Chandrayaan: ಚಂದ್ರಯಾನ-2 & ಚಂದ್ರಯಾನ-3 ಎರಡಕ್ಕೂ ವ್ಯತ್ಯಾಸ ಏನು?

ಭಾರತದ ಬಹುನಿರೀಕ್ಷಿತ ಯೋಜನೆ ಚಂದ್ರಯಾನ-3 ಇನ್ನೇನು ಅಂತಿಮ ಹಂತಕ್ಕೆ ಬಂದು ನಿಂತಿದೆ. ನಾಳೆ ಶತಕೋಟಿ ಭಾರತೀಯರು ಉಸಿರು ಬಿಗಿ ಹಿಡಿದು ಕಾಯುತ್ತಿರುವ ಆ ಘಳಿಗೆ ಬರಲಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಭಾರತ ಇತಿಹಾಸ ಬರೆಯಲಿದೆ. ಆದರೆ ಇದೇ ಸಂದರ್ಭದಲ್ಲಿ ಚಂದ್ರಯಾನ-2 & ಚಂದ್ರಯಾನ-3ರ ನಡುವಿನ ವ್ಯತ್ಯಾಸ ಏನು? ಅಂತಾ ತಿಳಿಯೋಣ ಬನ್ನಿ.

2019ರಲ್ಲಿ ಭಾರತ ಉಡಾಯಿಸಿದ್ದ ಚಂದ್ರಯಾನ-2 ಯಶಸ್ಸಿಗಾಗಿ ಇಡೀ ಜಗತ್ತು ಬೇಡಿತ್ತು. ದೇವರ ಬಳಿ ಪ್ರಾರ್ಥನೆ ಮಾಡಿಕೊಂಡಿತ್ತು ಪ್ರಪಂಚ. ಆದ್ರೆ ಕೊನೇ ಹಂತ ತಲುಪಿದ್ದಾಗಲೇ ಚಂದ್ರಯಾನ-2ಗೆ ದೊಡ್ಡ ಆಘಾತ ಎದುರಾಗಿತ್ತು. ಸಣ್ಣ ತಾಂತ್ರಿಕ ಅಡಚಣೆಯಿಂದ ಇಡೀ ಯೋಜನೆ ಸೋತು ಹೋಗಿತ್ತು. ಚಂದ್ರಯಾನ-2 ವಿಕ್ರಮ್‌ ಲ್ಯಾಂಡರ್‌ 55 ಡಿಗ್ರಿಗೆ ತಿರುಗುವ ಬದಲಾಗಿ 410 ಡಿಗ್ರಿಗೆ ತಿರುಗಿತ್ತು. ಹೀಗಾಗಿಯೇ ಚಂದ್ರನ ನಿಗದಿತ ಮೇಲ್ಮೈ ತಲುಪಲು ಕೇವಲ 400 ಮೀಟರ್‌ ಇರುವಾಗಲೇ ವಿಕ್ರಮ್‌ ಲ್ಯಾಂಡರ್‌ಗೂ ಇಸ್ರೋಗೂ ಸಂಪರ್ಕ ಕಟ್ ಆಗಿಬಿಡ್ತು. ಹಾಗಾದರೆ 2019ರ ಸೋಲಿನ ನಂತರ ಭಾರತ ಎಷ್ಟು ಪಾಠ ಕಲಿತಿದೆ? ಚಂದ್ರಯಾನ-2 & ಚಂದ್ರಯಾನ-3ಕ್ಕೂ ಏನೆಲ್ಲಾ ಬದಲಾವಣೆ ಆಗಿದೆ? ಮುಂದೆ ಓದಿ.

difference-between-chandrayaan-2-and-chandrayaan-3

ಚಂದ್ರಯಾನ-2 & ಚಂದ್ರಯಾನ-3 ವ್ಯತ್ಯಾಸ

1) ಚಂದ್ರಯಾನ 2 ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಹೊಂದಿತ್ತು, ಆದರೆ ಚಂದ್ರಯಾನ 3ರಲ್ಲಿ ಆರ್ಬಿಟರ್ ಬದಲಾಗಿ ಪ್ರೊಪಲ್ಷನ್ ಮಾಡ್ಯೂಲ್ (Propulsion Module) ಅಳವಡಿಸಲಾಗಿದೆ.

2) ಚಂದ್ರಯಾನ 3ರ ಲ್ಯಾಂಡರ್ 'ಇನ್ಸ್ಟ್ರುಮೆಂಟ್ ಫಾರ್ ಲುನಾರ್ ಸೈಸ್ಮಿಕ್ ಆಕ್ಟಿವಿಟಿ' (ILSA) ಎಂಬ ಅತ್ಯಾಧುನಿಕ ಅಸ್ತ್ರ ಹೊಂದಿದೆ. ಇದು ಚಂದ್ರನ ಮೇಲೆ ಕಂಪನದ ಬಗ್ಗೆ ಅಧ್ಯಯನ ನಡೆಸಲು ಸಹಾಯ ಮಾಡಲಿದ್ದು ಪ್ಲಾಸ್ಮಾ ಸಾಂದ್ರತೆ ತಿಳಿಯಲು ಬೆನ್ನೆಲುಬು.

3) ಚಂದ್ರಯಾನ 2ರ ಒಟ್ಟು ತೂಕ 3,850 ಕೆಜಿ ಆಗಿತ್ತು, ಆದ್ರೆ ಚಂದ್ರಯಾನ 3 ಪ್ರೊಪಲ್ಷನ್ ಮಾಡ್ಯೂಲ್ (2,148 ಕೆಜಿ), ಲ್ಯಾಂಡರ್ ಮಾಡ್ಯೂಲ್ (1,752 ಕೆಜಿ) ಹಾಗೂ ರೋವರ್ ಮಾಡ್ಯೂಲ್ (26 ಕೆಜಿ) ಸೇರಿದಂತೆ 3,900 ಕೆಜಿ ತೂಗುತ್ತದೆ.

difference-between-chandrayaan-2-and-chandrayaan-3

4) ಚಂದ್ರಯಾನ 2 ಬರೋಬ್ಬರಿ 7 ವರ್ಷಗಳ ಸುದೀರ್ಘ ಕಾರ್ಯಾಚರಣೆಗೆ ಅಂತ ಇಸ್ರೋ ವಿನ್ಯಾಸ ಮಾಡಿತ್ತು. ಆದರೆ ಚಂದ್ರಯಾನ 3ನ್ನ ಈಗ ಕೇವಲ 3ರಿಂದ 6 ತಿಂಗಳ ಅವಧಿಗೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ.

5) ಚಂದ್ರಯಾನ 2 ಲ್ಯಾಂಡರ್ ಒಂದು ಅಪಾಯ ಪತ್ತೆ ಕ್ಯಾಮರಾ ಹೊಂದಿತ್ತು, ಆದರೆ ಈ ಯೋಜನೆ ಸೋಲಿನ ಬಳಿಕ ಚಂದ್ರಯಾನ 3ರಲ್ಲಿ 2 ದೃಢವಾದ ಅಪಾಯ ಪತ್ತೆ ಕ್ಯಾಮರಾಗಳ ಅಳವಡಿಕೆ ಮಾಡಿದೆ ಇಸ್ರೋ.

6) ಚಂದ್ರಯಾನ 2 ಆರ್ಬಿಟರ್ ಒಟ್ಟು 9 ಉಪಕರಣ ಹೊಂದಿತ್ತು, ಈಗ ಚಂದ್ರಯಾನ 3ರ ಪ್ರೊಪಲ್ಷನ್ ಮಾಡ್ಯೂಲ್ ಕೇವಲ ಒಂದೇ ಉಪಕರಣದಿಂದ ಎಲ್ಲವನ್ನೂ ನಿಭಾಯಿಸಲಿದೆ. ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟರಿ ಅರ್ಥ್ (SHAPE) ಎಂಬ ಸಾಧನ ಎಲ್ಲಾ ಅಗತ್ಯತೆ ಪೂರೈಸಲಿದೆ.

7) ಚಂದ್ರಯಾನ 3 ತನ್ನ ಲ್ಯಾಂಡರ್ ಜೊತೆಗೆ ಲೇಸರ್ ರೆಟ್ರೋಫ್ಲೆಕ್ಟರ್ ಅರೇ (LRA) ಕೂಡ ಒಳಗೊಂಡಿದೆ. ಚಂದ್ರನ ವ್ಯವಸ್ಥೆ ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡಲಿದೆ.

ಒಟ್ಟಾರೆ ಹೇಳುವುದಾದರೆ 2019ರ ಚಂದ್ರಯಾನ-2 ಸೋಲು ಭಾರತದ ಇಸ್ರೋಗೆ ದೊಡ್ಡ ಪಾಠ ಕಲಿಸಿದೆ. ಹೀಗೆ ಚಂದ್ರಯಾನ-3ಕ್ಕೆ ಸಕಲ ಸಿದ್ಧತೆ ಮಾಡಿಕೊಂಡ ಇಸ್ರೋ, ಇದೀಗ ಗೆಲುವಿಗೆ ಸನಿಹದಲ್ಲೇ ಇದೆ. ನಾಳೆ ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯಲು ತಯಾರಿ ನಡೆಸಿದ್ದು, ಇಡೀ ಜಗತ್ತು ಕಾಯುತ್ತಿದೆ. ಭಾರತ ಚಂದ್ರನ ಮೇಲ್ಮೈ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿದರೆ ಹೊಸ ಇತಿಹಾಸವೇ ಸೃಷ್ಟಿಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+