ಹೊಸ ಮಾದರಿಯ ಯಮಹಾ ಸ್ಕೂಟರ್ ದರ ಹಾಗೂ ವಿಶೇಷತೆ ತಿಳಿಯಿರ
ಯಮಹಾ ಕಂಪನಿಯೂ ಆಗಾಗ ಯುವಪೀಳಿಗೆಗೆ ತಕ್ಕಂತೆ ಹೊಸ ಹೊಸ ಮಾದರಿಯ ಸ್ಕೂಟಿಗಳನ್ನು ಬಿಡುತ್ತಲೇ ಇದೆ. ಯಮಹಾದಲ್ಲಿ ಡಿಯೋ ಬಾರೀ ಸದ್ದು ಮಾಡುತ್ತಲೇ ಇದೆ. ಈಗಲೂ ಬರೀ ನಗರ ಪ್ರದೇಶಗಳಲಲ್ಲದೆ, ಹಳ್ಳಿಗಳಲ್ಲೂ ಕೂಡ ಈ ಸ್ಕೂಟಿ ಸದ್ದು ಜೋರಾಗಿಯೇ ಇದೆ. ಹಾಗೆಯೇ ಇದೀಗ ಮತ್ತೆ Yamaha Aerox 155 motoGP ಹೊಸ ಮಾದರಿಯ ಸ್ಟೈಲೀಶ್ ಸ್ಕೂಟರ್‌ವೊಂದನ್ನು ಬಿಡುಗಡೆ ಮಾಡಿದೆ. ಹಾಗಾದರೆ ಇದರ ದರ ಹಾಗೂ ವಿಶೇಷತೆಗಳ ವಿವರವನ್ನು ಇಲ್ಲಿ ತಿಳಿಯಿರಿ.
Yamaha Aerox 155 motoGPಯ ಹೊಸ ಆವೃತ್ತಿಯು ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದಕ್ಕೆ ಇದೀಗ ಹೊಸ ಲುಕ್ ನೀಡಲಾಗಿದ್ದು, ಇದಕ್ಕೆ ನೀವು ಮರುಳಾಗುವುದಂತೂ ಖಚಿತವಾಗಿದೆ. ಮಾರುಕಟ್ಟೆಯಲ್ಲಿ 1,48,300 ರೂಪಾಯಿ ಆರಂಭಿಕ ಬೆಲೆಯೊಂದಿಗೆ ಇದು ಲಭ್ಯವಿದೆ.

Yamaha Aerox 155 motoGPಯ ಹೊಸ ಆವೃತ್ತಿಯು ಪ್ರೀಮಿಯಂ ಸ್ಕೂಟರ್ ಆಗಿದ್ದು, ಇದು ಶಕ್ತಿಯುತ ಎಂಜಿನ್ ಮತ್ತು ಅದ್ಭುತ ವಿನ್ಯಾಸವನ್ನು ಹೊಂದಿದೆ. ನಗದು ಪಾವತಿ ಅಥವಾ ಹಣಕಾಸು ಯೋಜನೆಯ ಮೂಲಕ ಇದು ಕೈಗೆಟುಕುವ ಬೆಲೆಯಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ. ಈ ಸ್ಕೂಟರ್ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ಕೂಡ ಬರುತ್ತಿವೆ. ಮತ್ತು ಬಹುತೇಕರು ಇದಕ್ಕೆ ಮರುಳಾಗಿಬಿಟ್ಟಿದ್ದಾರೆ. ನೀವು ಹೊಸ ಸ್ಕೂಟರ್‌ಗಾಗಿ ಹುಡುಕಾಡ ಮಾಡುತ್ತಿದ್ದರೆ, ಇದು ನಿಮಗೆ ಉತ್ತಮ ಆಯ್ಕೆಯಾಗಿದೆ.
ಖರೀದಿ ಮಾಡುವವರು ಗಮನಿಸಬೇಕಾದ ಪ್ರಮುಖ ಅಂಶಗಳು
1. ಹೊಸಮಾದರಿಯ Yamaha Aerox 155 motoGPಯ ಹೊಸ ಆವೃತ್ತಿಯು ಪ್ರೀಮಿಯಂ ಸ್ಕೂಟರ್ ಆಗಿದ್ದು, ಶಕ್ತಿಶಾಲಿ ಎಂಜಿನ್ ಮತ್ತು ಅದ್ಭುತ ವಿನ್ಯಾಸವನ್ನು ಹೊಂದಿದೆ.
2. ಈ ಸ್ಕೂಟರ್‌ನ ಆನ್-ರೋಡ್ ಬೆಲೆ 1,71,348 ರೂಪಾಯಿ ಆಗಿದೆ, ನೀವು ಇದನ್ನು 15,000 ರೂಪಾಯಿ ಡೌನ್ ಪಾವತಿಯೊಂದಿಗೆ ಖರೀದಿ ಮಾಡಬಹುದಾಗಿದೆ.
3. ನೀವು ಡೌನ್ ಪಾವತಿಯೊಂದಿಗೆ ಖರೀದಿ ಮಾಡಿದರೆ ಮಾಸಿಕ 5023 ರೂಪಾಯಿನಂತೆ ಕಂತುಗಳನ್ನು ಮೂರು ವರ್ಷಗಳ ಅವಧಿಗೆ (36 ತಿಂಗಳುಗಳು) ಪಾವತಿಸಬೇಕಾಗುತ್ತದೆ.












Click it and Unblock the Notifications