ರಾಹುಲ್ ಗಾಂಧಿಗೆ ಕೈಕೊಟ್ಟ ಬೆಟ್ಟಿಂಗ್ ಲೋಕ
ಅಹಮದಾಬಾದ್, ಏ.29-ಹಾಲಿ ಲೋಕಸಭಾ ಚುನಾವಣೆ ಮುಕ್ತಾಯಗೊಳ್ಳಲು ಇನ್ನೂ ಬಹಳಷ್ಟು ಕಾಲವಿದೆ. ಆದರೆ ದೇಶದಾದ್ಯಂತ ಬೆಟ್ಟಿಂಗ್ ಲೋಕ ಆದಾಗಲೇ ಗರಿಗೆದರಿದೆ. ಗಮನಾರ್ಹವೆಂದರೆ ಬೆಟ್ಟಿಂಗ್ ಲೋಕದಲ್ಲಿ ಮೋದಿ ಹವಾನೇ ಹೆಚ್ಚಾಗಿ ಗಾಳಿ ಬೀಸುತ್ತಿದೆ.
ರಾಹುಲ್ ಬೆಟ್ಟಿಂಗ್ ಬೋರ್ಡಿಗೇ ಇಲ್ಲ: ಆದರೆ ಪಂಟರುಗಳು ಅಪ್ಪಿತಪ್ಪಿಯೂ ಕಾಂಗ್ರೆಸ್ ಯುವರಾಜನತ್ತ ಕಣ್ಣುಹೊರಳಿಸುತ್ತಿಲ್ಲ. ಅಂದರೆ ಪಂಟರುಗಳು ಅದಾಗಲೇ ರಾಹುಲ್ ಗಾಂಧಿಯ ಭವಿಷ್ಯ ನುಡಿದಾಗಿದೆ ಅನ್ನಬಹುದು.

ಈ ಬಾರಿ ಬಿಜೆಪಿ ಟೂ ಹಂಡ್ರೆಡ್ ಕ್ರಾಸ್ ಆಗುತ್ತದಂತೆ, ಮೋದಿ ಪ್ರಧಾನಿ ಆಗೋದು ಗ್ಯಾರಂಟಿಯಂತೆ ಎಂದೆಲ್ಲಾ ಬೆಟ್ಟಿಂಗ್ ಪ್ರವೀಣರು ಭವಿಷ್ಯ ನುಡಿಯುತ್ತಿದ್ದಾರೆ. ಇದು ಬರೀ ಬಾಯ್ಮಾತು ಅಲ್ಲ. ಭಾರೀ ಹಣವನ್ನೂ ಬಾಜಿಗೆ ಬಿಡಲಾಗಿದೆ. ಮತ್ತೊಂದೆಡೆ ಇದೇ ಬೆಟ್ಟಿಂಗ್ ಪ್ರವೀಣರು 'ಬೆಟ್ಟಿಂಗ್ ಗೆ ರಾಹುಲ್ ಗಾಂಧಿ ಹೆಸರೇ ಎತ್ತಬೇಡಿ' ಅನ್ನುತ್ತಿದ್ದಾರೆ. ಇನ್ನು ಪಂಟರುಗಳು ಕಾಂಗ್ರೆಸ್ ಪಕ್ಷ 110ಕ್ಕಿಂತ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಬೆಟ್ ಕಟ್ಟಲು ಸಿದ್ಧವಿದ್ದರೂ ಯಾರೂ ಟೇಕ್ ಗೆ ಬರುತ್ತಿಲ್ಲವಂತೆ ಎಂದು ವರದಿಗಳು ಹೇಳುತ್ತಿವೆ.
ಬಿಜೆಪಿ 200 ಸ್ಥಾನ ಗೆಲ್ಲಲಿದೆ ಎಂದು ಒಂದು ರೂ. ಬೆಟ್ ಕಟ್ಟುವವರಿಗೆ 10 ಪೈಸೆ 'ರೇಟ್' ಅನ್ನು ಬುಕ್ಕಿಗಳು ನಿಗದಿಪಡಿಸಿದ್ದಾರೆ. ಒಂದು ವೇಳೆ ಬಿಜೆಪಿ 200 ಸ್ಥಾನ ಗೆದ್ದರೆ, 100 ರೂ. ಬಾಜಿ ಕಟ್ಟಿದ್ದವರಿಗೆ 110 ರೂ. ನೀಡಲಾಗುತ್ತದಂತೆ.
ಇನ್ನು ಮೋದಿ ಪ್ರಧಾನಿಯಾಗ್ತಾರೆಂದು ಬೆಟ್ ಕಟ್ಟುವವರಿಗೆ 45 ಪೈಸೆ 'ರೇಟ್' ನಿಗದಿಪಡಿಸಲಾಗಿದೆ. ಒಂದು ವೇಳೆ ಮೋದಿ ಪ್ರಧಾನಿಯಾದರೆ ಅವರ ಪರ 100 ರೂ. ಬಾಜಿ ಕಟ್ಟುವ ವ್ಯಕ್ತಿಗಳಿಗೆ 145 ರೂ. ದೊರೆಯಲಿದೆ. ಒಂದು ತಿಂಗಳ ಹಿಂದೆಯೂ ಬೆಟ್ಟಿಂಗ್ ನಲ್ಲಿ ಮೋದಿಗೆ ಇದೇ ಮೌಲ್ಯವಿತ್ತು ಎಂಬುದು ಗಮನಾರ್ಹ.
ರಾಹುಲ್ running item ಅಲ್ಲ:
ಆದರೆ ರಾಹುಲ್ ಮೌಲ್ಯ ಕಳೆದೊಂದು ತಿಂಗಳಲ್ಲಿ ಕುಸಿಯುತ್ತಾ ಬಂದಿದೆ. ರಾಹುಲ್ ಗಾಂಧಿ ಪರ 10 ರೂ. ಬೆಟ್ಟಿಂಗ್ ನಿಗದಿಪಡಿಸಲಾಗಿದೆ. ಚುನಾವಣೆ ಬಳಿಕ ರಾಹುಲ್ ಗಾಂಧಿ ಅವರು ಪ್ರಧಾನಿಯಾದರೆ ಅವರ ಪರ 100 ರೂ. ಬೆಟ್ಟಿಂಗ್ ಕಟ್ಟಿದವರಿಗೆ 10 ಸಾವಿರ ರೂ. ಪ್ರಾಪ್ತಿಯಾಗುತ್ತದೆ.
ಇದು ಬೆಟ್ಟಿಂಗ್ ಸಾಮ್ರಾಜ್ಯ: ಬೆಟ್ಟಿಂಗ್ ಮಾರುಕಟ್ಟೆಯ ನಿಯಮಗಳ ಪ್ರಕಾರ ಯಾವ ವ್ಯಕ್ತಿ/ಪಕ್ಷಕ್ಕೆ ಅತ್ಯಂತ ಕಡಿಮೆ ರೇಟ್ ನಿಗದಿಪಡಿಸಲಾಗುತ್ತದೋ ಆ ವ್ಯಕ್ತಿ/ಪಕ್ಷ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಯಾವ ವ್ಯಕ್ತಿ/ಪಕ್ಷಕ್ಕೆ ಹೆಚ್ಚು ರೇಟ್ ನಿಗದಿಪಡಿಸಲಾಗುತ್ತದೋ ಆ ವ್ಯಕ್ತಿ/ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಜಾಸ್ತಿ ಇರುತ್ತದೆ.
ಬೆಟ್ಟಿಂಗ್ ಹೆಚ್ಚು ಚಾಲ್ತಿಯಲ್ಲಿರುವ ರಾಜಕೋಟ್, ಇಂದೋರ್, ಅಹಮದಾಬಾದ್ ಮುಂತಾದ ಕಡೆಗಳಲ್ಲಿ 'ಮುಂದಿನ ಪ್ರಧಾನಿ ರಾಹುಲ್ ಗಾಂಧಿ' ಬಗ್ಗೆ ಬೆಟ್ ಕಟ್ಟಲು ಯಾರೂ ಮುಂದೆ ಬರುತ್ತಿಲ್ವಂತೆ.
ಈ ಸಂದರ್ಭದಲ್ಲಿ ಒಂದು ಒಪೀನಿಯನ್ ಪೋಲ್ ಫಲಿತಾಂಶದತ್ತ ಕಣ್ಣಾಡಿಸುವುದು ಒಳಿತು. Times Now- C Voter ಚುನಾವಣಾ ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ ಎನ್ ಡಿಎ ಕೂಟಕ್ಕೆ 227 ಸೀಟುಗಳು, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಗೆ 101 ಸೀಟು ಮತ್ತು NDA -UPA ಬಿಟ್ಟು ಉಳಿದ ಮಿತ್ರ ಪಕ್ಷಗಳಿಗೆ 215 ಸೀಟುಗಳು ಬರುತ್ತವೆ ಎನ್ನಲಾಗಿದೆ.












Click it and Unblock the Notifications