ಕೊಲ್ಲಂನಲ್ಲಿ ಹೆತ್ತ ಮಗನನ್ನೇ ಕೊಂದ ತಾಯಿ!

ಕೊಲ್ಲಂ, ಜನವರಿ 19: ತಾನೇ ಹೆತ್ತ ಮಗನನ್ನು ತಾಯಿಯೊಬ್ಬಳು ಕೊಂದ ಘಟನೆ ಕೇರಳದ ಕೊಲ್ಲಂ ನಲ್ಲಿ ನಡೆದಿದ್ದು, ಇಂದು(ಜ.19) ಬೆಳಕಿಗೆ ಬಂದಿದೆ.

14 ವರ್ಷ ವಯಸ್ಸಿನ ಜಿತು ಎಂಬ ಬಾಲಕ ಕಾಣೆಯಾಗಿದ್ದಾನೆಂದು ಆತನ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಬಾಲಕನನ್ನು ಹುಡುಕಿ ಹೊರಟ ಪೊಲೀಸರಿಗೇ ಆಘಾತ ಕಾದಿತ್ತು! ತಾನೇ ಹೆತ್ತ ಮಗುವನ್ನು 43 ವರ್ಷದ ಮಹಿಳೆಯೊಬ್ಬರು ಸಾಯಿಸಿದ್ದಲ್ಲದೆ, ಮೃತ ದೇಹವನ್ನು ಕತ್ತರಿಸಿ, ಸುಟ್ಟಿದ್ದು ನಂತರ ಬೆಳಕಿಗೆ ಬಂದಿತ್ತು!

ವಿಚಾರಣೆಯ ವೇಳೆ ಮಹಿಳೆ ಆಡುತ್ತಿದ್ದ ಮಾತುಗಳು ಒಂದಕ್ಕೊಂದು ಸಂಬಂಧವೇ ಇಲ್ಲದಿದ್ದುದರಿಂದ ಅನುಮಾನಗೊಂಡ ಪೊಲೀಸರು, ಮಹಿಳೆಯನ್ನು ಕೂಲಂಕಷವಾಗಿ ವಿಚಾರಿಸಿದಾಗ, ತಾನೇ ಮಗನನ್ನು ಸಾಯಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.

Kerala: Woman murders son, arrested

ಆದರೆ ಕೊಲೆ ಮಾಡುವುದಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮೃತ ಜಿತು, ಕುಂದಾರಾ ಎಂಜಿಡಿ ಬಾಲಕರ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+