Breaking: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಸರಾ ಉದ್ಘಾಟನೆ
ಬೆಂಗಳೂರು, ಸೆ.10: ವಿಶ್ವವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ಖಚಿತಪಡಿಸಿದ್ದಾರೆ.
ದಸರಾ ಉದ್ಘಾಟನೆಗೆ ಯಾರನ್ನು ಕರೆಯಿಸಬೇಕು ಎಂದು ಪೂರ್ವಬಾವಿ ಸಭೆಯಲ್ಲಿ ಬಹಳ ಚರ್ಚೆ ನಡೆಸಲಾಯಿತು. ನೂತವಾಗಿ ರಾಷ್ಟ್ರಪತಿಯಾಗಿ ಆಯ್ಕೆಯಾದಂತಹ ದ್ರೌಪದಿ ಮುರ್ಮು ಅವರನ್ನು ಕರೆಯಿಸಬೇಕು ಎಂದು ಪತ್ರ ಬರೆಯಲಾಗಿತ್ತು. ಅವರು ಬರುವುದಕ್ಕೆ ಒಪ್ಪಿದ್ದಾರೆ. ಅವರಿಂದ ಒಪ್ಪಿಗೆ ಸೂಚಿಸಿ ಇಂದು ಪತ್ರ ಬಂದಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ದೇಶದ ಮೊದಲ ಪ್ರಜೆ ಕೈಯಿಂದ ಈ ಬಾರಿ ದಸರಾ ಉದ್ಘಾಟನೆಯಾಗುತ್ತದೆ ಎಂಬುದು ಬಹಳ ಖುಷಿ ನೀಡಿದೆ. ರಾಜ್ಯದಿಂದ ಎಲ್ಲರೂ ಪಾಲ್ಗೊಂಡಿರುತ್ತಾರೆ. ಮುಖ್ಯವಾಗಿ ದಸರಾ ಉದ್ಘಾಟನೆ ರಾಷ್ಟ್ರಪತಿ ಅವರಿಂದ ಆಗುತ್ತದೆ. ರಾಷ್ಟ್ರಪತಿಯವರು ದಸರಾ ಉದ್ಘಾಟನೆಗಾಗಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಅಗತ್ಯ ಭದ್ರತೆ ಒದಗಿಸಲಾಗುತ್ತದೆ ಎಂದು ಹೇಳಿದರು.












Click it and Unblock the Notifications