Video Viral: ರೈಲಲ್ಲಿ 80ರೂ ಆಹಾರಕ್ಕೆ 130ರೂ ವಸೂಲಿ: ಬಿಲ್ ಕೇಳಿದ್ದಕ್ಕೆ IRCTC ಸಿಬ್ಬಂದಿ ಬೆದರಿಕೆ!

ಇತ್ತೀಚಿನ ದಿನಗಳಲ್ಲಿ ಕೆಲವು ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಸರದ, ಅಸಮಾಧಾನಿತ ಪ್ರಕರಣಗಳು ಮೇಲಿಂದ ಮೇಲೆ ವರದಿ ಆಗುತ್ತಿವೆ. ರೈಲಿನಲ್ಲಿ IRCTC ಅಧಿಕೃತವಾಗಿ ನಿಯೋಜಿಸಿದ ಆಹಾರ ಸಿಬ್ಬಂದಿಯೇ ಪ್ರಯಾಣಿಕರಿಗೆ ನಿಗದಿತ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಆಹಾರ ಪೊಟ್ಟಣ ಮಾರಾಟ ಮಾಡಿದ್ದಾನೆ. ಬಿಲ್ ಕೇಳಿದ್ದಕ್ಕೆ ರೈಲಿನಿಂದ ಎಸೆಯುವುದಾಗಿ ಬೆದರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ರೈಲ್ವೆ ಇಲಾಖೆ ಹಗಲು ದರೋಡೆ ಇಳಿದಂತಾಗಿದೆ ಎಂದು ನೆಟ್ಟಿಗರೂ ದೂರುತ್ತಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ರೈಲಿನಲ್ಲಿ ಆಹಾರವನ್ನು ಖರೀದಿಸಿದ್ದಾರೆ. ಈ ಆಹಾರಕ್ಕೆ 80 ರೂಪಾಯಿ ಬೆಲೆ ಇದ್ದು, ಅದನ್ನು ರೈಲಿನಿ ಸಿಬ್ಬಂದಿ 130 ರೂಪಾಯಿಗೆ ಮಾರಾಟ ಮಾಡಿದ್ದು, ಪ್ರಯಾಣಿಕನಿಗೆ ಗೊತ್ತಾಗಿದೆ. ಈ ಸಂಬಂಧ ಅವರು ಆಹಾರದ ಬಿಲ್ ನೀಡುವಂತೆ ಕೇಳಿದ್ದಾರೆ. ಆಗ ಮಾರಾಟಗಾರ ಬಿಲ್ ನೀಡುವುದಿಲ್ಲ ಎಂದು ನಿರಾಕರಿಸಿದ್ದಾರೆ. ಆ ಸಿಬ್ಬಂದಿ ಹಾಗೂ ಖರೀದಿಯ ಆಹಾರದ ಫೋಟೋವನ್ನು ಎಕ್ಸ್ ಖಾತೆಯಲ್ಲಿ (@Raajsingh0709) ಹಂಚಿಕೊಳ್ಳಲಾಗಿದೆ. ಇದಕ್ಕೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

IRCTC Food Overcharging

ಪ್ರಯಾಣಿಕನಿಗೆ ಬೆದರಿಕೆ ಹಾಕಿದ ಸಿಬ್ಬಂದಿ!

ಪ್ರಯಾಣಿಕ ಬಿಲ್ ಕೇಳುತ್ತಿದ್ದಂತೆ ತಡವರಿಸಿದ್ದಾನೆ. ಕೊನೆಗೆ ಪ್ರಯಾಣಿಕ ಜೋರು ಒತ್ತಾಯ ಮಾಡಲು ಮುಂದಾಗುತ್ತಿದ್ದಂತೆ ಮಾರಾಟಗಾರ ಅವರೊಂದಿಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದಾನೆ. ಇಬ್ಬರ ಮಧ್ಯ ಸಣ್ಣದಾಗಿ ಮಾತಿನ ಚಕಮಕಿ ನಡೆದಿದೆ. ನೀವು ಹೆಚ್ಚು ಪ್ರಶ್ನೆಗಳನ್ನು ಕೇಳಿದರೆ ರೈಲಿನಿಂದ ಎಸೆದು ಬಿಡುತ್ತೇನೆ ಎಂದು ಬೆದರಿಕೆ ಸ್ವರದಲ್ಲಿ ಸಿಬ್ಬಂದಿ ಹೇಳಿದ್ದಾನೆಂದು ರೈಲ್ವೆ ಪ್ರಯಾಣಿಕ ಆರೋಪಿಸಿದ್ದಾರೆ.

Video: ಆಟೋದಲ್ಲೇ ಜ್ಯುವೆಲ್ಲರಿ ಶಾಪ್! ಬೆಂಗಳೂರು ಚಾಲಕನ ಐಡಿಯಾಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ
Video: ಆಟೋದಲ್ಲೇ ಜ್ಯುವೆಲ್ಲರಿ ಶಾಪ್! ಬೆಂಗಳೂರು ಚಾಲಕನ ಐಡಿಯಾಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಒಮ್ಮೆ ಯೋಚಿಸಿ, 80 ರೂಪಾಯಿ ಮೌಲ್ಯದ ಆಹಾರವನ್ನು 130 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಬಿಲ್ ಸಹ ನೀಡುತ್ತಿಲ್ಲ. ದೂರು ನೀಡಲು ಬೆದರಿಕೆ ಹಾಕುತ್ತಿದ್ದರೆ, ರೈಲುಗಳಲ್ಲಿ ಬಹಿರಂಗ ಲೂಟಿ ನಡೆಯುತ್ತಿದೆಯೇ? ಎಂಬ ಶಿರ್ಷಿಕೆಯಡಿ ಫೋಟೋ, ವಿಡಿಯೋ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇಂಥಹ ಘಟನೆಗಳು ಇದೇ ಮೊದಲೇನಲ್ಲ. ಈ ಹಿಂದೆಯು ಇಂಥಹ ಅನೇಕ ಘಟನೆಗಳು ಬೆಳಕಿಗೆ ಬಂದಿವೆ.

ರೈಲ್ವೆ ಸಿಬ್ಬಂದಿಗೆ ನೆಟ್ಟಿಗರಿಂದ ತರಾಟೆ

ವಿಡಿಯೋ ಫೋಟೋ ನೋಡಿದ ನೆಟ್ಟಿಗರು, 'ಇಂತಹ ಘಟನೆಯಲ್ಲಿ ರೈಲ್ವೆ ಇಲಾಖೆ ದರೋಡೆ ಮಾಡುತ್ತಿದೆ ಎಂದು ನೇರ ಆರೋಪ ಸರಿಯಲ್ಲ ಆದರೆ ಹೆಚ್ಚು ಹಣ ಪಡೆಯುವುದು ಬಿಲ್ಲಿಂಗ್ ಕೊರತೆ ಮತ್ತು ಬೆದರಿಕೆಗಳು ನಿಜವಾಗಿದ್ದಲ್ಲಿ ಇದನ್ನು ರೈಲ್ವೆ ಇಲಾಖೆ, ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಪ್ರಯಾಣಿಕರು ದೂರು ನೀಡಬೇಕೆಂದು' ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು 'ರೈಲಿನಲ್ಲಿ ಅಡುಗೆ ಸೇವೆಗಳು ಪರವಾನಗಿ ಮತ್ತು ನಿಯಮಗಳ ಅಡಿ ಕಾರ್ಯ ನಿರ್ವಹಿಸುತ್ತವೆ. ನಿಯಮಗಳನ್ನು ಸಿಬ್ಬಂದಿ ಪಾಲಿಸಬೇಕಿದ್ದು, ಇಂತಹ ಘಟನೆಗಳು ಎದುರಾದಲ್ಲಿ ಪ್ರಯಾಣಿಕರು ತಕ್ಷಣವೇ ಸಹಾಯವಾಣಿ ಅಥವಾ ಅಧಿಕಾರಿಗಳಿಗೆ ವರದಿ ಮಾಡಬೇಕು' ಎಂದು ಕಾಮೆಂಟ್ ಮೂಲಕ ಸಲಹೆ ನೀಡಿದ್ದಾರೆ.

ನಿಜವೇ ಆದಲ್ಲಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ

'ವಾಸ್ತವದಲ್ಲಿ ಆಗಿದ್ದೇನು? ಮತ್ತು ಸರಿಯಾದ ಮಾರ್ಗದಲ್ಲಿ ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು' ಎಂದು ಮೂರನೇಯವರು ತಿಳಿಸಿದ್ದಾರೆ. ಮತ್ತೊಬ್ಬರು ಇಷ್ಟು ಸಣ್ಣ ವಿಷಯಕ್ಕೆ ರೈಲಿನಿಂದ ಎಸೆಯುವೆ ಎಂಬ ದೊಡ್ಡ ಬೆದರಿಕೆ ಅನಗತ್ಯ. ಈ ಘಟನೆ ನಿಜವಾಗಿಯೂ ಸಂಭವಿಸಿದ್ದಾದಲ್ಲಿ ಅದು ತಪ್ಪು, ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲಾ ವೈರಲ್ ವಿಡಿಯೋ/ಕಥೆಗಳು ನಿಜವೆಂದು ನಂಬಬಾರದು. ಈ ಬಗ್ಗೆ IRCTC ಅಥವಾ ರೈಲ್ವೆ ಇಲಾಖೆ ದೂರಿಗೆ ಪ್ರಕ್ರಿಯೆ ನೀಡಿತಾ ಎಂಬುದನ್ನು ಪರಿಶೀಲಿಸಬೇಕು. ಬಳಿಕ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಬೇಕು ಎಂದು ಐದನೇಯ ಬಳಕೆದಾರರು ಜಾಗೃತಿಯ ಮಾತುಗಳನ್ನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+