ನಿಮ್ಮ ಸಂಬಳ ಈ ಬಾರಿ ಎಷ್ಟು ಹೆಚ್ಚಾಗಲಿದೆ?

ನವದೆಹಲಿ, ಏ. 27: ಖಾಸಗಿ ನೌಕರರಿಗೆ ಸಿಹಿಸುದ್ದಿಯೊಂದಿದೆ. ವಿವಿಧ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿರುವವರು ಈ ಬಾರಿ ಕನಿಷ್ಠ ಶೇ, 10.7 ವೇತನ ಹೆಚ್ಚಳ ಪಡೆಯಲಿದ್ದಾರೆ ಎಂದು ಸರ್ವೇಯೊಂದು ಹೇಳಿದೆ.

ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉದ್ಯೋಗಿಗಳು ಹೆಚ್ಚಿನ ಸಿಹಿ ಸವಿಯುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ಸಮೀಕ್ಷೆ ಅನೇಕ ಕಾರಣಗಳನ್ನು ನೀಡಿದೆ.[ಅಮೆರಿಕದಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ಸಂಬಳವೇ ಅಧಿಕ!]

salary

ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಸಂಸ್ಥೆ 'ಡಿಲ್ಯೊಟ್' ಭಾರತದಲ್ಲಿ ಸಮೀಕ್ಷೆ ನಡೆಸಿ ವರದಿಯೊಂದನ್ನು ಸಿದ್ಧಪಡಿಸಿದೆ. ಇದರ ಪ್ರಕಾರ ಗರಿಷ್ಠ ಹೆಚ್ಚಳ ಶೇ. 12.1 ಆಗಬೇಕು. ರಿಟೈಲ್ ಸೆಕ್ಟರ್ ನಲ್ಲಿ ಶೇ. 9.4 ಹೆಚ್ಚಳ ಆಗಬೇಕು ಎಂದು ಹೇಳಿದೆ.

ಇದನ್ನು ಅನುಸರಿಸಿ ಹೇಳುವುದಾದರೆ ವೆರಿಯೆಬಲ್ ಪೆ ಶೇ. 17.4 ಹೆಚ್ಚಳವಾಗಬೇಕು. ಕಳೆದ ವರ್ಷ ಇದು ಶೇ. 17 ಕ್ಕೆ ನಿಂತಿತ್ತು. ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತಿಹೆಚ್ಚು ಅಂದರೆ ಶೇ. 19.4 ಹೆಚ್ಚಳ ಸಾಧ್ಯತೆಯಿದೆ. ಲಾಜಿಸ್ಟಿಕ್ ವಿಭಾಗದಲ್ಲಿ ಅತಿ ಕಡಿಮೆ ಹೆಚ್ಚಳವಾಗುವ ನಿರೀಕ್ಷೆಯಿದೆ.[ಪಿಎಫ್ ಹೊಸ ನಿಮಯ : ಟೇಕ್ ಹೋಮ್ ಸಂಬಳಕ್ಕೆ ಕುತ್ತು !]

2014 ಹಣಕಾಸು ವರ್ಷದಲ್ಲಿ ಐಟಿ ವಿಭಾಗಕ್ಕೆ ಅತಿಹೆಚ್ಚು ಅಂದರೆ ಶೇ. 21 ರಷ್ಟು ಹೆಚ್ಚಳವಾಗಿತ್ತು. ಒಟ್ಟಿನಲ್ಲಿ ನಿರೀಕ್ಷೆಯಂತೆ ಎಲ್ಲ ಕಂಪನಿಗಳು ಈ ಸಾರಿ ಹೆಚ್ಚಳ ಮಾಡಿದರೆ ಉದ್ಯೋಗಿಗಳ ಬಟ್ಟಲಿಗೆ ತುಪ್ಪ ಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+