Liquor Price List: ಮದ್ಯದ ದರ ಪಟ್ಟಿ: ಗೋವಾ ಅಗ್ಗ, ಕರ್ನಾಟಕ ಅಗ್ರಸ್ಥಾನ

ಹಲವಾರು ಪ್ರಯಾಣಿಕರಿಗೆ ಗೋವಾ ತನ್ನ ಕಡಲತೀರಗಳ ಬಗ್ಗೆ ಮಾತ್ರವಲ್ಲದೆ ಅಗ್ಗದ ಮದ್ಯದ ಮಾರಾಟದಿಂದಲೂ ಆಕರ್ಷಿಸುತ್ತದೆ. ನಿತ್ಯ ನೂರಾರು ಪ್ರಯಾಣಿಕರನ್ನು ಸ್ವಾಗತಿಸುವ ಈ ರಾಜ್ಯ ಭಾರತದಲ್ಲಿ ಅತ್ಯಂತ ಕಡಿಮೆ ಮದ್ಯದ ಮೇಲಿನ ತೆರಿಗೆ ದರವನ್ನು ಹೊಂದಿದೆ. ಆದರೆ ಕರ್ನಾಟಕ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ. ಇದು ದೇಶದ ದೊಡ್ಡ ಮಾರುಕಟ್ಟೆಗಳಲ್ಲಿ ಅತಿ ಹೆಚ್ಚು ತೆರಿಗೆಯನ್ನು ಹೊಂದಿದೆ.

ಭಾರತದ ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ರಾಜ್ಯಗಳ ಮದ್ಯದ ದರ ಪಟ್ಟಿಯನ್ನು ಅಂದಾಜಿಸಿದೆ. ಇದರ ಪ್ರಕಾರ ವಿಸ್ಕಿ, ರಮ್, ವೋಡ್ಕಾ ಮತ್ತು ಜಿನ್ ಗೋವಾದಲ್ಲಿ 100 ರೂಪಾಯಿಯಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನೇ ದೆಹಲಿಯಲ್ಲಿ 134 ರೂಪಾಯಿಗೆ ಮಾರಾಟ ಮಾಡಲಾದರೆ ಕರ್ನಾಟಕದಲ್ಲಿ ಇದರ ಬೆಲೆ 513 ರೂಪಾಯಿ ಆಗಿದೆ ಎಂದು ಉದ್ಯಮ ಸಂಸ್ಥೆಯು TOI ವರದಿ ಮಾಡಿದೆ.

Liquor Price List: Goa Cheapest, Karnataka Highest Liquor Price

ಅಂದರೆ ಇಲ್ಲಿ ಗೋವಾದ ಬೆಲೆಯನ್ನು ಕರ್ನಾಟಕಕ್ಕೆ ಹೋಲಿಸಿದರೆ ನಾಲ್ಕು ನೂರಕ್ಕೂ ಹೆಚ್ಚು ಬೆಲೆಯ ವ್ಯತ್ಯಾಸವಾಗುತ್ತದೆ. ಇನ್ನೂ ತೆಲಂಗಾಣದಲ್ಲಿ ಇದರ ಬೆಲೆ 246 ರೂ, ಮಹಾರಾಷ್ಟ್ರದಲ್ಲಿ 226 ರೂ, ರಾಜಸ್ಥಾನದಲ್ಲಿ 213, ಉತ್ತರಪ್ರದೇಶ 197 ಮತ್ತು ಹರಿಯಾಣದಲ್ಲಿ ಇದರ ಬೆಲೆ 147 ರೂಪಾಯಿ ಇದೆ.

ಮದ್ಯಪ್ರೇಮಿಗಳಿಗೆ ಇಂದಿರನ ಆಸ್ಥಾನದಂತೆ ಗೋಚರಿಸುವ ಗೋವಾದಲ್ಲಿ ಬಿಯರ್ ಸಖತ್ ಚೀಪ್. ಭಾರತದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಬಿಯರ್ ಸಿಗುವ ರಾಜ್ಯ ಯಾವುದು ಎಂದು ಕೇಳಿದರೆ ಎಲ್ಲರೂ ಹೇಳುವ ರಾಜ್ಯವೇ ಗೋವಾ. ಭಾರತದಲ್ಲಿ ಯಾವುದೇ ರಾಜ್ಯಕ್ಕೆ ಹೋಲಿಸಿ ನೋಡಿದರೂ ಅಷ್ಟೇ. ಗೋವಾದಲ್ಲಿ ಸಿಗುವ ಕಡಿಮೆ ದರದಲ್ಲಿ ಯಾವುದೇ ರಾಜ್ಯವೂ ಮದ್ಯವನ್ನು ಮಾರಾಟ ಮಾಡುವುದಿಲ್ಲ.

ಇದರ ಮೇಲಿನ ತೆರಿಗೆ (ಮ್ಯಾಕ್ಸಿಮಮ್ ರೀಟೇಲ್ ಪ್ರೈಸ್) ಗೋವಾದಲ್ಲಿ 49% ಇದ್ದರೆ, ಕರ್ನಾಟಕದಲ್ಲಿ 83% ಮತ್ತು ಮಹಾರಾಷ್ಟ್ರದಲ್ಲಿ 71% ಇದೆ. ತೆಲಂಗಾಣದಲ್ಲಿ 68%, ರಾಜಸ್ಥಾನದಲ್ಲಿ 69%, ಉತ್ತರಪ್ರದೇಶ 66% ಮತ್ತು ಹರಿಯಾಣದಲ್ಲಿ 47% ಮತ್ತು ದೆಹಲಿಯಲ್ಲಿ 62% ಇದೆ.

Liquor Price List: Goa Cheapest, Karnataka Highest Liquor Price

ಸ್ಥಳೀಯ ತೆರಿಗೆಗಳ ಪರಿಣಾಮವಾಗಿ, ದೆಹಲಿ ಮತ್ತು ಮುಂಬೈನಲ್ಲಿ ಜನಪ್ರಿಯ ಸ್ಕಾಚ್ ಬ್ರಾಂಡ್‌ಗಳ ಬಾಟಲಿಯ ಬೆಲೆಯಲ್ಲಿ 20% ಕ್ಕಿಂತ ಹೆಚ್ಚು ವ್ಯತ್ಯಾಸ ಕಂಡುಬರುತ್ತದೆ. ಉದಾಹರಣೆಗೆ, ದೆಹಲಿಯಲ್ಲಿ ಸುಮಾರು 3,100 ರೂಪಾಯಿಗಳ ಬೆಲೆಯ ಬ್ಲ್ಯಾಕ್ ಲೇಬಲ್ನ ಬಾಟಲಿಯು ಮುಂಬೈನಲ್ಲಿ ಸುಮಾರು 4,000 ರೂಪಾಯಿಗಳಿಗೆ ಮಾರಾಟವಾಗುತ್ತದೆ. ತೆರಿಗೆಯಲ್ಲಿನ ಅಗಾಧ ವ್ಯತ್ಯಾಸವೂ ರಾಜ್ಯದ ಗಡಿಗಳಲ್ಲಿ ಮದ್ಯದ ಕಳ್ಳಸಾಗಣೆಗೆ ಕಾರಣವಾಗಿದೆ.

ಗೋವಾದಲ್ಲಿ ಮದ್ಯ ಅಗ್ಗ ಯಾಕೆ?

ಗೋವಾದಲ್ಲಿ ಬಿಯರ್ ಅಗ್ಗವಾಗಲು ಹಲವು ಕಾರಣಗಳಿವೆ. ಇದು ಬಿಯರ್ ಬೆಲೆಯನ್ನು ತುಂಬಾ ಕಡಿಮೆ ಮಾಡುತ್ತದೆ. ಇದಕ್ಕೆ ಕಾರಣ ಇಲ್ಲಿನ ತೆರಿಗೆ ವ್ಯವಸ್ಥೆ. ಗೋವಾದಲ್ಲಿ ತೆರಿಗೆ ಪದ್ಧತಿಯ ಪ್ರಕಾರ ಮದ್ಯದ ತೆರಿಗೆ ತುಂಬಾ ಕಡಿಮೆ. ಇದರಿಂದಾಗಿ ಇಲ್ಲಿ ಬಿಯರ್ ಬೆಲೆ ಬೇರೆ ಬೇರೆ ರಾಜ್ಯಗಳಿಗಿಂತ ತುಂಬಾ ಕಡಿಮೆಯಾಗಿದೆ.

ನಮ್ಮ ದೇಶದಲ್ಲಿ ಮದ್ಯ ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಮದ್ಯದ ಬೆಲೆಯನ್ನು ನಿರ್ಧರಿಸುವಲ್ಲಿ ರಾಜ್ಯ ಸರ್ಕಾರವು ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಅಲ್ಲಿ ಬಿಯರ್ ಮೇಲಿನ ತೆರಿಗೆ ಶೇಕಡಾವಾರು ತೀರಾ ಕಡಿಮೆ. ಇದಲ್ಲದೇ ಗೋವಾದಲ್ಲಿ ಮದ್ಯ ಮಾರಾಟಕ್ಕೆ ಟೆಂಟರ್ ಪಡೆಯುವುದು ಕಷ್ಟದ ಕೆಲಸವೇನಲ್ಲ. ಹಾಗಾಗಿಯೇ ಇಲ್ಲಿ ಮದ್ಯದಂಗಡಿಗಳ ಸಂಖ್ಯೆ ಹೆಚ್ಚು. ಪೈಪೋಟಿಯೂ ಹೆಚ್ಚಿರುವುದರಿಂದ ಮದ್ಯದ ಬೆಲೆ ಕಡಿಮೆಯಾಗಿದೆ.

Liquor Price List: Goa Cheapest, Karnataka Highest Liquor Price

ಗೋವಾದಲ್ಲಿ ಸಾಕಷ್ಟು ಮದ್ಯದಂಗಡಿಗಳಿವೆ. ಹೀಗಾಗಿ ಕೆಲವು ಮೀಟರ್ ದೂರದಲ್ಲಿಯೇ ನೀವು ಮದ್ಯದ ಅಂಗಡಿಯನ್ನು ಕಾಣಬಹುದು. ಇತರ ರಾಜ್ಯಗಳಿಗೆ ಹೋಲಿಸಿದರೆ ಅನೇಕ ಸ್ಥಳೀಯ ಬ್ರಾಂಡ್‌ಗಳನ್ನು ಇದು ಹೊಂದಿದೆ. ಇದು ನೈಸರ್ಗಿಕವಾಗಿ ಮದ್ಯದ ಬೆಲೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಮದ್ಯಕ್ಕೆ ಬೇಕಾದ ಕಚ್ಚಾವಸ್ತು ಇಲ್ಲಿ ಸುಲಭವಾಗಿ ದೊರೆಯುತ್ತದೆ. ಇದರಿಂದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಗೋವಾದಲ್ಲಿ ಮದ್ಯ ಉತ್ಪಾದನೆ ಅಗ್ಗವಾಗಿದೆ. ಇದು ಬೆಲೆಯ ಮೇಲೂ ಪರಿಣಾಮ ಬೀರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+