Get Updates
Get notified of breaking news, exclusive insights, and must-see stories!

50 ಪ್ರಮುಖ ಜನರಿಂದ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಬಾಕಿ

ನವದೆಹಲಿ, ಡಿಸೆಂಬರ್‌ 21: ದೇಶದಲ್ಲಿ ಪ್ರಮುಖ 50 ಸುಸ್ತಿದಾರರು ಮಾರ್ಚ್‌ 31, 2022ವರೆಗೆ ವಿವಿಧ ಭಾರತೀಯ ಬ್ಯಾಂಕ್‌ಳಿಗೆ ಒಟ್ಟಾರೆಯಾಗಿ ಬರೋಬ್ಬರಿ 92,570 ಕೋಟಿ ಸಾಲವನ್ನು ಪಾವತಿಸಬೇಕಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ.

ಇದರಲ್ಲಿ ದೇಶದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಒಡೆತನದ ಗೀತಾಂಜಲಿ ಜೆಮ್ಸ್ 7,848 ಕೋಟಿ ರೂಪಾಯಿ ಮೊತ್ತದ ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಈ ದೊಡ್ಡ ಸಾಲದ ಸುಸ್ತಿದಾರರ ಪಟ್ಟಿಯಲ್ಲಿ ನಂತರದ ಸ್ಥಾನಗಳೆಂದರೆ ಎರಾ ಇನ್‌ಫ್ರಾ (5,879 ಕೋಟಿ ರೂ.) ಮತ್ತು ರೇಗೋ ಆಗ್ರೋ (ರೂ. 4,803 ಕೋಟಿ). ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಂಕಿಅಂಶಗಳನ್ನು ಸಚಿವರು ಉಲ್ಲೇಖಿಸಿದ್ದಾರೆ.

ಸುಸ್ತಿದಾರರು (ಡೀಫಾಲ್ಟರ್) ಎನ್ನುವುದು ಸಾಲವನ್ನು ಮರುಪಾವತಿಸಬೇಕಿರುವ ಸಾಲಗಾರರಿಗೆ ಬಳಸಲಾಗುವ ಹಣಕಾಸಿನ ಪದವಾಗಿದೆ. ಈ ಸಾಲಗಾರರು ಬ್ಯಾಂಕುಗಳು ಅಥವಾ ಇತರ ಹಣಕಾಸು ಸಂಸ್ಥೆಗಳ ಯಾವುದೇ ಸೌಲಭ್ಯದಿಂದ ನಿಷೇಧಿಸಲ್ಪಟ್ಟಿರುತ್ತಾರೆ. ಕಾನ್‌ಕಾಸ್ಟ್ ಸ್ಟೀಲ್ ಮತ್ತು ಪವರ್ (4,596 ಕೋಟಿ ರೂ.), ಎಬಿಜಿ ಶಿಪ್‌ಯಾರ್ಡ್ (3,708 ಕೋಟಿ ರೂ.), ಫ್ರಾಸ್ಟ್ ಇಂಟರ್‌ನ್ಯಾಷನಲ್ ₹ 3,311 ಕೋಟಿ), ವಿನ್‌ಸಮ್ ಡೈಮಂಡ್ಸ್ ಮತ್ತು ಜ್ಯುವೆಲ್ಲರಿ ₹ 2,931 ಕೋಟಿ), ರೊಟೊಮ್ಯಾಕ್ ಗ್ಲೋಬಲ್ (ರೂ. 2,893 ಕೋಟಿ), ಕೋಸ್ಟಲ್ 1 ಕೋಟಿ ರೂ. ಮತ್ತು ಜೂಮ್ ಡೆವಲಪರ್ಸ್ (ರೂ. 2,147 ಕೋಟಿ) ಸಾಲ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

10.1 ಲಕ್ಷ ಕೋಟಿ ಸಾಲ ಮನ್ನಾ

10.1 ಲಕ್ಷ ಕೋಟಿ ಸಾಲ ಮನ್ನಾ

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿಗಳು (ಎನ್‌ಪಿಎ) ₹ 8.9 ಲಕ್ಷ ಕೋಟಿಯಿಂದ ₹ 3 ಲಕ್ಷ ಕೋಟಿಗೆ ಕಡಿಮೆಯಾಗಿದೆ. ಆರ್‌ಬಿಐನ ಆಸ್ತಿ ಗುಣಮಟ್ಟ ಪರಿಶೀಲನೆಯ ನಂತರ ಒಟ್ಟು ಎನ್‌ಪಿಎಗಳು ₹ 5.41 ಲಕ್ಷ ಕೋಟಿಗೆ ಇಳಿದಿವೆ. ಇದಲ್ಲದೆ ಬ್ಯಾಂಕ್‌ಗಳು ₹ 10.1 ಲಕ್ಷ ಕೋಟಿ ಸಾಲ ಮನ್ನಾ ಮಾಡಿವೆ ಎಂದು ಸಚಿವ ಕರಾಡ್‌ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ಪಿಎನ್‌ಬಿಯಿಂದ 67,214 ಕೋಟಿ ಸಾಲಮನ್ನಾ

ಪಿಎನ್‌ಬಿಯಿಂದ 67,214 ಕೋಟಿ ಸಾಲಮನ್ನಾ

ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಪಟ್ಟಿಯಲ್ಲಿ ₹ 2 ಲಕ್ಷ ಕೋಟಿಗಳಷ್ಟು ಸಾಲಮನ್ನಾದೊಂದಿಗೆ ಅಗ್ರಸ್ಥಾನದಲ್ಲಿದೆ. ₹ 67,214 ಕೋಟಿಗಳೊಂದಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತರದ ಸ್ಥಾನದಲ್ಲಿದೆ. ಖಾಸಗಿ ಸಾಲದಾತರಲ್ಲಿ ಐಸಿಐಸಿಐ ಬ್ಯಾಂಕ್ ಅತಿ ಹೆಚ್ಚು ₹ 50,514 ಕೋಟಿ ಸಾಲವನ್ನು ಮನ್ನಾ ಮಾಡಿದೆ. ನಂತರದ ಸ್ಥಾನದಲ್ಲಿ ಎಚ್‌ಡಿಎಫ್‌ಸಿ ₹ 34,782 ಕೋಟಿ ಸಾಲ ಮನ್ನಾ ಮಾಡಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವಂಚನೆ

ಸಂಸತ್ತಿನ ಕೆಳಮನೆಗೆ ನೀಡಿದ ಉತ್ತರದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಅವರು ಸುಸ್ತಿದಾರರ ವಿರುದ್ಧ ಕ್ರಮಕ್ಕೆ ಸರ್ಕಾರವು ಬದ್ಧವಾಗಿದೆ. ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕಳೆದ ವಾರ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ದೂರಿನ ಆಧಾರದ ಮೇಲೆ ಪರಾರಿಯಾದ ಮೆಹುಲ್ ಚೋಕ್ಸಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮೂರು ಹೊಸ ಎಫ್‌ಐಆರ್‌ಗಳನ್ನು ದಾಖಲಿಸಿದೆ. ಚೋಕ್ಸಿ ವಿರುದ್ಧದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹ 6,746 ಕೋಟಿ ವಂಚಿಸಿದ ಆರೋಪವಾಗಿದೆ.

ಅನಿಯತ್ ಶಿವರಾಮನ್ ನಾಯರ್ ವಿರುದ್ಧ ಎಫ್‌ಐಆರ್‌

ಅನಿಯತ್ ಶಿವರಾಮನ್ ನಾಯರ್ ವಿರುದ್ಧ ಎಫ್‌ಐಆರ್‌

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇತೃತ್ವದ ಮೂರು ಸದಸ್ಯ ಬ್ಯಾಂಕ್‌ಗಳ ಒಕ್ಕೂಟಕ್ಕೆ ಮೆಹುಲ್‌ ಚೋಕ್ಸಿ ಮತ್ತು ಇತರರು ₹ 375.71 ಕೋಟಿಗಳ ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಇತ್ತೀಚಿನ ಎಫ್‌ಐಆರ್‌ನ ಮೂರನೇ ಆರೋಪ ಮಾಡಿದೆ. ಎಫ್‌ಐಆರ್‌ಗಳು ಎಂ,ಎಸ್ ಜಿಐಎಲ್‌ನ ನಿರ್ದೇಶಕ ಅನಿಯತ್ ಶಿವರಾಮನ್ ನಾಯರ್ ಮತ್ತು ಎಂ,ಎಸ್ ನಿರ್ದೇಶಕ ಧನೇಶ್ ವ್ರಜಲ್ ಶೇತ್ ಅವರನ್ನು ಹೆಸರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+