ಕಂಗನಾ ರನೌತ್ ಜೊತೆ ಬಾಲಿವುಡ್ ಕಾಲಿಟ್ಟ ಇವರು, ಈಗ ಸಂಸತ್ತಿಗೂ ಕಾಲಿಡುತ್ತಿದ್ದಾರೆ; ಯಾರು ಗೊತ್ತಾ ಆ ಯುವ ನಾಯಕ?
ನವದೆಹಲಿ, ಜೂನ್. 09: ತಂದೆ ಒಬ್ಬ ದೊಡ್ಡ ರಾಜಕೀಯ ನಾಯಕ, ಪ್ರಭಾವಿ ಕುಟುಂಬ ಆದರೂ ಕೂಡ ರಾಜಕೀಯಕ್ಕಿಂತ ಹೆಚ್ಚು ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆಯಿಂದ ಹೀರೋ ಆಗಿ ಸೋತು, ಹಲವು ವರ್ಷಗಳ ಪ್ರಯತ್ನದಿಂದ ಸದ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಈ ನಟ.
ಹೌದು... ಬಿಹಾರದ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾದ ಚಿರಾಗ್ ಪಾಸ್ವಾನ್ ಅವರು 6.14 ಲಕ್ಷ ಮತಗಳೊಂದಿಗೆ ಭರ್ಜರಿ ಜಯ ಸಾಧಿಸಿದ್ದಾರೆ. ತಮ್ಮ ಹತ್ತಿರದ ಆರ್‌ಜೆಡಿ ಪ್ರತಿಸ್ಪರ್ಧಿಯನ್ನು 1.7 ಲಕ್ಷ ಮತಗಳಿಂದ ಸೋಲಿಸಿದ್ದಾರೆ.

ಬಿಹಾರದ ಹಾಜಿಪುರದಿಂದ ಸ್ಪರ್ಧಿಸುವುದು ನಿಜಕ್ಕೂ ಚಿರಾಗ್ ಪಾಸ್ವಾನ್ ಅವರ ದೊಡ್ಡ ನಿರ್ಧಾರವಾಗಿತ್ತು. ಏಕೆಂದರೆ, ಇದು ಅವರ ದಿವಂಗತ ತಂದೆ, ಬಿಹಾರದ ಅತಿ ದೊಡ್ಡ ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ಕ್ಷೇತ್ರ. ಇಲ್ಲಿಂದಲೆ ಅವರು ಬರೋಬ್ಬರಿ ಎಂಟು ಬಾರಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.
ಯುವ ನಾಯಕನ ನೇತೃತ್ವದಲ್ಲಿ ಎಲ್‌ಜೆಪಿ
ಯುವ ನಾಯಕ ಚಿರಾಗ್ ಪಾಸ್ವಾನ್ ಅವರ ನಾಯಕತ್ವದಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಬಿಹಾರದಲ್ಲಿ ಸ್ಪರ್ಧಿಸಿದ ಎಲ್ಲಾ ಐದು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಪ್ರದರ್ಶನವನ್ನು ನೀಡಿದೆ. ಚಿರಾಗ್ ಮತ್ತು ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪರಾಸ್ ನೇತೃತ್ವದಲ್ಲಿ ಎಲ್‌ಜೆಪಿ ಅನ್ನು ಎರಡು ಬಣಗಳಾಗಿ ಒಡೆದು ಹೋಗಿವೆ. ದೊಡ್ಡ ಕಲಹದ ಬಳಿಕವೂ ಚಿರಾಗ್ ನೇತೃತ್ವದಲ್ಲಿ ದೊಡ್ಡ ಗೆಲುವು ಕಂಡಿದೆ.
ಬಾಲಿವುಡ್ ನಟನಾಗಿದ್ದ ಚಿರಾಗ್ ಪಾಸ್ವಾನ್
ಬಾಲಿವುಡ್ ನಟ ಚಿರಾಗ್ ಪಾಸ್ವಾನ್ ಅವರು ಒಂದು ದಶಕದ ಹಿಂದೆ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಬಾಲಿವುಡ್‌ನಲ್ಲಿ ಅವರು 2011 ರ ಚಲನಚಿತ್ರ 'ಮಿಲೇ ನಾ ಮಿಲೇ ಹಮ್' ಚಿತ್ರದಲ್ಲಿ ನಟಿ, ನೂತನ ಸಂಸದೆ ಕಂಗನಾ ರನೌತ್ ಅವರೊಂದಿಗೆ ನಟಿಸಿದ್ದರು. ಆದರೆ, ಸಿನಿಮಾ ಪ್ಲಾಪ್ ಆಗಿತ್ತು. ಬಳಿಕ ರಾಜಕೀಯದತ್ತ ಗಮನ ಹರಿಸಿದರು.

ಚಿರಾಗ್ ಪಾಸ್ವಾನ್ ತನ್ನ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ಮಾರ್ಗದರ್ಶನದಲ್ಲಿ, 2014 ರಲ್ಲಿ ಜಮುಯಿಯಿಂದ ಲೋಕಸಭೆಗೆ ಪಾದಾರ್ಪಣೆ ಮಾಡಿದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಥಾನವನ್ನು ಉಳಿಸಿಕೊಂಡರು. 2020 ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರ ಸಾವಿನ ನಂತರ, ಚಿರಾಗ್ ಪಾಸ್ವಾನ್ ಮತ್ತು ಅವರ ಚಿಕ್ಕಪ್ಪ ಪಶುಪತಿ ಪಾರಸ್ ನಡುವೆ ಕೌಟುಂಬಿಕ ಮತ್ತು ರಾಜಕೀಯ ಬಿರುಕು ಕಂಡಿತು.
ಈ ಸವಾಲುಗಳ ಹೊರತಾಗಿಯೂ, 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ತಮ್ಮ ಪಕ್ಷವನ್ನು ಮುನ್ನಡೆಸಿದರು, ಎನ್‌ಡಿಎಯಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸಲು ಆಯ್ಕೆ ಮಾಡಿದರು. ಆದರೆ, ಅಂತಹ ಗೆಲುವು ಸಿಗಲಿಲ್ಲ. ಆದರೆ, ಜೆಡಿಯು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅವರ ತಂತ್ರವು ನಿತೀಶ್ ಕುಮಾರ್ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡಿತು. 2015 ರಲ್ಲಿ 70 ಸ್ಥಾನ ಗಳಿಸಿದ್ದ ಜೆಡಿಯು 2020 ರಲ್ಲಿ ಕೇವಲ 43 ಕ್ಕೆ ಇಳಿಯಿತು.
2021 ರಲ್ಲಿ, ಚಿರಾಗ್ ಪಾಸ್ವಾನ್ ಮತ್ತು ಅವರ ಚಿಕ್ಕಪ್ಪನ ನಡುವಿನ ಜಗಳದಿಂದ ಎಲ್‌ಜೆಪಿ ಎರಡು ಬಣಗಳಾಯಿತು. ಆರು ಎಲ್‌ಜೆಪಿ ಸಂಸದರಲ್ಲಿ ಐವರನ್ನು ಪಶುಪತಿ ಪಾರಸ್ ತನ್ನೊಂದಿಗೆ ಕರೆದೊಯ್ದರು. ಚಿರಾಗ್ ಜೊತೆಗೆ ಕೇವಲ ಒಬ್ಬ ಸಂಸದ ಉಳಿದುಕೊಂಡರು. ಬಿಜೆಪಿ ಆರಂಭದಲ್ಲಿ ಪಶುಪತಿ ಪಾರಸ್ ಅವರನ್ನು ಕೇಂದ್ರ ಸಚಿವರನ್ನಾಗಿ ನೇಮಿಸಿತು. ಆದರೂ, ಚಿರಾಗ್ ಪಾಸ್ವಾನ್ ಮಾತ್ರ ನರೇಂದ್ರ ಮೋದಿ ಅವರಿಗೆಯೇ ಬೆಂಬಲ ನೀಡಿದ್ದರು.
ಇದಾದ ಬಳಿಕ ಚಿರಾಗ್ ಪಾಸ್ವಾನ್ "ಆಶೀರ್ವಾದ್ ಯಾತ್ರೆ" ಎಂಬ ಅಭಿಯಾನವನ್ನು ಪ್ರಾರಂಭಿಸಿದರು, ಇದು ಬಿಹಾರದಾದ್ಯಂತ ಬೃಹತ್ ಬೆಂಬಲವನ್ನು ಗಳಿಸಿತು. ಚಿರಾಗ್ ಪಾಸ್ವಾನ್ ಪ್ರಭಾವವನ್ನು ಗುರುತಿಸಿದ ಬಿಜೆಪಿ ಅವರನ್ನು 2023 ರಲ್ಲಿ ಎನನಡಿಎಗೆ ಮತ್ತೆ ಸೇರಿಸಿಕೊಂಡಿತು. ಸೀಟು ಹಂಚಿಕೆಯಲ್ಲಿ ಹಾಜಿಪುರ ಸೇರಿದಂತೆ ಎಲ್ಲಾ ಐದು ಬಿಹಾರ ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿತು. ಈ ಗೆಲುವು ತನ್ನ ತಂದೆಯ ರಾಜಕೀಯ ಪರಂಪರೆಯ ನಿಜವಾದ ವಾರಸುದಾರ ಎಂಬ ಹಣೆಪಟ್ಟಿ ನೀಡಿತು. ಈಗ ಮೋದಿ ಕ್ಯಾಬಿನೇಟ್ ಸೇರುವ ಜೊತೆಗೆ ಚಿರಾಗ್ ಪಾಸ್ವಾನ್ ಬಿಹಾರದ ಆಚೆಗೂ ತನ್ನ ಪ್ರಭಾವ ಬೀರಲು ಸಜ್ಜಾಗಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications