿನ ಬದುಕು, ಮುಖ್ಯವಾಗಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳ ವೇಳಾಪಟ್ಟಿಯ ಜತೆಗೂ ತಳುಕು ಹಾಕಿಕೊಳ್ಳುವುದರಿಂದ ಈ ವೇಳಾಪಟ್ಟಿಯನ್ನು ಆದ್ಯವಾಗಿ ಗಮನಿಸಿ.

Lok Sabha elections 2014 schedule almost ready- Election Commission
ಮಾರ್ಚ್ ಮೊದಲ ವಾರದಲ್ಲಿ ಲೋಕಸಭೆಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಜತೆಗೆ, ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ರಾಜ್ಯಗಳ ವಿಧಾಸನಭೆಗಳಿಗೂ ಒಟ್ಟಿಗೇ ಚುನಾವಣೆ ನಡೆಯಲಿದೆ. ಏಪ್ರಿಲ್-ಮೇ ತಿಂಗಳಲ್ಲಿ 6 ಹಂತಗಳಲ್ಲಿ ಅಂದಾಜು ಒಂದು ತಿಂಗಳ ಕಾಲ 16ನೇ ಲೋಕಸಭೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಮೇ 15ರ ವೇಳೆಗೆ ಎಲ್ಲ ಪ್ರಕ್ರಿಯೆಯೂ ಅಂತ್ಯಗೊಳ್ಳುವ ಅಂದಾಜಿದೆ. ಅದಾದ ನಂತರ ರಾಜಕೀಯ ಪಕ್ಷಗಳಿಗೆ ನೂತನ ಸರಕಾರ ರಚನೆಗೆ 15 ದಿನಗಳ ಗಡುವು ಲಭ್ಯವಿರುತ್ತದೆ. ಏಕೆಂದರೆ 16ನೇ ಲೋಕಸಭೆ ಅವಧಿ ಮುಕ್ತಾಯವಾಗುವುದು ಮೇ 31ಕ್ಕೆ.

ಚುನಾವಣೆಗೆ ಅಗತ್ಯ ಭದ್ರತೆಯನ್ನು ಕಲ್ಪಿಸುವ ಹೊಣೆ ಗೃಹ ಸಚಿವಾಲಯದ್ದಾಗಿದ್ದು, ಚುನಾವಣಾ ಆಯೋಗವು ವೇಳಾಪಟ್ಟಿ ಸಿದ್ಧಪಡಿಸಲು ಆ ಸಚಿವಾಲಯದ ಜತೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ. ಈ ಮಾಹಿತಿಯನ್ನಾಧರಿಸಿ ಗೃಹ ಸಚಿವಾಲಯದ ಮೂಲಗಳು ಹೇಳುವಂತೆ ಮಾರ್ಚ್ ಮೊದಲ ವಾರದಲ್ಲಿ ಚುನಾವಣೆ ಘೋಷಣೆಯಾಗುವ ಲಕ್ಷಣಗಳಿವೆ.

ಆಯೋಗದ ಪ್ರಕಾರ ಪಸ್ತುತ 81.4 ಕೋಟಿ ಮಂದಿ ಮತದಾರರಿದ್ದಾರೆ. 2009ರ ಚುನಾವಣೆಗೆ ಹೋಲಿಸಿದಲ್ಲಿ 9.7 ಕೋಟಿ ಮಂದಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.
ಛತ್ತೀಸ್ ಗಢ, ಜಾರ್ಖಂಡ್ ಮತ್ತು ಒಡಿಶಾ ಬುಡಕಟ್ಟು ಭಾಗಗಳಲ್ಲಿ ಕ್ರಿಶ್ಚಿಯನ್ನರು ಅಧಿಕ ಸಂಖ್ಯೆಯಲ್ಲಿರುವುದರಿಂದ ಈ ರಾಜ್ಯಗಳಲ್ಲಿ ಗುಡ್ ಫ್ರೈಡೆ (ಏ. 19) ಮತ್ತು ಈಸ್ಟರ್ (ಏ.20) ಮುಗಿದ ನಂತರ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಚುನಾವಣೆ ಆಯೋಗವು ಇನ್ನೂ ಕೆಲವು ಹಬ್ಬಗಳನ್ನು ಗಣನೆಗೆ ತೆಗೆದುಕೊಂಡು ವೇಳಾಪಟ್ಟಿಯನ್ನು ಸಿದ್ಧಪಡಿಸಲಿದೆ. ಅಂದರೆ ಏ. 8ರಂದು ರಾಮನವಮಿ, ಏ. 13/14ರಂದು ಬೈಸಾಕಿ, ಬಿಹು, ಅಂಬೇಡ್ಕರ್ ಜಯಂತಿ (ಏ. 14) ದಿನಗಳನ್ನು ಆದ್ಯವಾಗಿ ಪರಿಗಣಿಸಿ ವೇಳಾಪಟ್ಟಿ ಸಿದ್ಧವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+