ಮಲ್ಲಿಕಾರ್ಜುನ ಖರ್ಗೆ ಸೇರಿ 38 ಅಭ್ಯರ್ಥಿಗಳನ್ನು ಹೆಸರಿಸಿದ ಕಾಂಗ್ರೆಸ್
ನವದೆಹಲಿ, ಮಾರ್ಚ್ 24: 2019ರ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ಶನಿವಾರ ಮಧ್ಯರಾತ್ರಿ ನಂತರ 38 ಅಭ್ಯರ್ಥಿಗಳ ಹೊಚ್ಚ ಹೊಸ ಪಟ್ಟಿ ಪ್ರಕಟಿಸಿದೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕರ್ನಾಟಕದ ಕರ್ನಾಟಕದ ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಕಾಂಗ್ರೆಸ್ಸಿನ 8ನೇ ಪಟ್ಟಿ ಇದಾಗಿದ್ದು, ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ್, ಉತ್ತರಪ್ರದೇಶ, ಮಣಿಪುರ ಹಾಗೂ ಮಹಾರಾಷ್ಟ್ರದಿಂದ ಲೋಕಸಭೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರುಗಳನ್ನು ನೀಡಲಾಗಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮತ್ರಿ ದಿಗ್ವಿಜಯ್ ಸಿಂಗ್, ಉತ್ತರಾಖಂಡ್ ನ ಮಾಜಿ ಸಿಎಂ ಹರೀಶ್ ರಾವತ್, ಬಿಜೆಪಿ ಮುಖಂಡ ಬಿಸಿ ಖಂಡೂರಿ ಅವರ ಪುತ್ರ ಮನೀಶ್ ಖಂಡೂರಿ, ರಾಹುಲ್ ಗಾಂಧಿ ಆಪ್ತ ವಲಯದ ಮೀನಾಕ್ಷಿ ನಟರಾಜನ್, ಪಕ್ಷದ ಮಾಜಿ ವಕ್ತಾರ ರಶೀದ್ ಅಲಿ ಅವರಿಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ.

ಒಟ್ಟಾರೆ, ಕಾಂಗ್ರೆಸ್ ಇಲ್ಲಿತನಕ(ಮಾರ್ಚ್ 24,2019) ತನಕ 218 ಅಭ್ಯರ್ಥಿಗಳ ಹೆಸರನ್ನು ಸೂಚಿಸಿದೆ. 543 ಲೋಕಸಭಾ ಸ್ಥಾನಗಳಿಗಾಗಿ ಏಪ್ರಿಲ್ 11 ರಿಂದ ಮೇ 19ರ ತನಕ ದೇಶದೆಲ್ಲೆಡೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕದಲ್ಲಿ ಯುವ ಕಾಂಗ್ರೆಸ್ಸಿಗರಿಗೆ ಆದ್ಯತೆ ನೀಡಿ ರಿಜ್ವಾನ್ ಅರ್ಷದ್ ಹಾಗೂ ಮಿಥುನ್ ರೈಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಬಾಗಲಕೋಟೆಯಿಂದ ವೀಣಾ ಕಾಶಪ್ಪನವರ್ ಅವರಿಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಎಂಬ ಕುತೂಹಲ ಇನ್ನು ಉಳಿದಿದೆ.
* ಕಲಬುರಗಿ : ಮಲ್ಲಿಕಾರ್ಜುನ ಖರ್ಗೆ
* ಬಾಗಲಕೋಟೆ : ವೀಣಾ ಕಾಶಪ್ಪನವರ್
* ಚಿಕ್ಕೋಡಿ : ಪ್ರಕಾಶ್ ಹುಕ್ಕೇರಿ
* ಬೆಳಗಾವಿ : ವಿರುಪಾಕ್ಷಿ ಸಾಧನ್ನವರ್
* ರಾಯಚೂರು : ಬಿ.ವಿ ನಾಯಕ್
* ಬಳ್ಳಾರಿ ; ವಿಎಸ್ ಉಗ್ರಪ್ಪ
* ಬೀದರ್ : ಈಶ್ವರ ಖಂಡ್ರೆ
* ಕೊಪ್ಪಳ : ರಾಜಶೇಖರ ಹಿಟ್ನಾಳ್
* ಹಾವೇರಿ : ಡಿ. ಆರ್ ಪಾಟೀಲ್
* ದಕ್ಷಿಣ ಕನ್ನಡ : ಮಿಥುನ್ ರೈ
* ದಾವಣಗೆರೆ: ಶಾಮನೂರು ಶಿವಶಂಕರಪ್ಪ
* ಚಿತ್ರದುರ್ಗ: ಬಿಎನ್ ಚಂದ್ರಪ್ಪ
* ಮೈಸೂರು : ವಿಜಯ್ ಶಂಕರ್
* ಬೆಂಗಳೂರು ಕೇಂದ್ರ: ರಿಜ್ವಾನ್ ಅರ್ಷದ್
* ಬೆಂಗಳೂರು ಗ್ರಾಮಾಂತರ: ಡಿಕೆ ಸುರೇಶ್
* ಚಾಮರಾಜನಗರ: ಆರ್ ಧ್ರುವನಾರಯಣ್
* ಚಿಕ್ಕಬಳ್ಳಾಪುರ: ವೀರಪ್ಪ ಮೊಯ್ಲಿ
* ಕೋಲಾರ : ಕೆಎಚ್ ಮುನಿಯಪ್ಪ












Click it and Unblock the Notifications