ಮಗನ ಹೋಮ್‌ವರ್ಕ್ ಮಾಡಲು ಹೋಗಿ 21 ಭಾಷೆಗಳ 'ಅಕ್ಷರ್' ಕೀಬೋರ್ಡ್ ಸೃಷ್ಟಿಸಿದ ಬೆಂಗಳೂರಿನ ಟೆಕ್ಕಿ

ಬೆಂಗಳೂರು: ಮಗನ ಕನ್ನಡ ಹೋಮ್‌ವರ್ಕ್ ಮಾಡಲು ಸಹಾಯ ಮಾಡಲು ಹೋಗಿ ಬೆಂಗಳೂರಿನ ಟೆಕ್ಕಿಯೊಬ್ಬರು ಹೊಸ ಆವಿಷ್ಕಾರವೊಂದನ್ನು ಮಾಡಿದ್ದಾರೆ. 35 ವರ್ಷದ ಡೆವಲಪರ್ ಕೃಷ್ಣ ಪೆರ್ಮಿ ಎಂಬುವವರು 'ಅಕ್ಷರ್' ಎಂಬ ಹೆಸರಿನ ಉಚಿತ ಕೀಬೋರ್ಡ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದು ಬರೋಬ್ಬರಿ 21 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ.

ಮಗನ ಹೋಮ್‌ವರ್ಕ್‌ನಿಂದ ಶುರುವಾದ ಪಯಣ

ತಮ್ಮ ಮಗನಿಗೆ ಮನೆಯಲ್ಲಿ ಕನ್ನಡ ಅಭ್ಯಾಸ ಮಾಡಲು ಕೃಷ್ಣ ಪೆರ್ಮಿ ಅವರು ಸಹಾಯ ಮಾಡುತ್ತಿದ್ದರು. ಓದಲು ಮತ್ತು ಟಿಪ್ಪಣಿಗಳನ್ನು ಮಾಡಿಕೊಳ್ಳಲು ಅವರಿಗೆ ಐಫೋನ್‌ನಲ್ಲಿ ಸುಲಭವಾಗಿ ಕನ್ನಡ ಟೈಪ್ ಮಾಡುವ ಅಗತ್ಯವಿತ್ತು. ಗೂಗಲ್ ಇನ್‌ಪುಟ್ ಟೂಲ್ಸ್ ಬಳಸಲು ಮುಂದಾದಾಗ, ಅದು ಮೊಬೈಲ್‌ಗೆ ಪೂರಕವಾಗಿಲ್ಲದಿರುವುದು ಮತ್ತು ಕಾರ್ಯನಿರ್ವಹಿಸಲು ಇಂಟರ್ನೆಟ್ ಸಂಪರ್ಕದ ಅಗತ್ಯವಿರುವುದು ಅವರ ಗಮನಕ್ಕೆ ಬಂತು.

Akshar Keyboard

ಅಲ್ಲದೆ, ಬಳಕೆದಾರರು ಟೈಪ್ ಮಾಡುವ ಪ್ರತಿಯೊಂದು ಡೇಟಾ ಗೂಗಲ್ ಸರ್ವರ್‌ಗೆ ಹೋಗುತ್ತದೆ ಎಂಬುದು ಅವರ ಆತಂಕಕ್ಕೆ ಕಾರಣವಾಗಿತ್ತು. "ಕೀಬೋರ್ಡ್‌ಗಳಲ್ಲಿ ಒಟಿಪಿ, ಕ್ರೆಡಿಟ್ ಕಾರ್ಡ್ ನಂಬರ್‌ಗಳಂತಹ ಸೂಕ್ಷ್ಮ ಮಾಹಿತಿಯನ್ನು ಟೈಪ್ ಮಾಡುವುದರಿಂದ ಬಳಕೆದಾರರ ಗೌಪ್ಯತೆ ಬಹಳ ಮುಖ್ಯ, ನಾನು ಯಾವುದೇ ಡೇಟಾ ಸಂಗ್ರಹಿಸುತ್ತಿಲ್ಲ ಎಂಬ ಭರವಸೆಯನ್ನು ನೀಡಲು ಬಯಸಿದ್ದೆ" ಎಂದು ಪೆರ್ಮಿ ಹೇಳಿದ್ದಾರೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಐಐಟಿ ಮದ್ರಾಸ್‌ನ 'AI4Bharat' ನೆರವು

ಗೌಪ್ಯತೆ ಕಾಪಾಡುವ ಮತ್ತು ಇಂಟರ್ನೆಟ್ ಇಲ್ಲದೆ (ಆಫ್‌ಲೈನ್) ಕೆಲಸ ಮಾಡುವ ಕೀಬೋರ್ಡ್ ಹುಡುಕಾಟದಲ್ಲಿರುವಾಗ, ಐಐಟಿ ಮದ್ರಾಸ್‌ನ 'AI4Bharat' ಸಂಶೋಧನಾ ಉಪಕ್ರಮವು ಅವರ ಕಣ್ಣಿಗೆ ಬಿತ್ತು. ಅವರು ಅಭಿವೃದ್ಧಿಪಡಿಸಿದ್ದ 'IndicXlit' ಎಂಬ ಟ್ರಾನ್ಸ್‌ಲಿಟರೇಷನ್ ಮಾಡೆಲ್ ಅನ್ನು ಬಳಸಿ ಪೆರ್ಮಿ 'ಅಕ್ಷರ್' ಕೀಬೋರ್ಡ್ ನಿರ್ಮಿಸಿದರು.

ಐಒಎಸ್ ಕೀಬೋರ್ಡ್‌ಗಳು ಕೇವಲ 50 ರಿಂದ 75 ಎಂಬಿ ಮೆಮೊರಿ ಮಿತಿಯನ್ನು ಹೊಂದಿರುತ್ತವೆ. ಆದರೆ ಈ ಮಾಡೆಲ್ 350 ಎಂಬಿ ಇತ್ತು. ಹೀಗಾಗಿ 'ಕ್ವಾಂಟೈಸೇಶನ್' ತಂತ್ರಜ್ಞಾನ ಬಳಸಿ, ಗುಣಮಟ್ಟ ಕಳೆದುಕೊಳ್ಳದಂತೆ ಕೀಬೋರ್ಡ್ ಗಾತ್ರವನ್ನು ಕಡಿಮೆ ಮಾಡಿ ಮೊಬೈಲ್‌ಗೆ ಹೊಂದುವಂತೆ ಮಾಡಿದರು.

21 ಭಾರತೀಯ ಭಾಷೆಗಳಿಗೆ ಬೆಂಬಲ

'ಅಕ್ಷರ್' ಕೀಬೋರ್ಡ್ ಸಂಪೂರ್ಣವಾಗಿ ಡಿವೈಸ್‌ನಲ್ಲೇ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ಬಳಕೆದಾರರ ಡೇಟಾವನ್ನು ಸಂಗ್ರಹಿಸುವುದಿಲ್ಲ. ಗೂಗಲ್‌ನ ಜಿಬೋರ್ಡ್ 6 ಭಾರತೀಯ ಭಾಷೆಗಳನ್ನು ಹಾಗೂ ಆಪಲ್ 11 ಭಾಷೆಗಳನ್ನು ಬೆಂಬಲಿಸಿದರೆ, 'ಅಕ್ಷರ್' ಕೊಂಕಣಿ, ಬೋಡೋ, ಕಾಶ್ಮೀರಿ, ಡೋಗ್ರಿ, ಮೈಥಿಲಿ, ಮಣಿಪುರಿ, ಸಂಸ್ಕೃತ ಮತ್ತು ಸಿಂಧಿ ಸೇರಿದಂತೆ 21 ಭಾಷೆಗಳನ್ನು ಬೆಂಬಲಿಸುತ್ತದೆ.

ಸಂಪೂರ್ಣ ಉಚಿತ ಆ್ಯಪ್

ಈ ಆ್ಯಪ್ ಆಪಲ್ ಆ್ಯಪ್ ಸ್ಟೋರ್‌ನಲ್ಲಿ ಸಂಪೂರ್ಣ ಉಚಿತವಾಗಿ ಲಭ್ಯವಿದ್ದು, ಭವಿಷ್ಯದಲ್ಲೂ ಉಚಿತವಾಗಿಯೇ ಇರಲಿದೆ ಎಂದು ಪೆರ್ಮಿ ಸ್ಪಷ್ಟಪಡಿಸಿದ್ದಾರೆ. ಇದು 'ಕೋರ್ ಎಂಎಲ್' ಮೂಲಕ ಸ್ಥಳೀಯವಾಗಿ ಕಾರ್ಯನಿರ್ವಹಿಸುವುದರಿಂದ ಯಾವುದೇ ಸರ್ವರ್ ವೆಚ್ಚಗಳಿಲ್ಲ ಎಂದು ಅವರು ತಿಳಿಸಿದ್ದಾರೆ. ಸದ್ಯ ಐಒಎಸ್ ಬಳಕೆದಾರರಿಗೆ ಮಾತ್ರ ಲಭ್ಯವಿರುವ ಈ ಆ್ಯಪ್ ಅನ್ನು ಮುಂಬರುವ ದಿನಗಳಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೂ ತಲುಪಿಸುವ ಗುರಿಯನ್ನು ಕೃಷ್ಣ ಪೆರ್ಮಿ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+