ಚಿತ್ರಗಳಲ್ಲಿ: ನಮೋ ಜಪದ ನಡುವೆ ಅಡ್ವಾಣಿ ಪ್ರಚಾರ

ಬೆಂಗಳೂರು, ಏ.29: ಲೋಕಸಭೆ ಚುನಾವಣೆಗಾಗಿ ವಿವಿಧ ಪಕ್ಷಗಳು ರಂಗು ರಂಗಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಏಳನೇ ಹಂತದ ಬಹಿರಂಗ ಚುನಾವಣೆಗೆ ತೆರೆ ಬಿದ್ದಿದೆ. ಒಟ್ಟು 9 ಹಂತದ ಚುನಾವಣಾ ಪ್ರಕ್ರಿಯೆ ಇತರೆ ರಾಜ್ಯಗಳಲ್ಲಿ ಜಾರಿಯಲ್ಲಿದೆ. ವಾರಣಾಸಿ, ಅಮೇಥಿ, ರಾಯ್ ಬರೇಲಿ, ತೆಲಂಗಾಣಗಳಲ್ಲಿ ಚುನಾವಣೆ ಬಿಸಿ ಏರುತ್ತಿದ್ದರೆ, ಗಾಂಧಿನಗರದಲ್ಲಿ ಹಿರಿಯ ಜೀವಿ ಅಡ್ವಾಣಿ ಅವರು ಏಕಾಂಗಿಯಾಗಿ ಸಂಚರಿಸುತ್ತಿದ್ದಾರೆ.

ರಥಯಾತ್ರೆಗಳ ಮೂಲಕ ಚುನಾವಣಾ ಪ್ರಚಾರಕ್ಕೆ ರಂಗು ತಂದಿದ್ದ ಎಲ್.ಕೆ ಅಡ್ವಾಣಿ ಅವರ ಪ್ರಚಾರದ ಬಗ್ಗೆ ಮೋದಿ ತಲೆಕೆಡಿಸಿಕೊಳ್ಳುತ್ತಿಲ್ಲವೇಕೆ? ಎಂಬ ಪ್ರಶ್ನೆ ಎದ್ದಿದೆ. ಆದರೆ, ಅಡ್ವಾಣಿ ಅವರು ಆರನೇ ಬಾರಿಗೆ ಸಂಸತ್ತು ಪ್ರವೇಶಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿದ್ದಾರೆ. ಮೋದಿ ಆಪ್ತೆ ಆನಂದಿಬೇನ್ ಪಟೇಲ್ ಅವರು ಅಡ್ವಾಣಿ ಅವರ ಪ್ರಚಾರದ ಹೊಣೆ ಹೊತ್ತುಕೊಂಡಿದ್ದರು..

ಗಾಂಧಿನಗರದಿಂದ 1991 ರಲ್ಲಿ ಅಡ್ವಾಣಿ ಮೊದಲ ಗೆಲುವು ಪಡೆದಿದ್ದರು. ನಂತರ 1998,1999,2004 ಹಾಗೂ 2009 ರಲ್ಲಿ ಸಂಸತ್ತು ಪ್ರವೇಶಿಸಿದರು.ಅಡ್ವಾಣಿ ಪರ ಪುತ್ರಿ ಪ್ರತಿಭಾ, ಪುತ್ರ ಜಯಂತ್ ಕೂಡಾ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ನಿಂದ ಮಾಜಿ ಶಾಸಕ ಕಿರೀಟ್ ಪಟೇಲ್ ಕಣದಲ್ಲಿದ್ದಾರೆ. ಏ.30ರಂದು ಒಂದೇ ಹಂತರದಲ್ಲಿ 26 ಸೀಟುಗಳಿಗೆ ಗುಜರಾತಿನಲ್ಲಿ ಮತದಾನ ನಡೆಯಲಿದೆ.

ಪಟಿಯಾಲಾ, ಕಾಶ್ಮೀರ,ಅಮೇಥಿ, ರಾಯ್ ಬರೇಲಿ,ಅಮೃತ ಸರ್, ಹೈದರಾಬಾದ್ ಸೇರಿದಂತೆ ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ನಡೆದಿರುವ ಚುನಾವಣಾ ಪ್ರಚಾರದ ಚಿತ್ರಗಳನ್ನು ಇಲ್ಲಿ ತಪ್ಪದೆ ನೋಡಿ..

ಗಾಂಧಿನಗರದಲ್ಲಿ ಹಿರಿಯ ರಾಜಕಾರಣಿ

ಗಾಂಧಿನಗರದಲ್ಲಿ ಹಿರಿಯ ರಾಜಕಾರಣಿ

ಗಾಂಧಿನಗರದಲ್ಲಿ ಚುನಾವಣಾ ಪ್ರಚಾರ ನಿರತ ಹಿರಿಯ ರಾಜಕಾರಣಿ ಎಲ್ ಕೆ ಅಡ್ವಾಣಿ

ಪಟಿಯಾಲಾದಲ್ಲಿ ಮೋದಿ ಅಲೆ ಹೀಗಿದೆ

ಪಟಿಯಾಲಾದಲ್ಲಿ ಮೋದಿ ಅಲೆ ಹೀಗಿದೆ

ಪಟಿಯಾಲಾದಲ್ಲಿ ಮೋದಿ ಅಲೆಯಲ್ಲಿ ತೇಲುತ್ತಿರುವ ಚಿಣ್ಣರು

ಕಾಶ್ಮೀರದಲ್ಲಿ ಪಿಡಿಪಿ ಪ್ರಚಾರ ಸಭೆ

ಕಾಶ್ಮೀರದಲ್ಲಿ ಪಿಡಿಪಿ ಪ್ರಚಾರ ಸಭೆ

ಪಿಡಿಪಿ ಮುಖಂಡ ಮುಫ್ತಿ ಮಹಮ್ಮದ್ ಸೈಯದ್ ಅವರು ಶ್ರೀನಗರದ ಅಭ್ಯರ್ಥಿ ತಾರೀಖ್ ಹಮೀದ್ ಕರಾ ಪರ ಪ್ರಚಾರ ನಡೆಸಿದ್ದಾರೆ.

ಬೆಂಗಾಳದಲ್ಲಿ ಗಾಯಕ-ನಾಯಕ ಜೋಡಿ

ಬೆಂಗಾಳದಲ್ಲಿ ಗಾಯಕ-ನಾಯಕ ಜೋಡಿ

ಬೆಂಗಾಳದಲ್ಲಿ ಗಾಯಕ ಬಪ್ಪಿ ಲಹಿರಿ ಅವರು ಮೋದಿ ಜತೆ ಕೊಟ್ಟ ಪೋಸ್

ಪ್ರಿಯಾಂಕಾ ಗಾಂಧಿ ಪ್ರಚಾರದ ವೈಖರಿ

ಪ್ರಿಯಾಂಕಾ ಗಾಂಧಿ ಪ್ರಚಾರದ ವೈಖರಿ

ಅಮೇಥಿಯಲ್ಲಿ ಸೋದರ ರಾಹುಲ್ ಗಾಂಧಿ ಪರ ಪ್ರಿಯಾಂಕಾ ಗಾಂಧಿ ಪ್ರಚಾರ

ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ

ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ

ರಾಯ್ ಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಜನಸ್ಪಂದನ ನಡೆಸುತ್ತಾ ತಾಯಿ ಸೋನಿಯಾ ಗಾಂಧಿ ಪರ ಪ್ರಚಾರ ನಡೆಸಿದ್ದಾರೆ.

ಅಮೇಥಿಯಲ್ಲಿ ಬಿಜೆಪಿ ನಾಯಕರ ಪ್ರಚಾರ

ಅಮೇಥಿಯಲ್ಲಿ ಬಿಜೆಪಿ ನಾಯಕರ ಪ್ರಚಾರ

ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಪರ ನಿತಿನ್ ಗಡ್ಕರಿ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರಿಂದ ಪ್ರಚಾರ

ಹೈದರಾಬಾದಿನಲ್ಲಿ ಸೋನಿಯಾ ಗಾಂಧಿ

ಹೈದರಾಬಾದಿನಲ್ಲಿ ಸೋನಿಯಾ ಗಾಂಧಿ

ಹೈದರಾಬಾದಿನಲ್ಲಿ ಸೋನಿಯಾ ಗಾಂಧಿ ಅವರು ಆಗಮಿಸಿದ ಸಂದರ್ಭದಲ್ಲಿ ಸೆರೆ ಸಿಕ್ಕ ಚಿತ್ರ

ಎಎಪಿ ನಾಯಕರಿಂದ ಮತಯಾಚನೆ

ಎಎಪಿ ನಾಯಕರಿಂದ ಮತಯಾಚನೆ

ಅಮೃತ ಸರ್ ನಲ್ಲಿ ಎಎಪಿ ಅಭ್ಯರ್ಥಿ ದಲ್ಜಿತ್ ಸಿಂಗ್ ಪರ ಯೋಗೇಂದ್ರ ಯಾದವ್ ಅವರಿಂದ ಮತಯಾಚನೆ

ಎಎಪಿ ಅಭ್ಯರ್ಥಿ ಪರ ಪ್ರಚಾರ

ಎಎಪಿ ಅಭ್ಯರ್ಥಿ ಪರ ಪ್ರಚಾರ

ಎಎಪಿ ಅಭ್ಯರ್ಥಿ ಜಾವೇದ್ ಜಫ್ರಿ ಪರ ಪ್ರಚಾರ ನಿರತ ಬಾಲಿವುಡ್ ಮಂದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+