ಚುನಾವಣಾ ಎಕ್ಸಿಟ್ ಪೊಲ್ ಸಮೀಕ್ಷೆಗಳ ಸಂಗ್ರಹ
ಬೆಂಗಳೂರು, ಮೇ.14: ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಮುನ್ನಡೆ ಗಳಿಸಲಿದೆ ಎಂಬುದರ ಬಗ್ಗೆ ದೇಶದ ಪ್ರಮುಖ ಸುದ್ದಿವಾಹಿನಿಗಳು ನಡೆಸಿದ ಚುನಾವಣಾ ಎಕ್ಸಿಟ್ ಪೋಲ್ ಸಮೀಕ್ಷೆ ವರದಿಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇಲ್ಲಿ ನೀವು ಓದುತ್ತಿರುವುದು ಮೊದಲೇ ಪ್ರಕಟಿತ ಸಮೀಕ್ಷಾ ಸುದ್ದಿಗಳ ಸಂಗ್ರಹಿತ ಪುಟ. [ಪೂರ್ವಸಮೀಕ್ಷೆಗಳ ಸಂಗ್ರಹ]
ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆ ಪ್ರಸಾರಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದ ರೀತಿಯಲ್ಲೇ ಎಕ್ಸಿಟ್ ಪೋಲ್ ವರದಿ ಪ್ರಸಾರಕ್ಕೂ ಕಡಿವಾಣ ಹಾಕಲಾಗಿತ್ತು. ಮೇ 12ರ ಸಂಜೆ 6.30ರವರೆಗೆ ಯಾವುದೇ ರಾಷ್ಟ್ರೀಯ ಮಟ್ಟದ ಸಮೀಕ್ಷೆಗಳ ಪ್ರಸಾರ ಮಾಡಲಾಯಿತು. [ಕಾಪ್ಸ್ ಸಮೀಕ್ಷೆ]

ಆದರೆ, ಎಕ್ಸಿಟ್ ಪೋಲ್ ಅಷ್ಟಾಗಿ ನಿಖರವಾದ ಚಿತ್ರಣ ನೀಡಲು ಸಾಧ್ಯವಿಲ್ಲ, ಸಿಎನ್ ಎನ್ ಐಬಿಎನ್ ಹಾಗೂ ಎನ್ ಡಿಟಿವಿ ಮಾಧ್ಯಮಗಳು ಬುಧವಾರ ಮತ್ತೊಂದು ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಟಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಎನ್ ಡಿಟಿವಿ ನೆಟ್ವರ್ಕ್ ನ ಸಮೂಹ ಸಿಇಒ ವಿಕ್ರಮ್ ಚಂದ್ರ ಸುಳಿವು ನೀಡಿದ್ದಾರೆ. ಇದಕ್ಕೂ ಮುನ್ನ ಎಕ್ಸಿಟ್ ಪೋಲ್ ಸಮೀಕ್ಷೆಗಳ ಸಂಗ್ರಹದತ್ತ ಒಮ್ಮೆ ಕಣ್ಣು ಹಾಯಿಸಿ...[ಸಿವೋಟರ್ ಸಮೀಕ್ಷೆ]
| ಸಮೀಕ್ಷಾ ಸಂಸ್ಥೆ | ಕಾಂಗ್ರೆಸ್/UPA | ಬಿಜೆಪಿ /NDA | ಎಎಪಿ/ಇತರೆ |
| ಎನ್ ಡಿಟಿವಿ | 108 | 279 | 156 |
| ಸಿಎನ್ಎನ್ | 97 | 276 | 170 |
| ಎಬಿಪಿ | 97 | 281 | 4/161 |
| ಟೈಮ್ಸ್ ನೌ | 148 | 249 | 146 |
| ಇಂಡಿಯಾ ಟಿವಿ | 101 | 272 | 156 |












Click it and Unblock the Notifications