ಅನ್ನದಾತರ ಕಷ್ಟಕ್ಕೆ ಮಿಡಿದ ಕಂದಮ್ಮನ ಹೃದಯ: ಪಿಗ್ಗಿ ಬ್ಯಾಂಕ್ ಒಡೆದು ರೈತರಿಗೆ ಹಣ ನೀಡಿದ ಬಾಲಕಿಗೆ ಸಿಎಂ ಫಡ್ನವೀಸ್ ಸಲಾಂ

ದೇಶದ ಬೆನ್ನೆಲುಬಾಗಿರುವ ಅನ್ನದಾತರು ಕಷ್ಟದಲ್ಲಿದ್ದಾಗ ನೆರವಿನ ಹಸ್ತ ಚಾಚುವವರು ಬಹಳ ವಿರಳ. ಆದರೆ, ಇಲ್ಲೊಬ್ಬಳು ಪುಟ್ಟ ಮುಗ್ಧ ಬಾಲಕಿ ಮಾಡಿದ ಒಂದು ಚಿಕ್ಕ ಸಹಾಯ ಇದೀಗ ಇಡೀ ಸಮಾಜಕ್ಕೆ ದೊಡ್ಡ ಪಾಠವಾಗಿದೆ.

ಮಹಾರಾಷ್ಟ್ರದಲ್ಲಿ ಮಳೆಯ ಕೊರತೆಯಿಂದಾಗಿ ಬರಗಾಲ ಪೀಡಿತ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಷಯ ತಿಳಿದ ಪುಟ್ಟ ಬಾಲಕಿಯೊಬ್ಬಳು ತನ್ನ ಆಟಿಕೆಗಳನ್ನ ಕೊಳ್ಳಲು ಕೂಡಿಟ್ಟಿದ್ದ ಹಣವನ್ನ ಅನ್ನದಾತರಿಗಾಗಿ ದೇಣಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಬಾಲಕಿಯ ಈ ಕೆಲಸ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮನಮುಟ್ಟಿದೆ.

Little Girl Donates Piggy Bank Savings For Drought Hit Farmers In Maharashtra Moves CM Fadnavis

ಮಹಾರಾಷ್ಟ್ರ ರೈತರಿಗೆ ನೆರವು ನೀಡಿದ ಪುಟ್ಟ ಬಾಲಕಿ ವರ್ದಾ

ಬರಗಾಲದಿಂದಾಗಿ ಬೆಳೆ ನಾಶವಾಗಿ, ಆರ್ಥಿಕವಾಗಿ ಕಂಗೆಟ್ಟಿರುವ ಮಹಾರಾಷ್ಟ್ರದ ರೈತರ ಸ್ಥಿತಿ ಬಗ್ಗೆ ಮನೆಯಲ್ಲಿ ಪೋಷಕರು ಮಾತನಾಡಿಕೊಳ್ಳುವುದನ್ನು ಕೇಳಿದ್ದ ವರ್ದಾ ತಿಮಾಂಡೆ ಎಂಬ ಪುಟ್ಟ ಬಾಲಕಿಯ ಮನಸ್ಸು ಕರಗಿದೆ.

ಕಷ್ಟದಲ್ಲಿರುವ ರೈತರಿಗೆ ತಾನು ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಆಕೆ, ತನ್ನ ಹಾಗೂ ತನ್ನ ಕಿರಿಯ ಸಹೋದರನ ಜೊತೆ ಸೇರಿ ದಿನನಿತ್ಯ ಕೂಡಿಡುತ್ತಿದ್ದ ಪಿಗ್ಗಿ ಬ್ಯಾಂಕ್ (ಹುಂಡಿ) ಒಡೆದಿದ್ದಾಳೆ. ಈ ಕಂದಮ್ಮಗಳು ಆ ಪುಟ್ಟ ಹುಂಡಿಯಲ್ಲಿ ಸಂಗ್ರಹವಾಗಿದ್ದ ಒಟ್ಟು 3,575 ರೂಪಾಯಿಗಳನ್ನ ತಾವೇ ಖುದ್ದಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ನೀಡಿದ್ದಾರೆ. ಈ ಮೂಲಕ ಮಹಾರಾಷ್ಟ್ರ ರೈತರಿಗೆ ನೆರವು ನೀಡುವಲ್ಲಿ ತಾವು ಕೂಡ ಕೈಜೋಡಿಸಿದ್ದಾರೆ.

ಸಿಎಂ ಪರಿಹಾರ ನಿಧಿ ಗೆ 3,575 ರೂ. ದೇಣಿಗೆ

ರೈತರ ಮೇಲಿನ ಕಾಳಜಿಯಿಂದ ವರ್ದಾ ಹಾಗೂ ಆಕೆಯ ಸಹೋದರ ಮುಖ್ಯಮಂತ್ರಿಗಳ ಕಚೇರಿಗೆ ತೆರಳಿ, ತಮ್ಮ ಉಳಿತಾಯದ 3,575 ರೂಪಾಯಿಗಳನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದರು. ಈ ವೇಳೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ ಬಾಲಕಿ ವರ್ದಾ, "ರೈತರು ಬಹಳ ಕಷ್ಟದಲ್ಲಿದ್ದಾರೆ. ಅವರು ಈ ಸಂಕಷ್ಟದಿಂದ ಪಾರಾಗಲು ನಮ್ಮೆಲ್ಲರ ಸಹಾಯದ ಅಗತ್ಯವಿದೆ. ನಾನು ನೀಡುತ್ತಿರುವ ಈ ಸಣ್ಣ ಮೊತ್ತವು ಅವರ ಜೀವನದಲ್ಲಿ ಒಂದಷ್ಟು ನೆಮ್ಮದಿ ಮತ್ತು ಖುಷಿಯನ್ನ ತರಬಹುದು ಎಂಬ ನಂಬಿಕೆ ನನಗಿದೆ" ಎಂದು ತನ್ನ ಮುಗ್ಧ ಮಾತುಗಳಲ್ಲಿ ವಿವರಿಸಿದ್ದಾಳೆ.

ಬಾಲಕಿಯ ಕಾರ್ಯಕ್ಕೆ ದೇವೇಂದ್ರ ಫಡ್ನವೀಸ್ ಮೆಚ್ಚುಗೆ

ಈ ಮಕ್ಕಳ ನಿಸ್ವಾರ್ಥ ಕಾರ್ಯದಿಂದ ತೀವ್ರ ಭಾವುಕರಾದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಾಲಕಿಯ ಸೂಕ್ಷ್ಮತೆ ಹಾಗೂ ರೈತರ ಮೇಲಿರುವ ಕಾಳಜಿಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವಿಡಿಯೋವನ್ನ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ರೈತರನ್ನ 'ಬಲಿರಾಜ' (ದೇಶಕ್ಕೆ ಅನ್ನ ನೀಡುವವನು) ಎಂದು ಗೌರವದಿಂದ ಸಂಬೋಧಿಸಿದ್ದಾರೆ.

"ಪುಟ್ಟ ಮಕ್ಕಳಿಂದ ಬಂದಿರುವ ಈ ದೊಡ್ಡ ಸಹಾಯವು ರೈತರ ಮೇಲಿನ ಅವರ ಅಪಾರ ಪ್ರೀತಿಯನ್ನು ತೋರಿಸುತ್ತದೆ. ಇತರರಿಗೆ ಸಹಾಯ ಮಾಡಲು ವಯಸ್ಸು ಅಥವಾ ದೊಡ್ಡ ಆರ್ಥಿಕ ಹಿನ್ನೆಲೆಯೇ ಇರಬೇಕೆಂದಿಲ್ಲ, ಸಹಾಯ ಮಾಡುವ ಮನಸ್ಸಿದ್ದರೆ ಸಾಕು ಎಂಬುದನ್ನ ಈ ಮಕ್ಕಳು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ" ಎಂದು ಸಿಎಂ ಫಡ್ನವೀಸ್ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಂದಮ್ಮಗಳ ದೊಡ್ಡ ಗುಣಕ್ಕೆ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+