ಚಿತ್ರಗಳಲ್ಲಿ: ಮೋದಿ ಅಲೆ ಶೋ, ಅರವಿಂದ್ ಗಂಗಾಪೂಜೆ
ಬೆಂಗಳೂರು, ಏ.25: ಲೋಕಸಭೆ ಚುನಾವಣೆಗಾಗಿ ವಿವಿಧ ಪಕ್ಷಗಳು ರಂಗು ರಂಗಿನ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಆರನೇ ಹಂತದ ಚುನಾವಣೆ ಏ.25ರಂದು ಭರ್ಜರಿ ಶೇಕಡಾವಾರು ಮತದಾನದೊಂದಿಗೆ ನಡೆದಿದೆ. ಗುರುವಾರ ಮತದಾನ, ವಾರಣಾಸಿಯಲ್ಲಿ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ರೋಡ್ ಶೋ ಅಲ್ಲದೆ ಚುನಾವಣಾ ಪ್ರಚಾರ ಕೂಡಾ ಜಾರಿಯಲಿತ್ತು. ಒಟ್ಟು 9 ಹಂತದ ಚುನಾವಣಾ ಪ್ರಕ್ರಿಯೆ ಇತರೆ ರಾಜ್ಯಗಳಲ್ಲಿ ಜಾರಿಯಲ್ಲಿದೆ.
ವಾರಣಾಸಿಯಲ್ಲಿ ಕದನದ ಬಿಸಿ ದಿನೇದಿನೇ ಜೋರಾಗುತ್ತಿದೆ. ಬೃಹತ್ ರೋಡ್ ಶೋ ನಂತರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸಿದರು. ಅತ್ತ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರು ಸಹಚರ ಜತೆ ಕುಳಿತು ಗಂಗಾ ಮಾತೆಗೆ ಆರತಿ ಬೆಳಗುತ್ತಿದ್ದರು. ರಾಯ್ ಬರೇಲಿಯಲ್ಲಿ ಅಮ್ಮ ಸೋನಿಯಾ ಗಾಂಧಿ ಪರ ಬಿರುಸಿನ ಪ್ರಚಾರ ನಡೆಸಿರುವ ಪ್ರಿಯಾಂಕಾ ಗಾಂಧಿ ಮತ್ತೊಮ್ಮೆ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ವಾರಣಾಸಿ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ನಡೆದಿರುವ ಚುನಾವಣಾ ಪ್ರಚಾರದ ಚಿತ್ರಗಳನ್ನು ಇಲ್ಲಿ ತಪ್ಪದೆ ನೋಡಿ..

ವಾರಣಾಸಿ ಮೋದಿ ಅವರ ರೋಡ್ ಶೋ
ವಾರಣಾಸಿಯಲ್ಲಿ ಗುರುವಾರ ಮೋದಿ ಅವರ ರೋಡ್ ಶೋ ಬಗ್ಗೆ ಕಾಂಗ್ರೆಸ್ ಕಿಡಿಕಾರಿದ್ದು, 6ನೇ ಹಂತದ ಮತದಾನ ನಡೆಯುವ ವೇಳೆಗೆ ಈ ರೀತಿ ರೋಡ್ ಶೋ ನಡೆಸಿದ್ದು ತಪ್ಪು ಎಂದಿದೆ. ಲಕ್ಷಾಂತರ ಜನ ಸಮೂಹ ಕಂಡು ಕಾಂಗ್ರೆಸ್ ಬೆಚ್ಚಿ ಬಿದ್ದಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಸೋಮನಾಥ್ ಭಾರ್ತಿ ಪರ ಪ್ರತಿಭಟನೆ
ದೆಹಲಿ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಮೇಲಿನ ಹಲ್ಲೆ ಖಂಡಿಸಿ ಎಎಪಿ ಮುಖ್ಯಸ್ಥ ಪ್ರತಿಭಟನೆ ನಡೆಸಿದ ಚಿತ್ರ

ಮೋದಿ ರೋಡ್ ಶೋ, ಇತ್ತ ಗಂಗಾಪೂಜೆ
ಅತ್ತ ಬಿಜೆಪಿ ಅಭ್ಯರ್ಥಿ ಮೋದಿ ರೋಡ್ ಶೋನಲ್ಲಿ ನಿರತರಾಗಿದ್ದರೆ, ಇತ್ತ ಗಂಗಾಪೂಜೆ ಮಾಡುವಲ್ಲಿ ಅರವಿಂದ್ ಕೇಜ್ರಿವಾಲ್ ನಿರತರಾಗಿದ್ದರು. ದಶಾಶ್ವಮೇಧ ಘಾಟ್ ನಲ್ಲಿ ಎಎಪಿ ಸದಸ್ಯರೊಂದಿಗೆ ಗಂಗಾ ಮಾತೆಯನ್ನು ಪೂಜಿಸಿದರು.

ತಮಿಳುನಾಡಿನಲ್ಲಿ ಕುಡುಕ ಮತದಾರನ ಕತೆ
ತಮಿಳುನಾಡಿನಲ್ಲಿ ಕುಡುಕ ಮತದಾರನೊಬ್ಬ ನೈಟಿಧಾರಿಯಾಗಿ ಬಂದುಇವಿಎಂ ಎತ್ತಿಕೊಂಡು ಓಡಿ ಹೋದ ಘಟನೆ ತಿರುವಳ್ಳುರ್ ಲೋಕಸಭಾ ಕ್ಷೇತ್ರದ ತಿರುತ್ತನಿಯಲ್ಲಿ ನಡೆಯಿತು.

ನಟಿ ಪೂನಂ ದಿಲ್ಲೋನ್ ಪ್ರಚಾರ
ಅಮೃತ ಸರ್ ಬಿಜೆಪಿ ಅಭ್ಯರ್ಥಿ ಅರುಣ್ ಜೇಟ್ಲಿ ಪರ ನಟಿ ಪೂನಮ್ ದಿಲ್ಲೋನ್ ಮತಯಾಚನೆ ಮಾಡಿದರು.

ಲಕ್ನೋದಲ್ಲಿ ರಾಹುಲ್ ಗಾಂಧಿ
ಲಕ್ನೋದಲ್ಲಿ ರಾಹುಲ್ ಗಾಂಧಿ ಅವರು ರಿತು ಬಹುಗಣ ಪರ ಮತಯಾಚನೆ ಮಾಡಿದ ದೃಶ್ಯ

ಗುಜರಾತಿನಲ್ಲಿ ಸೋನಿಯಾ ಗಾಂಧಿ
ಗುಜರಾತಿನಲ್ಲಿ ಸೋನಿಯಾ ಗಾಂಧಿ ಅವರು ಪಕ್ಷದ ಮುಖಂಡ ಶಂಕರ್ ಸಿಂಗ್ ವಘೇಲ ಅವರ ಜತೆ ಮಹೆಸಾನಾ ಜಿಲ್ಲೆಯ ಖೆರಲು ಗ್ರಾಮದಲ್ಲಿ ಮತಯಾಚನೆ ಮಾಡಿದರು.












Click it and Unblock the Notifications