ಜನ್ ಆಹಾರ ಕೆಫೆ: ರೈಲು ನಿಲ್ದಾಣಗಳಲ್ಲಿ 20ರುಗೆ ಊಟ
ಬೆಂಗಳೂರು, ಜ.04: ಎಷ್ಟೋ ರೈಲು ನಿಲ್ದಾಣಗಳಲ್ಲಿ ಚಹಾ ಸಿಗುವುದೇ ಕಷ್ಟ ಗೊಣಗುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ವರ್ಷಾರಂಭದಲ್ಲಿ ಶುಭ ಸುದ್ದಿ ನೀಡುತ್ತಿದೆ. ಜನ್ ಆಹಾರ ಕೆಫೆಗಳನ್ನು ಆರಂಭಿಸಿ ಕಡಿಮೆ ವೆಚ್ಚದಲ್ಲಿ ಆಹಾರ ಒದಗಿಸಲು ಮುಂದಾಗಿದೆ.[ರೈಲ್ವೆ ನಿಲ್ದಾಣದಲ್ಲಿ ಲೀಟರ್ ಶುದ್ಧ ನೀರಿಗೆ 5 ರುಪಾಯಿ]
ಈ ಮೂಲಕ ಪ್ರತಿನಿತ್ಯ ರೈಲಿನಲ್ಲಿ ಸಂಚರಿಸುವ ಸುಮಾರು 30 ಮಿಲಿಯನ್ ಗೂ ಅಧಿಕ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಕೇಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ (ಐಆರ್ ಸಿಟಿಸಿ) ಸಿಹಿ ಸುದ್ದಿ ನೀಡಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಆಹಾರ ನೀಡಬಲ್ಲ ಈ ಕೆಫೆಟೇರಿಯಾಗಳಿಗೆ 'ಜನಾಹಾರ' ಎಂದು ಹೆಸರಿಡಲಾಗಿದೆ.

ಜನಾಹಾರ ಕೆಫೆ ಸ್ವಸಹಾಯ ಪದ್ಧತಿಯ ಹೊಂದಿರುತ್ತದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿವೆ. 8-12 ಸೀಟಿಂಗ್ ವ್ಯವಸ್ಥೆ ಇರುವ ಈ ಹೊಟೇಲ್ನಲ್ಲಿ ಎಸಿ ಸೌಲಭ್ಯ ಇರಲಿದ್ದು, ಉಚಿತ ಶುದ್ಧೀಕರಿಸಿದ ನೀರು ಕೂಡ ಲಭ್ಯವಿರಲಿದೆ. ಅಡುಗೆ ಕೋಣೆಗೆ ಗ್ಲಾಸ್ನ ವಿಭಜಕ ಅಳವಡಿಸಲಾಗುತ್ತದೆ. ಹಾಗಾಗಿ ಗ್ರಾಹಕರು ಅಡುಗೆ ಕೋಣೆಯ ಸ್ವಚ್ಛತೆ ನೋಡಬಹುದಾಗಿದೆ.[ಇ-ಕ್ಯಾಟರಿಂಗ್ ಪಟ್ಟಿಗೆ ಸಾವಿರಾರು ರೈಲುಗಳು ಸೇರ್ಪಡೆ]
ಆಹಾರದ ಶುದ್ಧತೆ ಬಗ್ಗೆ ಪ್ರಯಾಣಿಕರು ಸಚಿವ ಸುರೇಶ್ ಪ್ರಭು ಅವರಿಗೆ ದೂರು ನೀಡಿದ ಬಗ್ಗೆ ಟ್ವೀಟ್.
Actn tkn on ur compl. Fine of Rs.10000/- imposed on concernd licn. Instructd for Pest Ctrl in kitchen @RailMinIndia https://t.co/eaWi5Mi3NR
— RB EDTNC (@IR_EDTNC) January 4, 2016 * 24X7 ಕಾರ್ಯ ನಿರ್ವಹಿಸುವ ಹೋಟೆಲ್ ಗಳಾಗಿವೆ.
* ಜನತಾ ಊಟ, ಎಕಾನಮಿ ಊಟ, ಪ್ರಾದೇಶಿಕ ವಿಶೇಷ ಊಟ ಸಿಗಲಿದೆ. ಗರಿಷ್ಠ ದರ 20 ರು ಆಗಲಿದೆ.
* ಇದರಲ್ಲಿ ಊಟ ಮತ್ತು ಸ್ಥಳೀಯ ಆಹಾರಗಳ ಜತೆಗೆ ಐಸ್ಕ್ರೀಂ, ಜ್ಯೂಸ್, ಟೀ, ಕಾಫಿ ಕೂಡ ಲಭ್ಯವಿರಲಿದೆ.












Click it and Unblock the Notifications