2022ರಲ್ಲಿ ಸ್ವಿಗ್ಗಿಯಲ್ಲಿ ಅತಿಹೆಚ್ಚು ಆರ್ಡರ್ ಮಾಡಿದ ಖಾದ್ಯಗಳು!

ನವದೆಹಲಿ, ಡಿಸೆಂಬರ್ 15: ಮಸಾಲೆ ದೋಸೆ ಮತ್ತು ಬಿರಿಯಾನಿ ಎಂದರೆ ಜನರಿಗೆ ಪಂಚಪ್ರಾಣ. ಈ ಆಹಾರಗಳ ಮೇಲಿನ ಪ್ರೀತಿಯು 2022ರಲ್ಲೂ ಮುಂದುವರಿದಿದೆ. ಕಳೆದ ವರ್ಷದಲ್ಲಿ ಸ್ವಿಗ್ಗಿ ಮೂಲಕ ಅತಿಹೆಚ್ಚು ಜನರು ಈ ಎರಡು ಆಹಾರಗಳನ್ನೇ ಆರ್ಡರ್ ಮಾಡಿರುವುದು ಗೊತ್ತಾಗಿದೆ.

ನಿಮ್ಮ ಮನೆ ಬಾಗಿಲಿಗೆ, ನೀವಿರುವ ಕಚೇರಿಯ ಹೊಸ್ತಿಲಿಗೆ ಹಸಿದವರಿಗೆ ಸರಿಯಾದ ಸಮಯಕ್ಕೆ ಆಹಾರವನ್ನು ಪೂರೈಸುವುದಕ್ಕಾಗಿ ಸ್ವಿಗ್ಗಿ ಫೇಮಸ್ ಆಗಿದೆ. ಈ ಆನ್ ಲೈನ್ ಡೆಲವರಿ ಕಂಪನಿ ಮೂಲಕ ಜನರು ಯಾವ ಆಹಾರಗಳಿಗೆ ಹೆಚ್ಚು ಡಿಮ್ಯಾಂಡ್ ಮಾಡಿದ್ದಾರೆ ಎಂಬುದು ಇದೀಗ ಕುತೂಹಲ ಕೆರಳಿಸಿದೆ.

ಹಸಿದ ಹೊಟ್ಟೆಗೆ ಮಸಾಲೆ ದೋಸೆ, ಭೂರಿ ಭೋಜನ ಬಯಸುವವರಿಗೆ ಬಿಸಿ ಬಿಸಿ ಬಿರಿಯಾನಿ.. ಇಂಥ ಐಟಂಗಳು ಜನರಿಗೆ ಹೆಚ್ಚು ಅಚ್ಚುಮೆಚ್ಚು ಎನ್ನುವುದು ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ. ಏಕೆಂದರೆ ಈ ಎರಡೂ ಐಟಂಗಳು ಈ ವರ್ಷ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಭಕ್ಷ್ಯಗಳಾಗಿವೆ. ಸ್ವಿಗ್ಗಿಯ ವಾರ್ಷಿಕ ಟ್ರೆಂಡ್‌ಗಳ ವರದಿಯ 7ನೇ ಆವೃತ್ತಿಯನ್ನು ಬಹಿರಂಗಪಡಿಸಲಾಗಿದೆ. ಸ್ವಿಗ್ಗಿ 2022ರಲ್ಲಿ ಜನರು ತಮ್ಮ ಆರ್ಡರ್‌ಗಳಲ್ಲಿ ಏನು ಮತ್ತು ಹೇಗೆ ಆರ್ಡರ್ ಮಾಡಿದ್ದರು ಎಂಬುದೇ ವರದಿಯ ಹೈಲೈಟ್ ಆಗಿದೆ. ಈ ಕುರಿತು ಒಂದು ವಿಶೇಷ ವರದಿ ಮುಂದಿದೆ.

ಒಂದು ನಿಮಿಷಕ್ಕೆ 137 ಬಿರಿಯಾನಿ ಆರ್ಡರ್

ಒಂದು ನಿಮಿಷಕ್ಕೆ 137 ಬಿರಿಯಾನಿ ಆರ್ಡರ್

ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯದಲ್ಲಿ ಬಿರಿಯಾನಿ 7ನೇ ವರ್ಷವೂ ಸ್ಥಾನ ಪಡೆದಿದೆ. ಒಂದು ನಿಮಿಷಕ್ಕೆ ಬರೋಬ್ಬರಿ 137 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗುತ್ತಿದೆ. ಅಂದರೆ ಸೆಕೆಂಡಿಗೆ 2.28 ಬಿರಿಯಾನಿಗಳನ್ನು ಜನರು ಆರ್ಡರ್ ಮಾಡುತ್ತಿದ್ದರು ಎಂದು ಸ್ವಿಗ್ಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

"ಪ್ರತಿ ಸೆಕೆಂಡಿಗೆ 2.28 ಬಿರಿಯಾನಿ ಆರ್ಡರ್‌ಗಳೊಂದಿಗೆ ಹೊಸ ದಾಖಲೆಯನ್ನು ಬರೆದಿದೆ. ಭಾರತದ ರುಚಿಯೊಂದಿಗೆ ಇಟಾಲಿಯನ್ ರವಿಯೊಲಿ ಮತ್ತು ಕೊರಿಯನ್ ಬಿಬಿಂಬಾಪ್ ಜನಪ್ರಿಯ ಆಯ್ಕೆಗಳಾಗಿವೆ. ಚಾಯ್‌ನಿಂದ ಎಲ್ಲವನ್ನೂ ತ್ವರಿತವಾಗಿ ತಲುಪಿಸಲು ಬಳಕೆದಾರರು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ ತಿರುಗಿದರು. ಪಾನಿ, ಡಬಲ್ ರೊಟ್ಟಿ ಮತ್ತು ಸಬ್ಜಿ, ಸೋಫಾಗಳು ಮತ್ತು ಹಾಸಿಗೆಗಳಿಗಾಗಿ ಭಾರೀ ಸಂಖ್ಯೆಯಲ್ಲಿ ಜನರು ಹುಡುಕಾಟ ನಡೆಸಿದ್ದಾರೆ," ಸ್ವಿಗ್ಗಿ ಹೇಳಿದೆ.

ಸ್ವಿಗ್ಗಿನಲ್ಲಿ ಅತಿಹೆಚ್ಚು ಆರ್ಡರ್ ಮಾಡಿದ ಆಹಾರ

ಸ್ವಿಗ್ಗಿನಲ್ಲಿ ಅತಿಹೆಚ್ಚು ಆರ್ಡರ್ ಮಾಡಿದ ಆಹಾರ

ಚಿಕನ್ ಬಿರಿಯಾನಿ, ಮಸಾಲಾ ದೋಸೆ, ಚಿಕನ್ ಫ್ರೈಡ್ ರೈಸ್, ಪನೀರ್ ಬಟರ್ ಮಸಾಲ, ಬಟರ್ ನಾನ್, ವೆಜ್ ಫ್ರೈಡ್ ರೈಸ್, ವೆಜ್ ಬಿರಿಯಾನಿ, ತಂದೂರಿ ಚಿಕನ್

ಅತಿಹೆಚ್ಚು ಆರ್ಡರ್ ಮಾಡಿದ ವಿದೇಶೀ ಫುಡ್ಸ್

ಅತಿಹೆಚ್ಚು ಆರ್ಡರ್ ಮಾಡಿದ ವಿದೇಶೀ ಫುಡ್ಸ್

ಇಟಾಲಿಯನ್ ಪಾಸ್ಟಾ, ಪಿಜ್ಜಾ, ಮೆಕ್ಸಿಕನ್ ಬೌಲ್, ಸ್ಪೈಸಿ ರಾಮೆನ್ ಮತ್ತು ಸುಶಿ

ಸ್ವಿಗ್ಗಿನಲ್ಲಿ ಅತಿಹೆಚ್ಚು ಆರ್ಡರ್ ಮಾಡಿದ ಟಾಪ್ 10 ತಿಂಡಿ

ಸ್ವಿಗ್ಗಿನಲ್ಲಿ ಅತಿಹೆಚ್ಚು ಆರ್ಡರ್ ಮಾಡಿದ ಟಾಪ್ 10 ತಿಂಡಿ

ಸಮೋಸಾ, ಪಾಪ್‌ಕಾರ್ನ್, ಪಾವ್ ಭಾಜಿ, ಫ್ರೆಂಚ್ ಫ್ರೈಸ್, ಬೆಳ್ಳುಳ್ಳಿ ಬ್ರೆಡ್‌ಸ್ಟಿಕ್‌ಗಳು, ಹಾಟ್ ವಿಂಗ್ಸ್, ಟ್ಯಾಕೋ, ಕ್ಲಾಸಿಕ್ ಸ್ಟಫ್ಡ್ ಗಾರ್ಲಿಕ್ ಬ್ರೆಡ್, ಮಿಂಗಲ್ಸ್ ಬಕೆಟ್

ಅತಿಹೆಚ್ಚು ಆರ್ಡರ್ ಮಾಡಿದ ಟಾಪ್ 10 ಸಿಹಿತಿಂಡಿ

ಅತಿಹೆಚ್ಚು ಆರ್ಡರ್ ಮಾಡಿದ ಟಾಪ್ 10 ಸಿಹಿತಿಂಡಿ

ಗುಲಾಬ್ ಜಾಮೂನ್, ರಸ್ಮಲೈ, ಚೋಕೋ ಲಾವಾ ಕೇಕ್, ರಸಗುಲ್ಲಾ, ಚೋಕೋಚಿಪ್ಸ್ ಐಸ್ ಕ್ರೀಮ್, ಅಲ್ಫೋನ್ಸೋ ಮ್ಯಾಂಗೋ ಐಸ್ ಕ್ರೀಮ್, ಕಾಜು ಕಟ್ಲಿ, ಟೆಂಡರ್ ತೆಂಗಿನಕಾಯಿ ಐಸ್ ಕ್ರೀಮ್, ಚಾಕೊಲೇಟ್ನಿಂದ ಸಾವು, ಹಾಟ್ ಚಾಕೊಲೇಟ್ ಮಿಠಾಯಿ

ಕ್ಲೌಡ್ ಕಿಚನ್‌ಗಳಿಂದ ಮಾರಾಟವಾದ ಟಾಪ್ 5 ಆಹಾರ

ಕ್ಲೌಡ್ ಕಿಚನ್‌ಗಳಿಂದ ಮಾರಾಟವಾದ ಟಾಪ್ 5 ಆಹಾರ

ಉತ್ತರ ಭಾರತೀಯ, ಚೈನೀಸ್/ಪ್ಯಾನ್ ಏಷ್ಯನ್, ಬಿರಿಯಾನಿ, ಡೆಸರ್ಟ್ಸ್/ಐಸ್ ಕ್ರೀಮ್, ಬರ್ಗರ್ಸ್/ಅಮೇರಿಕನ್, ಸೌತ್ ಇಂಡಿಯನ್ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಕಳೆದ 2022 ರಲ್ಲಿ ದೇಶಾದ್ಯಂತ 1,00,000 ಕ್ಕೂ ಹೆಚ್ಚು ಹೊಸ ರೆಸ್ಟೋರೆಂಟ್‌ಗಳು ಮತ್ತು ಕ್ಲೌಡ್ ಕಿಚನ್‌ಗಳು ಸ್ವಿಗ್ಗಿ ಸೇರಿಕೊಂಡವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+