ಪ್ಲಾಸ್ಟಿಕ್‌ ವಾಟರ್‌ ಬಾಟಲ್‌ಗೆ ಬ್ರೇಕ್: ತಿಂಗಳಲ್ಲೇ ಮಣ್ಣಾಗುವ ಪರಿಸರಸ್ನೇಹಿ ನೀರಿನ ಬಾಟಲಿ ಪರಿಚಯಿಸಿದ ಕೇರಳ ಸ್ಟಾರ್ಟಪ್

ನಾವು ಪ್ರತಿದಿನ ಬಳಸುವ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಪರಿಸರದಲ್ಲಿ ನಶಿಸಿಹೋಗಲು ನೂರಾರು ವರ್ಷಗಳೇ ಬೇಕಾಗುತ್ತವೆ. ಇದರಿಂದ ಭೂಮಿ ಹಾಗೂ ಜಲಮೂಲಗಳು ತೀವ್ರ ಮಾಲಿನ್ಯವಾಗುತ್ತದೆ. ಈ ಜಾಗತಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇರಳ ಮೂಲದ 'ಗ್ರೀನ್ ಬಯೋ' ಸ್ಟಾರ್ಟಪ್ ಕಂಪೆನಿ ಮಹತ್ವದ ಹೆಜ್ಜೆಯಿಟ್ಟಿದೆ.

ನೈಸರ್ಗಿಕ ಸಸ್ಯಜನ್ಯ ಪದಾರ್ಥಗಳನ್ನ ಬಳಸಿ ಕೇವಲ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣವಾಗಿ ಮಣ್ಣಿನಲ್ಲಿ ಕರಗಿಹೋಗುವ ಪರಿಸರಸ್ನೇಹಿ ನೀರಿನ ಬಾಟಲಿಗಳನ್ನ ಈ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ವಿನೂತನ ಆವಿಷ್ಕಾರದ ವಿವರಗಳನ್ನು ಆಯುಷ್ ಸಿಂಗ್ ಕುಮಾರ್ ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪರಿಸರ ಪ್ರೇಮಿಗಳ ಗಮನ ಸೆಳೆದಿದೆ.

Kerala Startup Green Bio Introduces Plant-Based Water Bottles That Decompose In Just Six Months

ಗ್ರೀನ್ ಬಯೋ ಸಂಸ್ಥೆಯು 'ಪಾಲಿಲ್ಯಾಕ್ಟಿಕ್ ಆಸಿಡ್' ಎಂಬ ಸಸ್ಯ ಆಧಾರಿತ ಬಯೋಪ್ಲಾಸ್ಟಿಕ್ ಬಳಸಿ ಈ ಬಾಟಲಿಗಳನ್ನು ವಿನ್ಯಾಸಗೊಳಿಸಿದೆ. ಮುಸುಕಿನ ಜೋಳ ಮತ್ತು ಕಬ್ಬಿನಂತಹ ನವೀಕರಿಸಬಹುದಾದ ನೈಸರ್ಗಿಕ ಕೃಷಿ ಮೂಲಗಳಿಂದ ಈ ಪಿಎಲ್‌ಎ ಕಚ್ಚಾವಸ್ತುವನ್ನ ಪಡೆಯುತ್ತಾರೆ.

ನೋಡಲು ಮತ್ತು ಬಳಸಲು ಸಾಮಾನ್ಯ ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನಂತೆಯೇ ಗಟ್ಟಿಯಾಗಿರುವ ಈ ಬಾಟಲಿಯ ಮುಚ್ಚಳ, ಲೇಬಲ್ ಹಾಗೂ ಬಾಟಲಿಯ ಮೈಭಾಗ ಎಲ್ಲವೂ 100% ಕಾಂಪೋಸ್ಟೆಬಲ್ ಆಗಿರುವುದು ಇದರ ವಿಶೇಷತೆಯಾಗಿದೆ. ಪೆಟ್ರೋಲಿಯಂ ಆಧಾರಿತ ಸಾಂಪ್ರದಾಯಿಕ ಪ್ಲಾಸ್ಟಿಕ್‌ಗೆ ಇದು ಸುರಕ್ಷಿತ ಪರ್ಯಾಯವಾಗಿದೆ.

180 ದಿನಗಳಲ್ಲಿ ಮಣ್ಣಾಗುವ ಮಾದರಿ

ಸಾಮಾನ್ಯ ಪ್ಲಾಸ್ಟಿಕ್ ಭೂಮಿಯ ಮೇಲೆ ಶತಮಾನಗಳ ಕಾಲ ಉಳಿದು ಮಣ್ಣಿನ ಫಲವತ್ತತೆ ಹಾಳುಮಾಡಿದರೆ, ಈ ಪಿಎಲ್‌ಎ ಬಾಟಲಿಗಳು ನಿಯಂತ್ರಿತ ಕೈಗಾರಿಕಾ ಕಾಂಪೋಸ್ಟಿಂಗ್ ಪರಿಸ್ಥಿತಿಯಲ್ಲಿ ಸುಮಾರು 180 ದಿನಗಳಲ್ಲಿ (ಆರು ತಿಂಗಳು) ಸಂಪೂರ್ಣವಾಗಿ ಕರಗಿ ಹೊಂದುತ್ತವೆ. ಈ ಪ್ರಕ್ರಿಯೆಯ ನಂತರ ಯಾವುದೇ ಹಾನಿಕಾರಕ ರಾಸಾಯನಿಕಗಳು ಉಳಿಯದೆ, ಕೇವಲ ನೀರು, ಇಂಗಾಲದ ಡೈಆಕ್ಸೈಡ್ (CO2) ಮತ್ತು ನೈಸರ್ಗಿಕ ಬಯೋಮಾಸ್ ಆಗಿ ಮಣ್ಣಿನಲ್ಲಿ ವಿಲೀನಗೊಳ್ಳುತ್ತವೆ.

ಆದರೆ, ಈ ಬಾಟಲಿಗಳನ್ನು ಕಸದ ಗುಂಡಿಗಳಿಗೆ, ನದಿಗಳಿಗೆ ಅಥವಾ ಸಮುದ್ರಗಳಿಗೆ ಎಸೆದರೆ ಅವು ತಾನಾಗಿಯೇ ಆರು ತಿಂಗಳಲ್ಲಿ ಕರಗುವುದಿಲ್ಲ. ಏಕೆಂದರೆ, ಪಿಎಲ್‌ಎ ವಸ್ತುಗಳು ನೈಸರ್ಗಿಕವಾಗಿ ಕೊಳೆಯಲು ನಿರ್ದಿಷ್ಟ ತಾಪಮಾನ, ತೇವಾಂಶ ಮತ್ತು ಸೂಕ್ಷ್ಮಾಣುಜೀವಿಗಳ ನಿಯಂತ್ರಿತ ಪರಿಸರ ಅತ್ಯಗತ್ಯ.

ಕೇವಲ ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುವನ್ನ ಆವಿಷ್ಕರಿಸುವುದು ಅರ್ಧದಷ್ಟು ಪರಿಹಾರ ಮಾತ್ರ. ಬಳಕೆಯ ನಂತರ ಆ ಬಾಟಲಿಗಳನ್ನ ಪ್ರತ್ಯೇಕವಾಗಿ ಸಂಗ್ರಹಿಸಿ, ಕೈಗಾರಿಕಾ ಕಾಂಪೋಸ್ಟಿಂಗ್ ಘಟಕಗಳಿಗೆ ಕಳುಹಿಸುವ ವ್ಯವಸ್ಥಿತ ಮೂಲಸೌಕರ್ಯವನ್ನ ನಿರ್ಮಿಸುವುದು ಅಷ್ಟೇ ಮುಖ್ಯವಾಗಿದೆ. ಒಟ್ಟಾರೆಯಾಗಿ, ಕೇರಳದ ಈ ಸ್ಟಾರ್ಟಪ್ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಒಂದು ಭರವಸೆಯ ಹೆಜ್ಜೆಯಿಟ್ಟಿದ್ದು, ಪ್ಲಾಸ್ಟಿಕ್ ಮುಕ್ತ ಭವಿಷ್ಯಕ್ಕೆ ಹೊಸ ಆಶಾಕಿರಣ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+