ಭವಿಷ್ಯನಿಧಿ ಬಡ್ಡಿದರ ಬದಲಾವಣೆ ಬಗ್ಗೆ ಮಹತ್ವದ ಘೋಷಣೆ

ನವದೆಹಲಿ, ಮಾರ್ಚ್ 02: ನೌಕರರ ಭವಿಷ್ಯ ನಿಧಿಯ (ಇಪಿಎಫ್) ಮೇಲಿನ ಬಡ್ಡಿದರವನ್ನು ಶೇ 0.10ರಷ್ಟು ಹೆಚ್ಚಳ ಮಾಡಿದ್ದ ಕೇಂದ್ರ ಸರ್ಕಾರ, ಈ ಬಾರಿ ಯಾವುದೇ ಬದಲಾವಣೆ ತರದಿರಲು ನಿರ್ಧರಿಸಿದ್ದು, ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಮೂಲದಿಂದ ತಿಳಿದು ಬಂದಿದೆ.

2016ರ ಬಳಿಕ ಇದೇ ಮೊದಲ ಬಾರಿಗೆ ನೌಕರರ ಭವಿಷ್ಯ ನಿಧಿಯ ಬಡ್ಡಿದರದಲ್ಲಿ ಏರಿಕೆ ಮಾಡಲಾಗಿತ್ತು. ಶೇ 8.55ರಷ್ಟಿದ್ದ ಇಪಿಎಫ್ ಬಡ್ಡಿದರವು ಶೇ 8.65ಕ್ಕೆ ಹೆಚ್ಚಳವಾಗಿತ್ತು. 2018-19ನೇ ಸಾಲಿನಿಂದ ಬಡ್ಡಿ ದರ ಜಾರಿಗೊಳಿಸಿ ವಿತ್ತ ಸಚಿವಾಲಯ ಪ್ರಕಟಣೆ ಹೊರಡಿಸಿತ್ತು.

ಈ ನಿರ್ಧಾರದಿಂದ ಆರು ಕೋಟಿ ಗ್ರಾಹಕರಿಗೆ ಅನುಕೂಲವಾಗಿತ್ತು. ಕೇಂದ್ರ ಸರ್ಕಾರಕ್ಕೆ 151 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಿದೆ. ಈಗ ಬಡ್ಡಿದರ ಬದಲಾವಣೆ ಕುರಿತಂತೆ ಇಪಿಎಫ್ಒ ಟ್ರಸ್ಟಿಗಳ ಕೇಂದ್ರ ಸಮಿತಿಯು ಮಾರ್ಚ್ 05ರಂದು ಸಭೆ ಸೇರಲಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಘೋಷಿಸಲಿದೆ.

ಕಾರ್ಮಿಕ ಸಚಿವರ ನೇತೃತ್ವದ ಕೇಂದ್ರ ಟ್ರಸ್ಟಿಗಳ ಮಂಡಳಿಯು ಪ್ರತಿ ಹಣಕಾಸು ವರ್ಷದ ಇಪಿಎಫ್‌ ಬಡ್ಡಿದರದ ನಿರ್ಧಾರ ತೆಗೆದುಕೊಳ್ಳುತ್ತದೆ. ನಂತರ ಈ ನಿರ್ಧಾರವನ್ನು ವಿತ್ತ ಸಚಿವಾಲಯ ಪರಿಶೀಲಿಸಿ ಒಪ್ಪಿಗೆ ಸೂಚಿಸಲಿದೆ.

ಬಡ್ಡಿದರ ಇತಿಹಾಸ:

ಬಡ್ಡಿದರ ಇತಿಹಾಸ:

2012-13ರಲ್ಲಿ ಶೇ 8.5, 2013-14ರಲ್ಲಿ ಶೇ 8.75, 2015-16ರಲ್ಲಿ ಶೇ 8.8, 2016-17ರಲ್ಲಿ ಶೇ 8.65, 2017-18ರಲ್ಲಿ ಶೇ 8.55ರಷ್ಟಿತ್ತು. ಶೇ 8.55ರಷ್ಟಿದ್ದ ಇಪಿಎಫ್ ಬಡ್ಡಿದರವನ್ನು 2018-2019ರಲ್ಲಿ ಶೇ 8.65ಕ್ಕೆ ಹೆಚ್ಚಳ ಮಾಡಲಾಗಿತ್ತು. ಈ ನಿರ್ಧಾರದಿಂದ ಆರು ಕೋಟಿ ಗ್ರಾಹಕರಿಗೆ ಅನುಕೂಲವಾಗಲಿದ್ದು, ಕೇಂದ್ರ ಸರ್ಕಾರಕ್ಕೆ 151 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ

ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್ಒ) ನಿಯಮ

ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್ಒ) ನಿಯಮ

ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್ಒ) ತನ್ನ ನಿಯಮಗಳನ್ನು ಬದಲಾಯಿಸಿದ್ದು, ಇದರಿಂದ ಉದ್ಯೋಗ ಕಳೆದುಕೊಂಡವರಿಗೆ ಕೊಂಚ ನೆಮ್ಮದಿ ತಂದಿದೆ. ಒಂದು ತಿಂಗಳ ನಿರುದ್ಯೋಗದ ಬಳಿಕ ಬೇರೆ ಕಡೆ ಕೆಲಸ ಸಿಕ್ಕಲ್ಲಿ ಸದಸ್ಯರು ತಮ್ಮ ಹಳೆಯ ಪಿಎಫ್ ಖಾತೆಯನ್ನು ಹೊಸ ಕಂಪನಿಗೆ ನೀಡಬಹುದಾಗಿದೆ. ಮಾಸಿಕ ಪಿಎಫ್ ಅದರಲ್ಲಿಯೇ ಜಮೆಯಾಗಲಿದೆ. ಸದ್ಯದ ನಿಯಮದಂತೆ ಎರಡು ತಿಂಗಳ ನಿರುದ್ಯೋಗದ ಬಳಿಕ ಮಾತ್ರ ಸದಸ್ಯರಿಗೆ ತಮ್ಮ ಪಿಎಫ್ ಖಾತೆಯಲ್ಲಿನ ಹಣ ಪಡೆಯಲು ಅವಕಾಶವಿದೆ.

ಶೇ. 75 ಹಣವನ್ನು ಪಡೆದುಕೊಳ್ಳುವ ಅವಕಾಶ

ಶೇ. 75 ಹಣವನ್ನು ಪಡೆದುಕೊಳ್ಳುವ ಅವಕಾಶ

ಪಿಎಫ್ ನ ಶೇಕಡಾ 100ರಷ್ಟು ಹಣವನ್ನು ನೌಕರ ಪಡೆಯಬಹುದಾಗಿತ್ತು. ಭವಿಷ್ಯ ನಿಧಿ ಖಾತೆ (ಪಿಎಫ್)ಯಿಂದ ಶೇ. 75 ಹಣವನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸಲು ಕಾರ್ವಿುಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್​ಒ) ನಿರ್ಧರಿಸಿದೆ.

ಇಪಿಎಫ್ಒ ಎಲ್ಲ ನೌಕರರ ಪಿಎಫ್ ನಿಧಿಯನ್ನು ನೋಡಿಕೊಳ್ಳುತ್ತದೆ. ಇದ್ರಲ್ಲಿ 60 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಉದ್ಯೋಗಿಗಳು ತಮ್ಮ ಖಾತೆಯಲ್ಲಿನ ಬಾಕಿ ಶೇ. 25 ಹಣವನ್ನು ಎರಡು ತಿಂಗಳ ನಿರುದ್ಯೋಗದ ನಂತರ ಪಡೆಯಬಹುದಾಗಿದೆ ಅಥವಾ ಸಂಪೂರ್ಣ ಹಣವನ್ನು ಪಡೆದು ಖಾತೆ ಮುಚ್ಚಲು ಕೂಡ ಅವಕಾಶ ನೀಡಲು ಇಪಿಎಫ್​ಒ ಮುಂದಾಗಿದೆ.

ಪಿಎಫ್ ಲೆಕ್ಕಾಚಾರ

ಪಿಎಫ್ ಲೆಕ್ಕಾಚಾರ

ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. ನೌಕರನ ಸಂಬಳ 15 ಸಾವಿರಕ್ಕಿಂತ ಕಡಿಮೆಯಿದ್ರೆ ಆತನ ಸಂಬಳದಲ್ಲಿ ಪ್ರತಿ ತಿಂಗಳು ಶೇಕಡಾ 12ರಷ್ಟು ಭಾಗ ಪಿಎಫ್ ಖಾತೆ ಸೇರುತ್ತದೆ. ಕಂಪನಿ ಶೇಕಡಾ 8.33ರಷ್ಟು ಪಿಂಚಣಿ ಯೋಜನೆಗೆ ಹಾಗೂ ಶೇಕಡಾ 3.67ರಷ್ಟು ಇಪಿಎಫ್ ಗೆ ಹಣ ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+