Lok Poll Survey: ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನಿಶ್ಚಿತ?, ಬಿಆರ್‌ಎಸ್‌ಗೆ ಎಷ್ಟು? ಸಮೀಕ್ಷೆಯ ಅಂಶಗಳು
ಹೈದರಾಬಾದ್, ನವೆಂಬರ್ 28: ಪಂಚರಾಜ್ಯ ಚುನಾವಣೆಗಳ ಪೈಕಿ 119 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತೆಲಂಗಾಣದಲ್ಲಿ (Telangana Poll 2023) ನವೆಂಬರ್ 30 ರಂದು ಒಂದೇ ಭಾರಿಗೆ ಮತದಾನ ನಡೆಯಲಿದೆ. ಚುನಾವಣೆ ಕುರಿತು 'ಲೋಕಪೋಲ್ ಸಮೀಕ್ಷೆ' (Lok Poll Survey) ಬಹಿರಂಗವಾಗಿದೆ. ಈ ಬಾರಿ ಆಡಳಿತ ಪಕ್ಷದ ವಿರುದ್ಧ ಮತದಾರರು ಪ್ರಭುಗಳು 'ಕೈ' ನಾಯಕರ ಕೈ ಅಧಿಕಾರ ನೀಡಲಿದ್ದಾರೆ ಎಂಬ ಅಂಶ ಹೊರ ಬಿದ್ದಿದೆ.
ಹೌದು, ಕಳೆದ ವಾರ ಪ್ರಕಟಗೊಂಡಿದ್ದ ಸಮೀಕ್ಷೆಯಲ್ಲಿ ಸಹ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಇದೀಗ ನವೆಂಬರ್ 22ರಿಂದ ನವೆಂಬರ್ 27ರವರೆಗೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು ಕ್ಷೇತ್ರಗಳಲ್ಲಿ ಲೀಲಾಜಾಲವಾಗಿ 72 - 74 ಸೀಟುಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ಮಾಹಿತಿ ನೀಡಿದೆ.

ಆಡಳಿತ ಪಕ್ಷ ಭಾರತ್ ರಾಷ್ಟ್ರೀಯ ಸಮಿತಿ (BRS)ವು ಈ ಬಾರಿ ಅಧಿಕಾರ ಕಳೆದುಕೊಂಡು ಭಾರೀ ಅಂತರದಲ್ಲಿ ಸೋಲು ಕಾಣಲಿದೆ. ಕಾಂಗ್ರೆಸ್ ವಿರುದ್ಧ ಬಿಆರ್‌ಎಸ್ ಪಕ್ಷ ಕೇವಲ 33-35 ಸ್ಥಾನಗಳನ್ನು ಪಡೆದು ಮಕಾಡೆ ಮಲಗುವ ಸಾಧ್ಯತೆಗಳು ಇವೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.
'ಕೈ' ಹಿಡಿಯಿತಾ ಭಾವನಾತ್ಮಕ ತಂತ್ರ?
ಈ ಮೂಲಕ ಕಾಂಗ್ರೆಸ್ ಕರ್ನಾಟಕದ ಮಾದರಿ ಅನುಸರಿಸಿ, ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯಲ್ಲಿ ಕಾಂಗ್ರೆಸ್ ಪಾತ್ರವನ್ನು ಸಮಾವೇಶಗಳಲ್ಲಿ ವಿವರಿಸುವ ಮೂಲಕ ಭಾವನಾತ್ಮಕವಾಗಿ ಮತದಾರರನ್ನು ಸೆಳೆದಿತ್ತು. ಇದೀಗ ಚುನಾವಣೆ ಪೂರ್ವ ಸಮೀಕ್ಷೆ ನೋಡಿದರೆ, ಕಾಂಗ್ರೆಸ್‌ನ ರಾಜಕೀಯ ತಂತ್ರಗಳು ತೆಲಂಗಾಣದಲ್ಲಿ ಕೈ ಹಿಡಿಯಲಿವೆ ಎನ್ನಲಾಗುತ್ತಿದೆ.
Presenting you our final numbers for the upcoming #Telangana elections:
— Lok Poll (@LokPoll) November 28, 2023
▪️BRS 33 - 35
▪️INC 72 - 74
▪️AIMIM 5 - 7
▪️BJP 2 - 4
▪️OTH 0 - 1
Sample size: Its a top up survey between 22nd November to 27th November with sample… pic.twitter.com/yVihaBD51z
ಬಿಆರ್‌ಎಸ್ ಮತ್ತು ಕಾಂಗ್ರೆಸ್ ಜೊತೆಗೆ ಈ ಬಾರಿ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿರುವ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸಹ ಶಾತಯಗತಾಯ ಪ್ರಯತ್ನ ಮಧ್ಯೆ ಮಕಾಡೆ ಮಲಗಲಿದೆ. ಇಲ್ಲಿ ಕೇವಲ 2-4 ಸ್ಥಾನಗಳು ಮಾತ್ರ ಕೇಸರಿ ಪಡೆಯ ಪಾಲಾಗಲಿವೆ ಎಂದು ಹೇಳಲಾಗುತ್ತಿದೆ. ಬದಲಾವಣೆ ಬಯಸಿರುವ ಮತದಾರರಿಗೆ ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ ನೀಡುವ ಆಸೆ ಹೊಂದಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಇನ್ನೂ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷವು ಅತೀ ಕಡಿಮೆ ಸ್ಥಾನಗಳನ್ನು ಗಳಿಸಿದರೂ ಸಹಿತ ಇದು ಬಿಜೆಪಿಯನ್ನು ಹಿಂದಿಕ್ಕಲಿದೆ. ಅಂದರೆ ಎಐಎಂಐಎಂ ಪಕ್ಷಕ್ಕೆ 5 - 7 ಸೀಟುಗಳು ಲಭಿಸುವ ಸಾಧ್ಯತೆಗಳು ಇವೆ. ಇತರೆ ಪಕ್ಷಗಳು ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿವೆ ಎಂದು ಲೋಕ್ ಪೋಲ್ ಸರ್ವೇ ತಿಳಿಸಿದೆ.

ತೆಲಂಗಾಣ ಲೋಕ್‌ಪೋಲ್ ಸರ್ವೇ ಪಟ್ಟಿ
ಬಿಆರ್‌ಎಸ್- 33 - 35
ಕಾಂಗ್ರೆಸ್- 72- 4
ಎಐಎಂಐಎಂ- 5-7
ಬಿಜೆಪಿ- 2-4
ಇತರ- 0 - 1
ಕಳೆದ ಬಾರಿ ಇದೇ ತೆಲಂಗಾಣಕ್ಕೆ ಸಂಬಂಧಿಸಿದಂತೆ ಲೋಕ್ ಪೋಲ್ ಸಮೀಕ್ಷೆ ಫಲಿತಾಂಶವನ್ನು ನವೆಂಬರ್ 21ರಂದು ಪ್ರಕಟಿಸಿತ್ತು. ಆಗಲು ಕಾಂಗ್ರೆಸ್ ಪಕ್ಷಕ್ಕೆ ಅತ್ಯಧಿಕ ಸ್ಥಾನಗಳು ಲಭಿಸಲಿದ್ದು, ಈ ಬಾರಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ಅಧಿಕಾರ ಕಳೆದುಕೊಳ್ಳಿದೆ. ಬಿಜೆಪಿಗೂ ಭಾರೀ ಹಿನ್ನಡೆ ಆಗಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿತ್ತು. ಅದಾದ ನಂತರ ಮತ್ತೆ ಒಂದು ವಾರದ ಸಮೀಕ್ಷೆಯು ನವೆಂಬರ್ 28 ರಂದು ಪ್ರಕಟಗೊಂಡಿದೆ.
ನ.21 ಲೋಕ್‌ಪೋಲ್ ಸಮೀಕ್ಷೆ ಪಟ್ಟಿ
ಬಿಆರ್‌ಎಸ್- 36 - 39
ಕಾಂಗ್ರೆಸ್- 69-72
ಎಐಎಂಐಎಂ- 5-6
ಬಿಜೆಪಿ- 2-3
ಇತರ- 0-1
ಸದ್ಯ ಎರಡು ಸಮೀಕ್ಷೆ ನೋಡಿದರೆ ಕಳೆದ ಸಮೀಕ್ಷೆಗಿಂತಲೂ ಇಂದಿನ ಸಮೀಕ್ಷೆಯಲ್ಲಿ ಕಾಂಗ್ರೆಸ್ ಒಂದೆರಡು ಸ್ಥಾನ ಹೆಚ್ಚು ಪಡೆಯಲಿವೆ ಅಂತಲೂ ಮತ್ತು ಕೆಲವು ಸ್ಥಾನಗಳನ್ನು ಬಿಆರ್‌ಎಸ್ ಕಳೆದುಕೊಳ್ಳಲಿದೆ ಅಂತಲೂ ಹೇಳಲಾಗುತ್ತಿದೆ. ತೆಲಂಗಾಣದಲ್ಲಿ ಮತದಾನದಲ್ಲಿ ಎರಡೇ ದಿನ ಬಾಕಿ ಇದೆ. ತೆಲಂಗಾಣ ಜೊತೆಗೆ ಮಧ್ಯಪ್ರದೇಶ, ಮಿಜೋರಾಂ, ಛತ್ತೀಸ್‌ಗಢ ರಾಜ್ಯಗಳಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ರಾಜಸ್ಥಾನ ಸೇರಿದಂತೆ ಎಲ್ಲ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಡಿಸೆಂಬರ್ 3 ರಂದು ಹೊರ ಬೀಳಲಿದೆ.












Click it and Unblock the Notifications