• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಎಂದು ಹೆಮ್ಮೆ ಪಡಲು ಯಾವತ್ತೂ ನಮಗೆ ಕಾರಣಗಳು ಕಡಿಮೆಯಾಗಿಲ್ಲ

|

ಮೂರನೇ ಹಂತದ ಲಾಕ್ ಡೌನ್ ಮತ್ತು ಮಾರಣಾಂತಿಕ ಕೊರೊನಾ ವೈರಸ್ ದಾಳಿಯ ನಡುವೆ, ಸಂಸಾರಿ ಬಾಬ ಎನ್ನುವ ಹೆಸರಿನ ಈ ಕೆಳಗಿನ ಪೋಸ್ಟ್, ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದು ಹೀಗಿದೆ:

   ಬೇರೆ ರಾಜ್ಯಗಳಿಂದ ತಬ್ಲೀಘಿಗಳು ನಮ್ಮ ರಾಜ್ಯಕ್ಕೆ ಬರಬೇಕಾದರೆ ಹೀಗೆ ಮಾಡ್ಲೇಬೇಕು | Sri ramulu

   ಬ್ರಿಟನ್ ಮೂರು ತಿಂಗಳ ನಂತರ ಕೋವಿಡ್ ಸಂಪರ್ಕವನ್ನು ಕಂಡುಹಿಡಿಯುವ ಆ್ಯಪ್ ತಂದಿದೆ. ನಾವೋ, ಎರಡೇ ವಾರದಲ್ಲಿ ಆರೋಗ್ಯ ಸೇತು ಡೆವಲಪ್ ಮಾಡಿದ್ದೇವೆ. ಅಷ್ಟೇ ಅಲ್ಲ, ಅದು ನಾಲ್ಕು ವಾರಗಳಲ್ಲಿ 7.5 ಕೋಟಿ ಜನರನ್ನು ತಲುಪಿದೆ ಕೂಡ.

   ವಿದೇಶದಲ್ಲಿ ಸಿಲುಕಿದವರು ಶೀಘ್ರವೇ ತವರಿಗೆ : ಸಿ.ಟಿ.ರವಿ

   ಮಾರ್ಚ್‌ನಲ್ಲಿ ಶೂನ್ಯವಾಗಿತ್ತು. ಇಂದು ನಾವು ದಿನಕ್ಕೆ ಎರಡು ಲಕ್ಷ ಪರ್ಸನಲ್ ಪ್ರೊಟೆಕ್ಷನ್ ಕಿಟ್ ತಯಾರಿಸುತ್ತಿದ್ದೇವೆ. ಚೀನಾದ ಏಳು ದಿನದಲ್ಲಿ ಕಟ್ಟಿದ ಒಂದು ಸಾವಿರ ಹಾಸಿಗೆಯುಳ್ಳ ಆಸ್ಪತ್ರೆ, ಅಮೆರಿಕಾದ ಒಂದು ಸಾವಿರ ಹಾಸಿಗೆಯುಳ್ಳ ನೌಕಾದಳದ ಕಂಫರ್ಟ್ ಹಡಗು ಸುದ್ದಿಯಾಗುತ್ತದೆ.

   ನಮ್ಮ ದೇಶದ ಆಸ್ಪತ್ರೆಯಲ್ಲಿ ಹಾಸಿಗೆಗಳಿಲ್ಲ ಎಂದರು. ನಾವು ರಾತ್ರೋ ರಾತ್ರಿ 7,000ಕ್ಕೂ ಹೆಚ್ಚು ಹಾಸಿಗೆಯಿರುವ ರೈಲನ್ನೇ ಐಶೋಲೇಶನ್ ವಾರ್ಡ್ ಆಗಿ ಮಾಡಿದೆವು. ಇದು ದೇಶದ ಮೂಲೆ ಮೂಲೆಗೆ ಹೋಗಬಲ್ಲದು. ಇದು ಅಂತರಾಷ್ಟ್ರೀಯ ಸುದ್ದಿ ಆಗಲಿಲ್ಲ ಅಷ್ಟೇ.

   ಹೈಡ್ರೋಕ್ಸೈಕ್ಲೋರೋಕ್ವಿನ್ ಮಾತ್ರೆ

   ಹೈಡ್ರೋಕ್ಸೈಕ್ಲೋರೋಕ್ವಿನ್ ಮಾತ್ರೆ

   ಎಲ್ಲರೂ ತಮ್ಮ ದೇಶ, ತಮ್ಮ ಜನ ಎನ್ನುತ್ತಾ ಮನೆಯಲ್ಲೇ ಕೂತರೆ ನಾವು 55 ರಾಷ್ಟ್ರಗಳಿಗೆ ಹೈಡ್ರೋಕ್ಸೈಕ್ಲೋರೋಕ್ವಿನ್ ಮಾತ್ರೆಗಳನ್ನು ರಫ್ತು ಮಾಡಿದೆವು.

   ಇಕಾನಮಿಯೇ ಮೇಲೆ ಎಂದು ಜಗತ್ತು ನುಡಿದರೆ ಜೀವವೇ ಮುಖ್ಯ ಎಂದು ಲಾಕ್ ಡೌನ್ ನಾವು ಮುಂದೂಡುತ್ತೇವೆ.

   ಸಂಶೋಧನೆ ಫಲಿಸಿದರೆ ಭಾರತಕ್ಕೆ ಜಯ

   ಸಂಶೋಧನೆ ಫಲಿಸಿದರೆ ಭಾರತಕ್ಕೆ ಜಯ

   ಲಸಿಕೆಯ ಸಂಶೋಧನೆಯಲ್ಲಿ ಲಾಭ ಇದೆಯೋ ಇಲ್ಲವೋ ಎನ್ನುವ ಲೆಕ್ಕಾಚಾರ ಬಹಳಷ್ಟು ದೇಶದ್ದು. ನಿಮಗೆ ಗೊತ್ತೇ? ಭಾರತದಲ್ಲಿ ಈಗಾಗಲೇ ಲಸಿಕೆಯ ತಯಾರಿಕೆ ಶುರುವಾಗಿದೆ. ಕೆಲವೇ ತಿಂಗಳಲ್ಲಿ ನಾಲ್ಕು ಕೋಟಿ ಲಸಿಕೆ ತಯಾರಾಗಲಿದೆ. ಸಂಶೋಧನೆ ಫಲಿಸಿದರೆ ಭಾರತಕ್ಕೆ ಜಯ, ಸೋತರೆ ನಮಗೆ ನಷ್ಟ. ಲಾಭ, ನಷ್ಟಕ್ಕಿಂತ ನಮಗೆ ಜೀವ ಮುಖ್ಯ.

   ಹಸಿವೆಯಿಂದ, ಅಗತ್ಯ ವಸ್ತುಗಳ ಕೊರತೆಯಿಂದ ತೊಂದರೆ ಆಗದ ಹಾಗೆ ನೋಡಿಕೊಂಡರು

   ಹಸಿವೆಯಿಂದ, ಅಗತ್ಯ ವಸ್ತುಗಳ ಕೊರತೆಯಿಂದ ತೊಂದರೆ ಆಗದ ಹಾಗೆ ನೋಡಿಕೊಂಡರು

   ವಿವಿಧ ದೇಶಗಳಲ್ಲಿ ಸಿಕ್ಕು ಹಾಕಿಕೊಂಡಿರುವ ನಮ್ಮ ನಿಮ್ಮಂತಹ ಸಾವಿರಾರು ಜನರನ್ನು 64 ವಿಮಾನ, 3 ಹಡಗುಗಳು ಭಾರತದಕ್ಕೆ ಕರೆತರಲಿದೆ.

   ಅಮೆರಿಕಾದಲ್ಲಿ ತೆರಿಗೆ ಕಟ್ಟುವವರ ಸಂಖ್ಯೆ ಜಾಸ್ತಿ. ಭಾರತದಲ್ಲಿ ಕಮ್ಮಿ. ಅಮೆರಿಕಾದ ತಲಾ ಆದಾಯ $62,000 ಡಾಲರ್ ನಮ್ಮಲ್ಲಿ ಬರೀ $2,000 ಡಾಲರ್. ಹಾಗಂತ ಸರಕಾರವೂ ಸುಮ್ಮನಿಲ್ಲ, ಜನರೂ ಸುಮ್ಮನಿಲ್ಲ. ಪ್ರತಿಯೊಬ್ಬರೂ ತಮಗೆ ಗೊತ್ತಿರುವವರು ಹಸಿವೆಯಿಂದ, ಅಗತ್ಯ ವಸ್ತುಗಳ ಕೊರತೆಯಿಂದ ತೊಂದರೆ ಆಗದ ಹಾಗೆ ನೋಡಿಕೊಂಡಿದ್ದಾರೆ.

   ಮನುಷ್ಯತ್ವ ಎನ್ನುವುದು ರವಿಯಾದರೆ ಅದು ಉದಯಿಸುವುದು ಭಾರತದಲ್ಲಿ

   ಮನುಷ್ಯತ್ವ ಎನ್ನುವುದು ರವಿಯಾದರೆ ಅದು ಉದಯಿಸುವುದು ಭಾರತದಲ್ಲಿ

   ನೋಡಿ ಒಮ್ಮೆ ಅಮೆರಿಕಾ ಜನರ ಒದ್ದಾಟವನ್ನು!

   ಮನುಷ್ಯತ್ವ ಎನ್ನುವುದು ರವಿಯಾದರೆ ಅದು ಉದಯಿಸುವುದು ಭಾರತದಲ್ಲಿ, ಹೊಂದಾಣಿಕೆಯ ಬದುಕು ಎನ್ನುವುದು ಧರ್ಮವಾದರೆ ಭಾರತದ ಸಂಸ್ಕೃತಿಯೇ ಅದಕ್ಕೆ ದೇವರು. ಬದುಕಿನಲ್ಲಿ ಹೆಚ್ಚು ಕಡಿಮೆ ಇದ್ದಿದ್ದೇ, ಆದರೆ ಭಾರತೀಯ ಎಂದು ಹೆಮ್ಮೆ ಪಡಲು ಯಾವತ್ತೂ ನಮಗೆ ಕಾರಣಗಳು ಕಡಿಮೆಯಾಗಿಲ್ಲ, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಭಾರತ ಬದಲಾಗುತ್ತಿದೆ!

   English summary
   Lockdown And Coronavirus: Spirit Of Message Spreading In Social Media,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X