ಒಂದೇ ತಿಂಗಳಲ್ಲಿ ಐದು ರಾಜಯೋಗ: ಈ ರಾಶಿಯವರಿಗೆ ಒಲಿಯುವಳು ಅದೃಷ್ಟ ಲ̧ಕ್ಷ್ಮೀ, ಮನೆ ಖರೀದಿ ಯೋಗ

ಜ್ಯೋತಿಷ್ಯದ ಪ್ರಕಾರ ಜೂನ್ 2026 ಅದ್ಭುತ ತಿಂಗಳಾಗಲಿದೆ. ಈ ತಿಂಗಳು ಗ್ರಹಗಳ ಚಲನೆಯ ಕಾರಣಗಳಿಂದ ಐದು ರಾಜಯೋಗಗಳು ನಿರ್ಮಾಣವಾಗುತ್ತಿವೆ. ಇವುಗಳಲ್ಲಿ ಒಂದಾದ ಹಂಸ ಮಹಾಪುರುಷ ರಾಜಯೋಗದ ಫಲ ನಾಳೆಯಿಂದಲೇ ಪ್ರಾಪ್ತಿಯಾಗುವುದು. ಈ ರಾಜಯೋಗದ ಪರಿಣಾಮವಾಗಿ ಕೆಲವು ರಾಶಿಯವರ ಅದೃಷ್ಟ, ಹಣಕಾಸು, ವೃತ್ತಿ ಮತ್ತು ಪ್ರೇಮ ಜೀವನದ ಮೇಲೆ ಗಮನಾರ್ಹ ಪ್ರಭಾವವಿರುವುದು.

ಯಾವ ಗ್ರಹವು ಯಾವ ರಾಜಯೋಗವನ್ನು ರೂಪಿಸುತ್ತದೆ ?:

ಜೂನ್ 2026ರ ರಾಜಯೋಗ:

Rajayogas

1. ಹಂಸ ರಾಜ ಯೋಗ: ಪಂಚಮಹಾಪುರುಷ ರಾಜ ಯೋಗಗಳಲ್ಲಿ ಒಂದಾದ ಹಂಸ ರಾಜ ಯೋಗವನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಜೂನ್ 2, 2026 ರಂದು, ಗುರುವು ಕರ್ಕಾಟಕ ರಾಶಿಗೆ ಪ್ರವೇಶಿಸುವುದರೊಂದಿಗೆ ಹಂಸ ರಾಜ ಯೋಗ ರೂಪುಗೊಳ್ಳುತ್ತದೆ. ಈ ಯೋಗವು ಅಕ್ಟೋಬರ್ 31, 2026 ರವರೆಗೆ ಸಕ್ರಿಯವಾಗಿರುತ್ತದೆ.

Rajayogas

2. ಗಜಲಕ್ಷ್ಮಿ ರಾಜಯೋಗ: ಜೂನ್ 8, 2026 ರಂದು, ಶುಕ್ರನು ಕರ್ಕ ರಾಶಿಗೆ ಪ್ರವೇಶಿಸಿ ಗುರುವಿನ ಜೊತೆ ಸಂಯೋಗ ಹೊಂದುತ್ತಾನೆ. ಈ ಅವಧಿಯಲ್ಲಿ ಗಜಲಕ್ಷ್ಮಿ ರಾಜಯೋಗದ ಸೃಷ್ಟಿಯಾಗುತ್ತದೆ. ಈ ಯೋಗವು ಅಪಾರ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವುದು ನಂಬಿಕೆ.

Rajayogas

3. ಭದ್ರ ರಾಜ ಯೋಗ: ಬುಧನು ತನ್ನದೇ ಆದ ಮಿಥುನ ರಾಶಿಯಲ್ಲಿದ್ದು ಭದ್ರ ರಾಜ ಯೋಗವನ್ನು ರೂಪಿಸುತ್ತಿದ್ದಾನೆ. ಬುಧನು ಜೂನ್ 22, 2026 ರವರೆಗೆ ಈ ರಾಜಯೋಗವನ್ನು ಕರುಣಿಸುತ್ತಾನೆ.

Rajayogas

4. ರುಚಕ್ ರಾಜ ಯೋಗ: ಮಂಗಳವು ತನ್ನದೇ ಆದ ಮೇಷ ರಾಶಿಯಲ್ಲಿದ್ದು, ರುಚಕ್ ರಾಜ ಯೋಗವನ್ನು ರೂಪಿಸುತ್ತಿದೆ. ಮಂಗಳವು ಜೂನ್ 21, 2026 ರವರೆಗೆ ಮೇಷ ರಾಶಿಯಲ್ಲಿ ಇರುತ್ತದೆ. ಹಾಗಾಗಿ ಅಲ್ಲಿಯವರೆಗೆ ರುಚಕ್ ರಾಜ ಯೋಗವು ಕೂಡಾ ಸಕ್ರಿಯವಾಗಿರುತ್ತದೆ.

Rajayogas

5. ಲಕ್ಷ್ಮಿ ನಾರಾಯಣ ರಾಜಯೋಗ: ಬುಧ ಮತ್ತು ಶುಕ್ರರು ಪ್ರಸ್ತುತ ಮಿಥುನ ರಾಶಿಯಲ್ಲಿದ್ದು, ಲಕ್ಷ್ಮಿ ನಾರಾಯಣ ಯೋಗವನ್ನು ಸಕ್ರಿಯಗೊಳಿಸುತ್ತಿದ್ದಾರೆ. ಜೂನ್ 8 ರಂದು ಶುಕ್ರ ಕರ್ಕ ರಾಶಿಗೆ ಚಲಿಸುವವರೆಗೆ ಈ ಯೋಗ ಇರುತ್ತದೆ.

ಹೊಳೆಯುವುದು ಈ ರಾಶಿಯವರ ಅದೃಷ್ಟ:

ಜೂನ್ ತಿಂಗಳ ರಾಜ್ಯಯೋಗವು ವೃಷಭ, ಕರ್ಕ, ಸಿಂಹ ಮತ್ತು ಮೀನ ರಾಶಿಯವರಿಗೆ ಅತ್ಯಂತ ಶುಭಕರವೆಂದು ಸಾಬೀತಾಗಬಹುದು.

Monthly Horoscope: ಐದು ರಾಶಿಯವರಿಗೆ ಜೂನ್‌ ತಿಂಗಳು ಅದೃಷ್ಟ, ಹರಿದು ಬರುವುದು ಸಿರಿ ಸಂಪತ್ತು, ಕೆಲಸದಲ್ಲಿ ಯಶಸ್ಸು
Monthly Horoscope: ಐದು ರಾಶಿಯವರಿಗೆ ಜೂನ್‌ ತಿಂಗಳು ಅದೃಷ್ಟ, ಹರಿದು ಬರುವುದು ಸಿರಿ ಸಂಪತ್ತು, ಕೆಲಸದಲ್ಲಿ ಯಶಸ್ಸು

ವೃಷಭ ರಾಶಿ : ಆರ್ಥಿಕ ಲಾಭವಾಗುವುದು. ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಹೊಸ ಕೆಲಸ ಆರಂಭಿಸಲು ಇದು ಸಕಾಲ. ಬಡ್ತಿ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರುವಿರಿ.

ಕಟಕಟ ರಾಶಿ: ಉದ್ಯೋಗದಲ್ಲಿ ಬಡ್ತಿ ಸಿಗುವುದು. ಮನೆಯಲ್ಲಿ ಕಚೇರಿಯಲ್ಲಿ ನಿಮ್ಮ ಮಾತಿಗೆ ವಿಶೇಷ ಮನ್ನಣೆ ಸಿಗುವುದು. ಎಲ್ಲಾ ಕೆಲಸಗಳು ನೀವಂದುಕೊಂಡಂತೆ ನಡೆಯುವುದು. ಹೊಸ ಮನೆ ಖರೀದಿ ಯೋಗವಿದೆ. ಮಕ್ಕಳಿಂದ ಶುಭ ಸುದ್ದಿ ಸಿಗುವುದು.

ಸಿಂಹ ರಾಶಿ: ವ್ಯಾಪಾರ, ವಹಿವಾಟುಗಳಲ್ಲಿ ದೊಡ್ಡ ಮಟ್ಟದ ಲಾಭವಾಗುವುದು. ಸಂಬಂಧಗಳು ಸುಧಾರಿಸುವುದು. ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಉದ್ಯಮ ಯಶಸ್ಸಿನತ್ತ ಸಾಗುವುದು.

ಮೀನ ರಾಶಿ: ಜೂನ್ ನಿಮಗೆ ಅದೃಷ್ಟದ ತಿಂಗಳಾಗಿರುವುದು. ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು. ಉದ್ಯೋಗ ಹುಡುಕುತ್ತಿರುವವರಿಗೆ ಅಪೇಕ್ಷೆಯಂತೆ ಕೆಲಸ ಸಿಗುವುದು. ಹಣಕಾಸಿನ ಲಾಭವಾಗುವುದು.

ಒಟ್ಟಿಗೆ ಎರದು ಗ್ರಹಗಳ ಸಂಚಾರ: ನಾಲ್ಕು ರಾಶಿಯವರಿಗೆ ಅದೃಷ್ಟ, ದುಪ್ಪಟ್ಟಾಗುವುದು ಸಂಪತ್ತು, ಸಾಲಗಳಿಂದ ಮುಕ್ತಿ
ಒಟ್ಟಿಗೆ ಎರದು ಗ್ರಹಗಳ ಸಂಚಾರ: ನಾಲ್ಕು ರಾಶಿಯವರಿಗೆ ಅದೃಷ್ಟ, ದುಪ್ಪಟ್ಟಾಗುವುದು ಸಂಪತ್ತು, ಸಾಲಗಳಿಂದ ಮುಕ್ತಿ

ಈ ರಾಶಿಯವರಿಗೆ ಮಿಶ್ರಫಲ:

ಮೇಷ, ವೃಶ್ಚಿಕ ಮತ್ತು ಧನು ರಾಶಿಯವರಿಗೆ ಜೂನ್ ತಿಂಗಳು ಮಿಶ್ರಫಲವನ್ನು ನೀಡುವುದು. ಕೆಲವೊಂದು ವಿಷಯಗಳಲ್ಲಿ ಸಣ್ಣ ಮಟ್ಟದ ಹಿನ್ನೆಡೆಯಾದರೂ ಮತ್ತೆ ಗೆಲುವು ನಿಮ್ಮದಾಗುವುದು. ಬೇರೆಯವರಿಗೆ ಹಣ ನೀಡಲು ಹೋಗಬೇಡಿ. ಸಾಲ ನೀಡುವುದು, ಕೊಡುವುದು ಎರಡಕ್ಕೂ ಈ ಸಮಯ ಸೂಕ್ತವಲ್ಲ. ಬೇರೆಯವರ ವಿಚಾರದಲ್ಲಿ ಮಧ್ಯೆ ಪ್ರವೇಶಿಸದಿದ್ದರೆ ಒಳ್ಳೆಯದು.

ಈ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು:

ಜೂನ್ ತಿಂಗಳಲ್ಲಿ ತುಲಾ ಮತ್ತು ಕುಂಭ ರಾಶಿಯವರು ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಬೇಕು.ಯೋಚಿಸದೆ ಹೂಡಿಕೆ ಮಾಡುವುದರಿಂದ ನಷ್ಟವಾಗಬಹುದು.ಹಣಕಾಸಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಧಾರ ಬಹಳ ಎಚ್ಚರಿಕೆಯಿಂದ ಕೂಡಿರಬೇಕು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+