ಮೇ ತಿಂಗಳಿನಲ್ಲಿ ಬ್ಯಾಂಕ್ ಗಳಿಗೆ 8 ದಿನ ರಜೆ
ಬೆಂಗಳೂರು, ಏಪ್ರಿಲ್ 30 : 2019ರ ಮೇ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ 8 ರಜೆಗಳಿವೆ. ಬ್ಯಾಂಕ್ ಕೆಲಸಕ್ಕೆ ಹೋಗುವ ಮುನ್ನ ಜನರು ರಜೆ ದಿನಗಳ ಬಗ್ಗೆ ತಿಳಿದುಕೊಳ್ಳಿ. ಮೇ 1ರ ಬುಧವಾರ ತಿಂಗಳ ಮೊದಲ ದಿನವೇ ಬ್ಯಾಂಕ್‌ಗೆ ರಜೆ ಇದೆ.
ಭಾನುವಾರ, 2 ಮತ್ತು 4ನೇ ಶನಿವಾರದ ರಜೆ ಸೇರಿ ಮೇ ತಿಂಗಳಿನಲ್ಲಿ ಒಟ್ಟು 8 ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಬ್ಯಾಂಕ್‌ಗೆ ಭೇಟಿ ನೀಡುವ ಆಲೋಚನೆ ಇದ್ದರೆ ಯಾವತ್ತು ಹೋಗಬಹುದು ಎಂಬುದನ್ನು ಗುರುತು ಮಾಡಿಕೊಳ್ಳಿ.
ಮೇ ತಿಂಗಳ ಮೊದಲ ದಿನ ಕಾರ್ಮಿಕರ ದಿನವಾದ ಕಾರಣ ಬ್ಯಾಂಕ್‌ಗಳಿಗೆ ರಜೆ ಇದೆ. ಉಳಿದಂತೆ 4 ಭಾನುವಾರ ರಜೆ ಇರುತ್ತದೆ. ಬುದ್ಧ ಪೂರ್ಣಿಮಾ ದಿನ ಕೆಲವು ಬ್ಯಾಂಕ್‌ಗಳು ಬಾಗಿಲು ಮುಚ್ಚಿರಲಿವೆ.

ರಜೆ ದಿನಗಳ ಪಟ್ಟಿ
* ಮೇ 1 ಕಾರ್ಮಿಕರ ದಿನ
* ಮೇ 7 ಬಸವ ಜಯಂತಿ
* ಮೇ 18 ಬುದ್ಧ ಪೂರ್ಣಿಮಾ (ಕೆಲವು ಬ್ಯಾಂಕ್ ರಜೆ)
* ಮೇ 11, 25 ಎರಡು ಮತ್ತು ನಾಲ್ಕನೇ ಶನಿವಾರ
* ಮೇ 1, 14, 21, 28 ಭಾನುವಾರ












Click it and Unblock the Notifications