ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಣಿ 2ನೇ ಎಲಿಜಬೆತ್ ಗೌರವಾರ್ಥ ದೇಶಾದ್ಯಂತ ಶೋಕಾಚರಣೆ

|
Google Oneindia Kannada News

ನವದೆಹಲಿ, ಸೆ.11: ಸೆಪ್ಟೆಂಬರ್ 8ರಂದು ನಿಧನರಾದ ಬ್ರಿಟನ್ ರಾಣಿ 2ನೇ ಎಲಿಜಬೆತ್ ಅವರ ಗೌರವಾರ್ಥವಾಗಿ ದೇಶದಲ್ಲಿ ಭಾನುವಾರ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಭಾನುವಾರ ಕೆಂಪು ಕೋಟೆ ಮತ್ತು ರಾಷ್ಟ್ರಪತಿ ಭವನ ಸೇರಿದಂತೆ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ.

"ಅಗಲಿದ ಗಣ್ಯರಿಗೆ ಗೌರವ ಸೂಚಕವಾಗಿ, ಭಾರತ ಸರ್ಕಾರವು ಸೆಪ್ಟೆಂಬರ್ 11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ" ಎಂದು ಗೃಹ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಯಸ್ಸು 73, ಪ್ರಿನ್ಸ್ ಚಾರ್ಲ್ಸ್ ಈಗ ಕಿಂಗ್ 3ನೇ ಚಾರ್ಲ್ಸ್- ಪದವಿಪ್ರದಾನ ಹೇಗೆ?ವಯಸ್ಸು 73, ಪ್ರಿನ್ಸ್ ಚಾರ್ಲ್ಸ್ ಈಗ ಕಿಂಗ್ 3ನೇ ಚಾರ್ಲ್ಸ್- ಪದವಿಪ್ರದಾನ ಹೇಗೆ?

ಶೋಕಾಚರಣೆಯ ದಿನದಂದು, ರಾಷ್ಟ್ರಧ್ವಜವನ್ನು ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ದೇಶದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಇದೇ ವೇಳೆ ಯಾವುದೇ ಅಧಿಕೃತ ಮನರಂಜನೆ ಇರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೀರ್ಘ ಸೇವೆ ಸಲ್ಲಿಸಿದ ರಾಣಿ 2ನೇ ಎಲಿಜಬೆತ್

ದೀರ್ಘ ಸೇವೆ ಸಲ್ಲಿಸಿದ ರಾಣಿ 2ನೇ ಎಲಿಜಬೆತ್

ಏಳು ದಶಕಗಳ ಕಾಲ ಬ್ರಿಟನ್ ರಾಣಿಯಾಗಿದ್ದ ಎರಡನೇ ಎಲಿಜಬೆತ್, ಅತ್ಯಂತ ಸುದೀರ್ಘ ಅವಧಿಯವರೆಗೂ ದೇಶವನ್ನು ಆಳಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. 2015 ರಲ್ಲಿ ದೀರ್ಘ ಸೇವೆ ಸಲ್ಲಿಸಿದ ರಾಣಿ ಎರಡನೇ ಎಲಿಜಬೆತ್ ಅವರಿಗೆ ದೇಶದ ಜನರು ಗೌರವ ಸಲ್ಲಿಸಿದ್ದರು.

"ನಾವು ರಾಣಿಗೆ ಗೌರವವನ್ನು ನೀಡುತ್ತೇವೆ. ಏಕೆಂದರೆ ಅವರು ಭಾರತಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಭಾರತ ಮತ್ತು ಬ್ರಿಟನ್ ನಡುವೆ ಹಲವು ವರ್ಷಗಳಿಂದ ಗಟ್ಟಿಯಾದ ಸಂಬಂಧವಿದೆ. ಇದನ್ನು ಮುಂದುವರಿಸಲು ನಾವು ರಾಣಿಗೆ ಗೌರವವನ್ನು ನೀಡಬೇಕು" ಎಂದು ದೆಹಲಿ ನಿವಾಸಿಯೊಬ್ಬರು ಹೇಳಿದರು.

"ನಾವೆಲ್ಲರೂ ರಾಣಿ ಎಲಿಜಬೆತ್ ಅವರ ನಿಧನಕ್ಕೆ ಸಂತಾಪ ಸೂಚಿಸಬೇಕು. ಏಕೆಂದರೆ ಅವರು ನಮ್ಮ ಸಂವಿಧಾನದ ರಚನೆಯಲ್ಲಿ ಕೊಡುಗೆ ನೀಡಿದ್ದಾರೆ. ರಾಣಿಗಾಗಿ ಶೋಕಾಚರಣೆಯನ್ನು ಆಚರಿಸುವ ಸರ್ಕಾರದ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ" ಎಂದು ಮತ್ತೊಬ್ಬ ನಿವಾಸಿ ಹೇಳಿದರು.

ಪ್ರಧಾನಿ ಮೋದಿ ನಮ್ಮ ಕಾಲದ ಧೀಮಂತ ವ್ಯಕ್ತಿ!

ಪ್ರಧಾನಿ ಮೋದಿ ನಮ್ಮ ಕಾಲದ ಧೀಮಂತ ವ್ಯಕ್ತಿ!

ಒಂದು ದಿನದ ರಾಜ್ಯ ಶೋಕಾಚರಣೆಯನ್ನು ಆಚರಿಸಿದ್ದಕ್ಕಾಗಿ ಮೋದಿ ಸರ್ಕಾರವನ್ನು ಹಲವು ಮಂದಿ ಶ್ಲಾಘಿಸಿದರು.

"ಇದು ಮೋದಿ ಸರ್ಕಾರ ತೆಗೆದುಕೊಂಡ ಮಹತ್ತರ ನಿರ್ಧಾರ, ರಾಣಿ 2ನೇ ಎಲಿಜಬೆತ್ ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರಾಗಿದ್ದರು. ಇಡೀ ಜಗತ್ತು ಅವರನ್ನು ಮಾತೃವಿನಂತೆ ನೋಡಿದೆ" ಎಂದು ನಾಗರಿಕರೊಬ್ಬರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು "ನಮ್ಮ ಕಾಲದ ಧೀಮಂತ ವ್ಯಕ್ತಿ" ಎಂದಿರುವ ಅವರು, ಮೋದಿ ತನ್ನ ರಾಷ್ಟ್ರ ಮತ್ತು ಜನರಿಗೆ ಸ್ಪೂರ್ತಿದಾಯಕ ನಾಯಕತ್ವವನ್ನು ಒದಗಿಸಿದ್ದಾರೆ ಮತ್ತು ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯನ್ನು ವ್ಯಕ್ತಿಗತಗೊಳಿಸಿದ್ದಾರೆ ಎಂದಿದ್ದಾರೆ.

10 ದಿನಗಳ ರಾಷ್ಟ್ರೀಯ ಶೋಕಾಚರಣೆ

10 ದಿನಗಳ ರಾಷ್ಟ್ರೀಯ ಶೋಕಾಚರಣೆ

ಸೆಪ್ಟೆಂಬರ್ 8ರಂದು ಅವರ ವೈದ್ಯಕೀಯ ಸ್ಥಿತಿ ಹದಗೆಟ್ಟಿದೆ ಎಂದು ವರದಿಯಾದ ಕೆಲವೇ ಗಂಟೆಗಳಲ್ಲಿ ಯುಕೆ ರಾಜಮನೆತನವು ರಾಣಿ 2ನೇ ಎಲಿಜಬೆತ್ ಸಾವಿನ ಸುದ್ದಿಯನ್ನು ಪ್ರಕಟಿಸಿತ್ತು. 96 ವರ್ಷ ವಯಸ್ಸಿನ ರಾಣಿ 2ನೇ ಎಲಿಜಬೆತ್ ನಿಧನಕ್ಕೆ ಪ್ರಪಂಚದಾದ್ಯಂತ ಸಂತಾಪಗಳು ಹರಿದುಬಂದಿವೆ.

ರಾಣಿಯ ಅಂತ್ಯಕ್ರಿಯೆಯು ಆಕೆಯ ಮರಣದ 10 ದಿನಗಳ ನಂತರ ನಡೆಯಲಿದೆ. ಅವರ ಮರಣದ ಐದು ದಿನಗಳ ನಂತರ ಅವರ ಶವಪೆಟ್ಟಿಗೆಯನ್ನು ಲಂಡನ್‌ನಿಂದ ಬಕಿಂಗ್‌ಹ್ಯಾಮ್ ಅರಮನೆಗೆ ವೆಸ್ಟ್‌ಮಿನಿಸ್ಟರ್ ಅರಮನೆಗೆ ವಿದ್ಯುಕ್ತ ಮಾರ್ಗದ ಮೂಲಕ ಒಯ್ಯಲಾಗುತ್ತದೆ.

ಬ್ರಿಟನ್‌ನಲ್ಲಿ 10 ದಿನಗಳ ರಾಷ್ಟ್ರೀಯ ಶೋಕಾಚರಣೆ ನಡೆಸಲಾಗುತ್ತಿದೆ. ರಾಜಮನೆತನದ ಸದಸ್ಯರು, ರಾಜಮನೆತನದ ಸಿಬ್ಬಂದಿ ಮತ್ತು ರಾಜಮನೆತನದ ಪ್ರತಿನಿಧಿಗಳು ಅಧಿಕೃತ ಕರ್ತವ್ಯಗಳ ಮೇಲೆ ರಾಯಲ್ ಶೋಕಾಚರಣೆಯನ್ನು ಆಚರಿಸುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೇಶಾದ್ಯಂತ ಪ್ರಯಾಣಿಸುವ ಹೊಸ ಉತ್ತರಾಧಿಕಾರಿ

ದೇಶಾದ್ಯಂತ ಪ್ರಯಾಣಿಸುವ ಹೊಸ ಉತ್ತರಾಧಿಕಾರಿ

ಯುಕೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ರಾಣಿ 2ನೇ ಎಲಿಜಬೆತ್ ಗುರುವಾರ ನಿಧನರಾದರು, ಅವರ ಏಳು ದಶಕಗಳ ಆಳ್ವಿಕೆ ಕೊನೆಗೊಂಡಿತು. ಇದು ಮುಂದಿನ ಪ್ರಕ್ರಿಯೆಗಳು ಮತ್ತು ಅಧಿಕಾರಗಳ ಪರಿವರ್ತನೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಿನ್ಸ್ ಚಾರ್ಲ್ಸ್ ಪಟ್ಟಾಭಿಷೇಕದ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅದರ ನಂತರ ಹೊಸ ರಾಜನ ಆಳ್ವಿಕೆಯನ್ನು ಘೋಷಿಸುವ ಘೋಷಣೆಯನ್ನು ಓದಲಾಗುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ರಾಣಿಯ ಹೊಸ ಉತ್ತರಾಧಿಕಾರಿ, ಆಕೆಯ ಅಂತ್ಯಕ್ರಿಯೆಯ ಮೊದಲು ದೇಶಾದ್ಯಂತ ಪ್ರಯಾಣಿಸುತ್ತಾನೆ. ಇವುಗಳು ಯುಕೆ ಒಳಗೆ ಬರುವ ಎಲ್ಲಾ ದೇಶಗಳನ್ನು ಸಹ ಒಳಗೊಂಡಿರುತ್ತವೆ.

English summary
Indian national flags fly at half-mast on Sunday As India observes one-day state mourning as a mark of respect to Britain's Queen Elizabeth II
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X