Jammu And Kashmir Elections: ಕಾಂಗ್ರೆಸ್-ನ್ಯಾಷನಲ್ ಕಾನ್ಸರೆನ್ಸ್ ಮೈತ್ರಿಕೂಟವು ಗೆದ್ದು ಅಧಿಕಾರಕ್ಕೆ ಎಂದ ಸಚಿವ: ಮೋದಿ ಕಿಡಿ

ನವದೆಹಲಿ, ಸೆಪ್ಟೆಂಬರ್‌ 21: ಜಮ್ಮು-ಕಾಶ್ಮೀರದಲ್ಲಿ ದಶಕ ನಂತರ ಇಂದು ಬುಧವಾರ ಮೊದಲ ಹಂತದ ಚುನಾವಣೆಗೆ ಮತದಾನ ನಡೆದಿದೆ. ಎರಡನೇ ಹಂತ ಹಾಗೂ ಮೂರನೇ ಹಂತದ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಸರೆನ್ಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಪಾಕಿಸ್ತಾನದ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿ, ಜಿಯೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಸರೆನ್ಸ್ ಮೈತ್ರಿಕೂಟವು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಹೆಚ್ಚಿನ ಅವಕಾಶ ಇದೆ ಎಂದು ಹೇಳಿದ್ದರು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ನ್ಯಾಷನಲ್ ಕಾನ್ಸರೆನ್ಸ್ (ಎನ್‌ಸಿ) ಮೈತ್ರಿಕೂಟ ಪ್ರಕಟಿಸಿದ ಪ್ರಣಾಳಿಕೆ ಕಂಡು ಪಾಕಿಸ್ತಾನ ಖುಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Khawaja Asif said Congress-National Congress alliance to power in Jammu and Kashmir

ಇನ್ನೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ನರೇಂದ್ರ ಮೋದಿ ಅವರು, ಕಾಂಗ್ರೆಸ್- ನ್ಯಾಷನಲ್ ಕಾನ್ಸರೆನ್ಸ್ ಮೈತ್ರಿಗೆ ಪಾಕಿಸ್ತಾನದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ ಅವರ ಪ್ರಣಾಳಿಕೆ ಕಂಡು ಪಾಕಿಸ್ತಾನಕ್ಕೆ ಸಂತೋಷವಾಗಿದೆ, ಬಹಿರಂಗವಾಗಿಯೇ ಅವರನ್ನು ಬೆಂಬಲಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯ ಮರುಸ್ಥಾಪನೆ ವಿಚಾರದಲ್ಲಿ ಪಾಕಿಸ್ತಾನದ ಶಹಬಾಜ್ ಷರೀಪ್ ಸರ್ಕಾರ ಹಾಗೂ ಕಾಂಗ್ರೆಸ್‌-ನ್ಯಾಷನಲ್ ಕಾನ್ಸರೆನ್ಸ್ ಮೈತ್ರಿಕೂಟ ಒಂದೇ ಪುಟದಲ್ಲಿವೆ ಎಂದು ಕಿಡಿಕಾರಿದರು.

ಕಾಂಗ್ರೆಸ್, ನ್ಯಾಷನಲ್ ಕಾನ್ಸರೆನ್ಸ್ ಮತ್ತು ಪಿಡಿಪಿ ರಾಜಕೀಯ ಲಾಭಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಯುವಕರ ಕೈಗೆ ಕಲ್ಲು ಕೊಟ್ಟು, ಅವರ ಭವಿಷ್ಯವನ್ನು ಹಾಳುಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಈ ಮೂರು ಕುಟುಂಬಗಳು ರಾಜ್ಯದ ಮತ್ತೊಂದು ಪೀಳಿಗೆಯನ್ನು ನಾಶಮಾಡಲು ನಾನು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಪ್ರತಿಜ್ಞೆ ಮಾಡಿದರು.

ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಪಿತೂರಿ ನಡೆಸುತ್ತಿರುವ ಪ್ರತಿಯೊಂದು ಶಕ್ತಿಯನ್ನು ಸೋಲಿಸಬೇಕು ಇಲ್ಲಿಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಮೋದಿಯವರ ಗ್ಯಾರಂಟಿ ಎಂದು ಪ್ರಧಾನಿ ಮೋದಿ ಹೇಳಿದರು. ಕಾಂಗ್ರೆಸ್, ಎನ್‌ಸಿ ಮತ್ತು ಪಿಡಿಪಿ ಎಂಬ ಮೂರು ಪಕ್ಷಗಳು ರಾಜವಂಶದ ರಾಜಕಾರಣ ಮಾಡುತ್ತವೆ ಎಂದು ಬಿಜೆಪಿ ಹೇಳಿಕೊಂಡಿದೆ. ಈ ಮೂರು ಕುಟುಂಬಗಳ ಕೈಯಲ್ಲಿ ನಮ್ಮ ಮುಂದಿನ ಪೀಳಿಗೆಯನ್ನು ನಾಶಮಾಡಲು ನಾನು ಬಿಡುವುದಿಲ್ಲ ಅದಕ್ಕಾಗಿಯೇ ನಾನು ಇಲ್ಲಿ ಶಾಂತಿಯನ್ನು ಮರುಸ್ಥಾಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+