Get Updates
Get notified of breaking news, exclusive insights, and must-see stories!

ಕೊಹಿನೂರ್‌ ವಜ್ರ ಪುರಿ ಜಗನ್ನಾಥನಿಗೆ ಸೇರಿದ್ದು: ಜಗನ್ನಾಥ ಸೇನೆ ವಾದ

ಗುವಾಹಟಿ, ಸೆಪ್ಟೆಂಬರ್ 13: ಕೊಹಿನೂರ್ ವಜ್ರವು ಭಗವಾನ್ ಜಗನ್ನಾಥನಿಗೆ ಸೇರಿದ್ದು ಎಂದು ಒಡಿಶಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯು ಹೇಳಿದ್ದು, ಇದನ್ನು ಇಂಗ್ಲೆಂಡ್‌ನಿಂದ ಭಾರತಕ್ಕೆ ತಂದು ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನಕ್ಕೆ ನೀಡಬೇಕು. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಸ್ಥಿಕೆಯನ್ನು ವಹಿಸಬೇಕು ಎಂದು ಸಂಸ್ಥೆ ಕೋರಿದೆ.

ರಾಣಿ ಎಲಿಜಬೆತ್ IIರ ಮರಣದ ನಂತರ ಅವರ ಮಗ ಪ್ರಿನ್ಸ್ ಚಾರ್ಲ್ಸ್ ಅವರು ಈಗ ರಾಜರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಾಡಿಕೆಯಂತೆ 105-ಕ್ಯಾರೆಟ್ ಕೊಹಿನೂರ್‌ ವಜ್ರವು ಚಾರ್ಲ್‌ ಅವರ ಪತ್ನಿ ಡಚೆಸ್ ಆಫ್ ಕಾರ್ನ್‌ವಾಲ್ ಕ್ಯಾಮಿಲ್ಲಾಗೆ ಸೇರುತ್ತದೆ. ಅವರು ಈಗ ರಾಜನ ಪತ್ನಿಯಾಗಿದ್ದಾರೆ. ಪುರಿ ಮೂಲದ ಶ್ರೀ ಜಗನ್ನಾಥ ಸೇನೆಯು 12ನೇ ಶತಮಾನಕ್ಕೆ ಸೇರಿದ ದೇಗುಲದ ಐತಿಹ್ಯವಿರುವ ಕೊಹಿನೂರ್ ವಜ್ರವನ್ನು ಮರಳಿ ತರುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮಧ್ಯಸ್ಥಿಕೆ ವಹಿಸುವಂತೆ ಕೋರಿ ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದೆ.

ಕೊಹಿನೂರ್ ವಜ್ರವು ಶ್ರೀ ಜಗನ್ನಾಥ ಭಗವಾನ್ ಅವರದ್ದು. ಇದು ಈಗ ಇಂಗ್ಲೆಂಡ್ ರಾಣಿ ಬಳಿ ಇದೆ. ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಇಚ್ಛೆಯ ಮೇರೆಗೆ ಜಗನ್ನಾಥ ದೇವರಿಗೆ ಇದನ್ನು ದಾನ ಮಾಡಿದಂತೆ ಅದನ್ನು ಜಗನ್ನಾಥ ದೇವರಿಗೆ ಭಾರತಕ್ಕೆ ತರಲು ಕ್ರಮಕೈಗೊಳ್ಳುವಂತೆ ನಮ್ಮ ಪ್ರಧಾನಿಯನ್ನು ವಿನಂತಿಸಿಕೊಳ್ಳಿ ಎಂದು ಸೇನೆಯ ಸಂಚಾಲಕ ಪ್ರಿಯಾ ದರ್ಶನ್ ಪಟ್ನಾಯಕ್ ಜ್ಞಾಪಕ ಪತ್ರದಲ್ಲಿ ತಿಳಿಸಿದ್ದಾರೆ.

ಪಂಜಾಬ್‌ನ ಮಹಾರಾಜ ರಂಜಿತ್ ಸಿಂಗ್ ಅವರು ಅಫ್ಘಾನಿಸ್ತಾನದ ನಾದಿರ್ ಶಾ ವಿರುದ್ಧದ ಯುದ್ಧದಲ್ಲಿ ಗೆದ್ದ ನಂತರ ಪುರಿ ಜಗನ್ನಾಥನಿಗೆ ವಜ್ರವನ್ನು ದಾನ ಮಾಡಿದ್ದಾರೆ. ಆದರೆ, ತಕ್ಷಣ ಹಸ್ತಾಂತರಿಸಲಿಲ್ಲ. ರಣಜಿತ್ ಸಿಂಗ್ 1839ರಲ್ಲಿ ನಿಧನರಾದರು. 10 ವರ್ಷಗಳ ನಂತರ ಬ್ರಿಟಿಷರು ಕೊಹಿನೂರ್ ವಜ್ರವನ್ನು ಅವರ ಮಗ ದುಲೀಪ್ ಸಿಂಗ್‌ನಿಂದ ಕಿತ್ತುಕೊಂಡರು. ಆದರೂ ಅದು ಪುರಿಯಲ್ಲಿ ಜಗನ್ನಾಥ ದೇವರಿಗೆ ನೀಡಲ್ಪಟ್ಟಿದೆ ಎಂದು ಅವರಿಗೆ ತಿಳಿದಿತ್ತು ಎಂದು ಇತಿಹಾಸಕಾರ ಮತ್ತು ಸಂಶೋಧಕ ಅನಿಲ್ ಧೀರ್ ಪಿಟಿಐಗೆ ತಿಳಿಸಿದರು.

ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರ

ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರ

ಸೇನೆಯ ಸಂಚಾಲಕ ಪ್ರಿಯಾ ದರ್ಶನ್ ಪಟ್ನಾಯಕ್ ಅವರು ಈ ಸಂಬಂಧ ಪತ್ರವನ್ನು ಕಳುಹಿಸಿದ ನಂತರ, ಅಕ್ಟೋಬರ್ 19, 2016 ರಂದು ಬಕಿಂಗ್‌ಹ್ಯಾಮ್ ಅರಮನೆಯಿಂದ ಅವರು ಯುನೈಟೆಡ್ ಕಿಂಗ್‌ಡಮ್ ಸರ್ಕಾರಕ್ಕೆ ನೇರವಾಗಿ ರಾಷ್ಟ್ರಪತಿ ಮನವಿ ಮಾಡುವಂತೆ ಕೇಳಿಕೊಂಡರು. ರಾಣಿಯು ತನ್ನ ಮಂತ್ರಿಗಳ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುತ್ತಾರೆ. ಎಲ್ಲಾ ಸಮಯದಲ್ಲೂ ಕಟ್ಟುನಿಟ್ಟಾಗಿ ರಾಜಕೀಯೇತರವಾಗಿರುತ್ತಾರೆ. ಆ ಪತ್ರದ ಪ್ರತಿಯನ್ನು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರಕ್ಕೆ ಲಗತ್ತಿಸಲಾಗಿದೆ ಎಂದರು.

ಸೇನೆಯ ಹಕ್ಕು ಸಮರ್ಥನೀಯ: ಅನಿಲ್ ಧೀರ್

ಸೇನೆಯ ಹಕ್ಕು ಸಮರ್ಥನೀಯ: ಅನಿಲ್ ಧೀರ್

ಆರು ವರ್ಷಗಳಿಂದ ಈ ವಿಷಯದ ಬಗ್ಗೆ ಏಕೆ ಮೌನವಾಗಿದ್ದೀರಿ ಎಂದು ಕೇಳಿದಾಗ, ಇಂಗ್ಲೆಂಡ್‌ಗೆ ಭೇಟಿ ನೀಡಲು ತನಗೆ ವೀಸಾ ನಿರಾಕರಿಸಲಾಗಿದೆ. ಇದರಿಂದಾಗಿ ಯುಕೆ ಸರ್ಕಾರದೊಂದಿಗೆ ವಿಷಯವನ್ನು ಚರ್ಚೆ ಮಾಡಲು ಸಾಧ್ಯವಾಗಿಲ್ಲ ಎಂದು ಪಟ್ನಾಯಕ್ ಹೇಳಿದರು. ಮಹಾರಾಜ ರಂಜಿತ್ ಸಿಂಗ್ ಅವರ ಉತ್ತರಾಧಿಕಾರಿಗಳು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಂತಹ ಹಲವಾರು ಹಕ್ಕುದಾರರಿದ್ದರೂ ಸೇನೆಯ ಹಕ್ಕು ಸಮರ್ಥನೀಯವಾಗಿದೆ ಎಂದು ಸಂಶೋಧಕ ಅನಿಲ್ ಧೀರ್ ಹೇಳಿದರು.

ಬ್ರಿಟಿಷ್ ಆರ್ಮಿ ಅಧಿಕಾರಿ ಹೇಳಿಕೆ

ಬ್ರಿಟಿಷ್ ಆರ್ಮಿ ಅಧಿಕಾರಿ ಹೇಳಿಕೆ

ಮಹಾರಾಜ ರಂಜಿತ್ ಸಿಂಗ್ ಅವರ ಮರಣದ ಮೊದಲು ಉಯಿಲಿನಲ್ಲಿ ಅವರು ಜಗನ್ನಾಥ ದೇವರಿಗೆ ಕೊಹಿನೂರ್ ಅನ್ನು ದಾನ ಮಾಡಿದ್ದರು ಎಂದು ಹೇಳಲಾಗಿದೆ. ಈ ದಾಖಲೆಯನ್ನು ಬ್ರಿಟಿಷ್ ಆರ್ಮಿ ಅಧಿಕಾರಿಯೊಬ್ಬರು ಪ್ರಮಾಣೀಕರಿಸಿದ್ದಾರೆ. ಅದರ ಪುರಾವೆ ದೆಹಲಿಯ ನ್ಯಾಷನಲ್ ಆರ್ಕೈವ್ಸ್‌ನಲ್ಲಿ ಲಭ್ಯವಿದೆ ಎಂದು ಇತಿಹಾಸಕಾರಾದ ಧೀರ್‌ ಹೇಳಿದರು.

ವಜ್ರ ಕೊಟ್ಟಿದ್ದಕ್ಕೆ ದುಲೀಪ್ ಸಿಂಗ್ ವಿಷಾದ

ವಜ್ರ ಕೊಟ್ಟಿದ್ದಕ್ಕೆ ದುಲೀಪ್ ಸಿಂಗ್ ವಿಷಾದ

ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಸಂಸದ ಭೂಪಿಂದರ್ ಸಿಂಗ್ 2016 ರಲ್ಲಿ ರಾಜ್ಯಸಭೆಯಲ್ಲಿ ವಜ್ರವನ್ನು ಮರಳಿ ತರುವ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ವಿಷಯವನ್ನು ಒಡಿಶಾ ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಪುರಿಯ ಬಿಜೆಪಿ ಶಾಸಕ ಜಯಂತ್ ಸಾರಂಗಿ ಹೇಳಿದ್ದಾರೆ. ಕೊಹಿನೂರ್ ವಜ್ರವನ್ನು ಲಾಹೋರ್‌ನ ಮಹಾರಾಜರು ಆಗಿನ ಇಂಗ್ಲೆಂಡ್‌ನ ರಾಣಿಗೆ ಒಪ್ಪಿಸಿದ್ದಾರೆ ಹೊರತು ಸುಮಾರು 170 ವರ್ಷಗಳ ಹಿಂದೆ ಬ್ರಿಟಿಷರಿಗೆ ಹಸ್ತಾಂತರಿಸಲಾಗಿಲ್ಲ ಎಂದು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ಕೆಲವು ವರ್ಷಗಳ ಹಿಂದೆ ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದೆ. ಲೇಖಕ ಮತ್ತು ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಅವರು ತಮ್ಮ ಕೊಹಿನೂರ್ ಪುಸ್ತಕದಲ್ಲಿ ಸಿಖ್ ಉತ್ತರಾಧಿಕಾರಿ ದುಲೀಪ್ ಸಿಂಗ್ ಅವರು ವಿಕ್ಟೋರಿಯಾ ರಾಣಿಗೆ ಆಭರಣವನ್ನು ಒಪ್ಪಿಸಿದ್ದಕ್ಕಾಗಿ ವಿಷಾದಿಸಿದರು ಎಂದು ಹೇಳಿದರು. ಆದಾಗ್ಯೂ, ಅವರು ಅದನ್ನು ರಾಣಿಗೆ ಮನುಷ್ಯತ್ವಕ್ಕಾಗಿ ನೀಡಲು ಬಯಸಿದರು ಎಂದರು.

ಈಸ್ಟ್ ಇಂಡಿಯಾ ಕಂಪನಿಗೆ ನೀಡಿದ್ದಾರೆ

ಈಸ್ಟ್ ಇಂಡಿಯಾ ಕಂಪನಿಗೆ ನೀಡಿದ್ದಾರೆ

200 ಮಿಲಿಯನ್‌ ಡಾಲರ್‌ಗಿಂತಲೂ ಹೆಚ್ಚು ಬೆಲೆಬಾಳುವ ವಜ್ರವನ್ನು ಬ್ರಿಟಿಷ್ ಆಡಳಿತಗಾರರು ಕದ್ದಿಲ್ಲ ಅಥವಾ ಬಲವಂತವಾಗಿ ತೆಗೆದುಕೊಂಡಿಲ್ಲ. ಆದರೆ ಪಂಜಾಬ್‌ನ ಹಿಂದಿನ ಆಡಳಿತಗಾರರು ಈಸ್ಟ್ ಇಂಡಿಯಾ ಕಂಪನಿಗೆ ನೀಡಿದ್ದಾರೆ ಎಂಬುದು ಸುಪ್ರೀಂ ಕೋರ್ಟ್‌ನಲ್ಲಿ ಭಾರತ ಸರ್ಕಾರದ ನಿಲುವಾಗಿದೆ. ಪ್ರಪಂಚದ ಅತ್ಯಮೂಲ್ಯ ರತ್ನಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಕೊಹಿನೂರ್ ವಜ್ರವು 14ನೇ ಶತಮಾನದಲ್ಲಿ ಕಾಕತೀಯ ರಾಜವಂಶದ ಆಳ್ವಿಕೆಯಲ್ಲಿ ದಕ್ಷಿಣ ಭಾರತದ ಕೊಲ್ಲೂರು ಗಣಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆಯ ಸಮಯದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಕೊಹಿನೂರ್ ವಜ್ರವು ಪುರುಷರಿಗೆ ದುರಾದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇದು ಬ್ರಿಟಿಷರ ಕೈಗೆ ಬಂದಾಗಿನಿಂದ ಮಹಿಳೆಯರು ಮಾತ್ರ ಅದನ್ನು ಧರಿಸುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+