ಲಿಂಬೆ ಹಣ್ಣಿನ ದರ ಏರಿಕೆ; ಟ್ವಿಟರ್‌ನಲ್ಲಿ ನಕ್ಕುನಗಿಸುವ ಪೋಸ್ಟ್‌ಗಳು
ಬೆಂಗಳೂರು, ಏಪ್ರಿಲ್ 13; ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆಗಳ ಬೆಲೆ ಏರಿಕೆ ಪಟ್ಟಿಗೆ ಲಿಂಬೆ ಹಣ್ಣು ಸೇರಿಕೊಂಡಿದೆ. 10 ರೂ.ಗೆ ಒಂದು ಅಥವ 2 ಲಿಂಬೆ ಹಣ್ಣು ಸಿಗುತ್ತಿದ್ದು, ಬಿರು ಬೇಸಿಗೆಯಲ್ಲಿ ದರ ಕಂಡು ಜನರು ಅಚ್ಚರಿಗೊಂಡಿದ್ದಾರೆ.
ಕಳೆದ ತಿಂಗಳು 10 ರೂ. ಗೆ 3, 4 ಲಿಂಬೆ ಹಣ್ಣು ಸಿಗುತ್ತಿತ್ತು. ಆದರೆ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಲಿಂಬೆ ಹಣ್ಣಿನ ದರದಲ್ಲಿ ಭಾರೀ ಏರಿಕೆಯಾಗಿದೆ.
ಈಗ ಬೇಸಿಗೆಯ ಸಮಯದಲ್ಲಿ ಲಿಂಬೆ ಹಣ್ಣಿನ ಜ್ಯೂಸ್ ಕುಡಿದು ತಂಪಾಗಿರೋಣ ಎಂದು ಅಂದುಕೊಳ್ಳುತ್ತಿದ್ದ ಜನರಿಗೆ ಲಿಂಬೆ ಹಣ್ಣಿನ ದರ ಬಿಸಿ ಮುಟ್ಟಿಸಿದೆ. ಆದರೆ ಬೆಲೆ ಏರಿಕೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯಕ್ಕೆ ದರಗಳು ಇಳಿಕೆಯಾಗುವ ಲಕ್ಷಣಗಳು ಸಹ ಕಾಣುತ್ತಿಲ್ಲ.
ಪ್ರತಿ ಘಟನೆಗೆ ವಿಡಂಬನಾತ್ಮಕವಾಗಿ ಸ್ಪಂದಿಸುವ ಸಾಮಾಜಿಕ ತಾಲತಾಣ ಟ್ವಿಟರ್‌ಗೆ ಸಹ ಲಿಂಬೆ ಹಣ್ಣಿನ ಪ್ರವೇಶವಾಗಿದೆ. ದರ ಏರಿಕೆ ಬಗ್ಗೆ ನಾನಾ ರೀತಿಯ ಪೋಸ್ಟ್‌ಗಳು ಹರಿದಾಡುತ್ತಿವೆ. ಅವುಗಳಲ್ಲಿ ಕೆಲವು ಆಸಕ್ತಿಕರ ಪೋಸ್ಟ್‌ಗಳು ಇಲ್ಲಿವೆ..
|
ಸಂಚಲನ ಮೂಡಿಸಿದ 'ಪುಷ್ಪ'
Pushpa - The Lemonator ಎಂದು ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಪೋಸ್ಟರ್ ಎಡಿಟ್ ಮಾಡಿ ಹಿಂದೆ ಲಿಂಬೆ ಹಣ್ಣು ಹಾಕಲಾಗಿದೆ. ಈ ಪೋಸ್ಟ್ ಟ್ವೀಟರ್‌ನಲ್ಲಿ ಸಂಚಲನ ಮೂಡಿಸಿದೆ.
Recommended Video

ಬೆಲೆ ಏರಿಕೆಯ ಚರ್ಚೆಯಲ್ಲಿ ಲಿಂಬೆ
ಪೆಟ್ರೋಲ್, ಡೀಸೆಲ್, ಚಿನ್ನ, ಎಲ್‌ಪಿಜಿಗಳು ಬೆಲೆ ಏರಿಕೆ ಬಗ್ಗೆ ಚರ್ಚೆ ಮಾಡುತ್ತಿವೆ. ಈ ಚರ್ಚೆಗೆ ಲಿಂಬೆ ಹಣ್ಣು ಬಂದು ನಿಧಾನವಾಗಿ ಸೇರಿಕೊಳ್ಳುತ್ತಿದೆ.
|
ದುಖಃ ತೋಡಿಕೊಳ್ಳುತ್ತಿರುವ ಪೆಟ್ರೋಲ್
ಲಿಂಬೆ ಹಣ್ಣಿನ ದರ ಏರಿಕೆಯಾಗುತ್ತಿದ್ದಂತೆ ಪೆಟ್ರೋಲ್‌ಗೆ ಚಿಂತೆಯಾಗಿದೆ. ಏ ನನ್ನನ್ನು ಬಿಟ್ಟು ಹೋಗಬೇಡ ಎಂದು ಪೆಟ್ರೋಲ್ ಬೇಡಿಕೊಳ್ಳುತ್ತಿದೆ.
|
ಕಾರಿಗೆ ಕಟ್ಟಿಗೆ ಲಿಂಬೆ ಹಣ್ಣು ದರೋಡೆ
ಲಿಂಬೆ ಹಣ್ಣಿನ ದರ ಏರಿಕೆಯಾಗುತ್ತಿದ್ದಂತೆ ಕಾರಿಗೆ ದೃಷ್ಟಿಗೆ ಕಟ್ಟಿದ್ದ ಲಿಂಬೆ ಹಣ್ಣು ಸಹ ಕಾಣೆಯಾಗುತ್ತಿವೆ. ಅದನ್ನು ದರೋಡೆ ಮಾಡುವ ವ್ಯಂಗ್ಯ ಚಿತ್ರ ವೈರಲ್ ಆಗಿದೆ.
|
ಲಿಂಬೆ ದರ, ರಜನಿಕಾಂತ್
ಲಿಂಬೆ ಹಣ್ಣಿನ ದರಗಳು ಏರಿಕೆಯಾಗುತ್ತಿದ್ದಂತೆ ಲೆಮನ್ ಟೀ ಕುಡಿಯುವವರು ಬೇಡ ಎಂದು ಹೇಳುತ್ತಿದ್ದಾರೆ. ಈ ರೀತಿಯ ಪೋಸ್ಟ್‌ಗಳು ವೈರಲ್ ಆಗಿವೆ.
|
ಲಿಂಬೆ ದರ ಏರಿಕೆ ಬಿಸಿ
ಹೋಟೆಲ್‌ನಲ್ಲಿ ಊಟವಾದ ಬಳಿಕ ಬೌಲ್‌ನಲ್ಲಿ ಕೈ ತೊಳೆಯುವ ಮುನ್ನ ಬಿಲ್ ಪರಿಶೀಲಿಸಿ ಎಂಬ ಪೋಸ್ಟ್ ಸಹ ಟ್ವೀಟ್‌ನಲ್ಲಿದೆ.












Click it and Unblock the Notifications